ADVERTISEMENT

ಕೋಟಿ ಚೆನ್ನಯ ಮೂಲ ಸ್ಥಾನ: ಧನ್ವಂತರಿ ಮಹಾಯಾಗ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 6:23 IST
Last Updated 2 ಜನವರಿ 2017, 6:23 IST

ಪುತ್ತೂರು: ತುಳು ನಾಡಿನ ಅವಳಿ ವೀರರಾದ ಕೋಟಿ– ಚೆನ್ನಯರು ಮತ್ತು ದೇಯಿ ಬೈದೆತಿ ಮೂಲಸ್ಥಾನ, ಪಡು ಮಲೆಯ ಗೆಜ್ಜೆಗಿರಿ ನಂದನ ಬಿತ್ಲ್‌ನಲ್ಲಿ 3 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಗಳು ನಡೆದವು.

ಧನ್ವಂತರಿ ಮಹಾಯಾಗ, ಲಘು ವಿಷ್ಣು ಯಾಗ, ಭೂ ವರಾಹ ಹೋಮ, ಬಾಲಾಲಯ ವಾಸ್ತು ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮ ಗಳು ಗುರುವಾರ ರಾತ್ರಿಯಿಂದ ಆರಂಭ ಗೊಂಡು ಶನಿವಾರ ರಾತ್ರಿಯವರೆಗೆ ನಡೆ ಯಿತು. ಭಾನುವಾರ ಮುಂಜಾನೆ ಬಾಲಾ ಲಯ ಪ್ರತಿಷ್ಠೆ ನಡೆಯಲಿದೆ.

2017ರ ಫೆ.17ರಂದು ಆದಿ ದೈವ ಧೂಮಾವತಿ, ಕುಪ್ಪೆ ಪಂಜುರ್ಲಿ ದೈವ ಸ್ಥಾನ, ಗುರು ಸಾಯನ ಬೈದ್ಯರು- ಮಾತೆ ದೇಯಿ ಬೈದೆತಿ ಧರ್ಮಚಾವಡಿ, ಕೋಟಿ- ಚೆನ್ನಯ ಮೂಲಸ್ಥಾನ ಗರಡಿ, ಮಾತೆಯ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಇತ್ಯಾದಿಗಳಿಗೆ ಶಿಲಾನ್ಯಾಸ ನಡೆಯಲಿದ್ದು, ಇದಕ್ಕೆ ಪೂರ್ವಭಾವಿ ಯಾಗಿ, ಕ್ಷೇತ್ರ ಚೈತನ್ಯ ವೃದ್ಧಿಗಾಗಿ ಧಾರ್ಮಿಕ ವಿಧಿ ನಡೆಸಲಾಯಿತು.

ಗುರುವಾರ ಸಂಜೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ಲಕ್ಷ ಧನ್ವಂತರಿ ಜಪ ಆರಂಭಗೊಂಡಿತು. ಶುಕ್ರ ವಾರ ನಸುಕಿನ ಜಾವ ಧನ್ವಂತರಿ ಮಹಾ ಯಾಗ ಆರಂಭಗೊಂಡು ಮಧ್ಯಾಹ್ನ ಒಂದೂವರೆ ಗಂಟೆಗೆ ಪೂರ್ಣಾಹುತಿ ನೀಡಲಾಯಿತು. ಕ್ಷೇತ್ರದ ತಂತ್ರಿ ಲೋಕೇಶ್ ಶಾಂತಿ ಅವರ ನೇತೃತ್ವ ದಲ್ಲಿ ಸುಮಾರು ನೂರರಷ್ಟು ಶಾಂತಿ ಪುರೋ ಹಿತರು ಲಕ್ಷ ಜಪ ಮತ್ತು ಮಹಾ ಯಾಗದಲ್ಲಿ ಪಾಲ್ಗೊಂಡರು.

ಪುರೋಹಿತ ಉಮೇಶ್ ಶರ್ಮಾ ಸಹಕರಿಸಿದರು. ಅಶ್ವತ್ಥ ಎಲೆ, ಅಮೃತಬಳ್ಳಿ, ಎಕ್ಕಮಾಲೆ, ಪಾಲಶ, ಶಮೀ, ಗರಿಕೆ, ಕ್ಷೀರಾನ್ನ, ಪರಮಾನ್ನ, ಪಾಯಸ, ನವಧಾನ್ಯ, ತ್ರಿ ಮಧು ಕಮಲ ಪುಷ್ಪ, ತುಪ್ಪ ಸೇರಿದಂತೆ 32 ಬಗೆಯ ದ್ರವ್ಯಗಳನ್ನು ಹತ್ತು ಸಾವಿರ ಆಹುತಿ ನೀಡುವ ಕಾರ್ಯಕ್ರಮ ನಡೆಯಿತು. ಶನಿವಾರ ಮುಂಜಾನೆ ಕ್ಷೇತ್ರ ದಲ್ಲಿ ಲಘು ವಿಷ್ಣುಯಾಗ ಆರಂಭ ಗೊಂಡು ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು. ಸಂಜೆ ಭೂವರಾಹ ಹೋಮ ಮತ್ತು ಬಾಲಾಲಯದಲ್ಲಿ ವಾಸ್ತು ಹೋಮ ನಡೆಯಿತು.

ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ ಮತ್ತು ಹೊಸ್ಮಾರು ಬಲ್ಯೊಟ್ಟು ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀ ಜಿ, ಕ್ಷೇತ್ರದ ತಂತ್ರಿ ಲೋಕೇಶ್ ಶಾಂತಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಣ ಶಾಂತಿ, ಕ್ಷೇತ್ರಾ ಡಳಿತ ಮಂಡಳಿ ಅಧ್ಯಕ್ಷ ಚಿತ್ತರಂಜನ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.