ADVERTISEMENT

ತಂದೆಯ ಕೊಲೆ:- ಮಗನ ಬಂಧನ

ಉಪ್ಪಿನಂಗಡಿ: ಆಸ್ತಿ ತಕರಾರು ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:55 IST
Last Updated 18 ಜನವರಿ 2017, 5:55 IST
ತಂದೆಯ ಕೊಲೆ:- ಮಗನ ಬಂಧನ
ತಂದೆಯ ಕೊಲೆ:- ಮಗನ ಬಂಧನ   

ಉಪ್ಪಿನಂಗಡಿ: ಆಸ್ತಿ ತಕರಾರು ಸಂಬಂ ಧಿಸಿ ತಂದೆಯನ್ನೇ ಕೊಲೆ ಮಾಡಿದ ಆರೋಪಿ ಮಗನನ್ನು ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ ಪೊಲೀಸರು ಮತ್ತು ಉಪ್ಪಿನಂಗಡಿ ಪೊಲೀಸ್ ತಂಡ ನಡೆಸಿದ ಯಶಸ್ವಿ ಜಂಟಿ ಕಾರ್ಯಾಚರಣೆಯಲ್ಲಿ ಉಪ್ಪಿ ನಂಗಡಿ ಸಮೀಪ ಗಡಿಯಾರ ಎಂಬಲ್ಲಿ ಮಂಗಳವಾರ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ಉಪ್ಪಿನಂಗಡಿ ರಾಮನಗರ ಕುದ್ಲೂರು ನಿವಾಸಿ ಅಬೂ ಬಕ್ಕರ್ (35). ಆರೋಪಿ ಅಬೂಬಕ್ಕರ್ ಶನಿವಾರ ತನ್ನ ತಂದೆ ಆದಂ ಅವರಿಗೆ ರಾಡ್‌ನಿಂದ ಹಲ್ಲೆ ನಡೆಸಿದ್ದು, ಆದಂ ಭಾನುವಾರ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದ.

ಆರೋಪಿ ಅಬೂಬಕ್ಕರ್ ಮಂಗಳ ವಾರ ಬೆಳಿಗ್ಗೆ ಬೆಂಗಳೂರಿಗೆ ಪರಾರಿ ಆಗುವ ಯತ್ನದಲ್ಲಿ ಇದ್ದಾಗ ಗಡಿಯಾರ ಬಸ್‌ ನಿಲ್ದಾಣದ ಬಳಿ ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್‌ ಬೊರಸೆ ನೇತೃತ್ವದಲ್ಲಿ ಉಪ್ಪಿ ನಂಗಡಿ ಸರ್ಕಲ್ ಇನ್‌ಸ್ಪೆಕ್ಟರ್‌ ಅನಿಲ್ ಕುಲಕರ್ಣಿ, ಅಪರಾಧ ಪತ್ತೆ ದಳದ ಅಮಾನುಲ್ಲ ನೇತೃತ್ವದ ವಿಶೇಷ ಪೊಲೀಸ್ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿ ಸಂಜೀವ ಪುರುಷ, ಲಕ್ಷ್ಮಣ ಕೆ.ಜಿ., ಇಕ್ಬಾಲ್, ಪಳನಿವೇಲು, ಉದಯ ರೈ, ತಾರಾನಾಥ, ಸತೀಶ್ಚಂದ್ರ, ವಿಜಯ ಗೌಡ, ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿ ದೇವದಾಸ, ಇರ್ಷಾದ್ ಪಡಂಗಡಿ, ಸಚಿನ್ ಭಾಗವಹಿಸಿದ್ದರು.

ಪ್ರಶಂಸೆ, ಬಹುಮಾನ: ತಲೆಮರೆಸಿ ಕೊಂಡಿದ್ದ ಕೊಲೆ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷರು ಪ್ರಶಂಸೆ ಪತ್ರ ಮತ್ತು ನಗದು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.