ADVERTISEMENT

ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ಸಭೆ: ಭರವಸೆ

ಕಂದಾಯ ಅಧಿಕಾರಿಗಳ ಕಾರ್ಯವೈಖರಿಗೆ ತಾ.ಪಂ. ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:53 IST
Last Updated 8 ಫೆಬ್ರುವರಿ 2017, 6:53 IST
ಮಂಗಳೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹ್ಮದ್‌ ಮೋನು ಮಾತನಾಡಿದರು. 	ಪ್ರಜಾವಾಣಿ ಚಿತ್ರ
ಮಂಗಳೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹ್ಮದ್‌ ಮೋನು ಮಾತನಾಡಿದರು. ಪ್ರಜಾವಾಣಿ ಚಿತ್ರ   

ಮಂಗಳೂರು:  ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಗಳು ವಿಳಂಬವಾ ಗುತ್ತಿದ್ದು, ಈ ಬಗ್ಗೆ ಚರ್ಚಿಸಲು ಸಭೆಗೂ ಅಧಿಕಾರಿಗಳು ಬರುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು, ತಾಲ್ಲೂಕಿನ ಕಂ ದಾಯ ಇಲಾಖೆಯಲ್ಲಿ ಕೆಲಸಗಳು ವಿಳಂ ಬವಾಗುತ್ತಿವೆ. ಜನರು ತೊಂದರೆ ಅನುಭ ವಿಸುವಂತಾಗಿದೆ ಎಂದು ದೂರಿದರು.

ಕಳೆದ ಸಭೆಯಲ್ಲೂ ಕಂದಾಯ ಇಲಾ ಖೆಗೆ ಸಂಬಂಧಿಸಿದ ವಿಷಯಗಳೇ ಹೆಚ್ಚು ಚರ್ಚೆಯಾಗಿವೆ. ತಹಶೀಲ್ದಾರರು ಸೇರಿ ದಂತೆ ಕಂದಾಯ ಅಧಿಕಾರಿಗಳಿಗೆ ಸಭೆಗೆ ಬರಲು ತಿಳಿಸಿದ್ದರೂ, ಗೈರು ಹಾಜರಾ ಗಿದ್ದಾರೆ. ಹೀಗಾದರೆ, ಸಭೆಯನ್ನು ನಡೆ ಸುವುದಾದರೂ ಏಕೆ? ಅಧಿಕಾರಿಗಳು ಭಾಗವಹಿಸದಿದ್ದರೆ, ಜನಪ್ರತಿನಿಧಿಗಳು ಏನು ಮಾಡಬೇಕು ಎಂದು ಸದಸ್ಯ ಶಶಿ ಕಲಾ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಸಭೆಗೆ ಬಾರದೇ ಸದಸ್ಯರನ್ನು ಕಡೆಗಣಿಸುತ್ತಿದ್ದು, ನಾವಾ ದರೂ ಏಕೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಸದಸ್ಯ ನಾಗೇಶ್‌ ಶೆಟ್ಟಿ ಕೇಳಿದರು.

ಮಧ್ಯ ಪ್ರವೇಶಿಸಿದ ತಾಲ್ಲೂಕು ಪಂ ಚಾಯಿತಿ ಅಧ್ಯಕ್ಷ ಮೊಹ್ಮದ್‌ ಮೋನು, ಸಾಮಾನ್ಯ ಸಭೆ ಎರಡು ತಿಂಗಳಿಗೊಮ್ಮೆ ನಡೆಯುತ್ತದೆ. ಜನರ ಸಮಸ್ಯೆ ಪರಿಹ ರಿಸಲು ತಹಶೀಲ್ದಾರರು ಹಾಗೂ ಸಂಬಂ ಧಿಸಿದ ಅಧಿಕಾರಿಗಳ ಸಭೆಯನ್ನು ಕರೆ ಯುವುದಾಗಿ ಭರವಸೆ ನೀಡುವ ಮೂ ಲಕ ಚರ್ಚೆ ಮುಕ್ತಾಯ ಗೊಳಿಸಿದರು.

ಪಾವತಿಯಾಗದ ಬಿಲ್‌:  ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದವ ರಿಗೆ ಎರಡು ವರ್ಷವಾದರೂ ಬಿಲ್‌ ಪಾವತಿಯಾಗಿಲ್ಲ. ಈ ವರ್ಷವೂ ಕುಡಿ ಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕುಡಿಯುವ ನೀರಿಗೆ ಹಣ ಬಿಡುಗಡೆಯಾಗಿದೆ ಎಂದು ವರದಿ ತೋರಿಸಲಾಗುತ್ತಿದೆ. ಆದರೆ, ಹಣ ಮಾತ್ರ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮ ಪಂ ಚಾಯಿತಿಯವರು ಏನು ಮಾಡಬೇಕು ಎಂದು ಸದಸ್ಯರು ಖಾರವಾಗಿ ಪ್ರಶ್ನಿಸಿದರು.

ನೀರು ಪೂರೈಕೆ ಮಾಡಿದ ಟ್ಯಾಂಕರ್‌ಗಳ ಬಾಕಿ ಪಾವತಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಮೊಹ್ಮದ್ ಮೋನು ಭರವಸೆ ನೀಡಿದರು. ಉಪಾಧ್ಯಕ್ಷೆ ಪೂರ್ಣಿಮಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ಕುಟಿನೋ, ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

*
ರಂತಡ್ಕ ಮತ್ತು ನೀರೋಲ್ಪೆ ಅಂಗನವಾಡಿ ಕಟ್ಟಡಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
-ಸದಾನಂದ,
ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT