ADVERTISEMENT

‘ತುಳು ಬೇರು ಗಟ್ಟಿಯಾದರೆ ಎಲ್ಲ ಭಾಷೆಗಳೂ ಗಟ್ಟಿ’

ಬದಿಯಡ್ಕ: ಆಯನೊದಲ್ಲಿ ತುಳು ಸಾಹಿತ್ಯ ಸಮ್ಮೇಳನಪ್ರಜಾವಾಣಿ ವಾರ್ತೆ ಬದಿಯಡ್ಕ: ‘ತುಳು ಭಾಷೆಯು ಸುಸಂಸ್ಕೃತವಾದ ಜನಭಾಷೆಯಾಗಿದ್ದು, ಅನೇಕ ಭಾಷೆಗಳು ತುಳುವನ್ನು ಆಧರಿಸಿಕೊಂಡು ಬೆಳೆದಿದೆ. ತುಳು ತಾಯಿಯು ಕನ್ನಡ ಹಾಗೂ ಮಲಯಾಳಂ ಭಾಷೆಯ ಸೇವೆಯನ್ನು ಸಾಕಷ್ಟು ಮಾಡಿದ್ದಾಳೆ. ಇದಕ್ಕಾಗಿ ತನ್ನನ್ನು ತಾನು ದುಡಿಸಿಕೊಂಡಿದ್ದ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2016, 6:36 IST
Last Updated 13 ಡಿಸೆಂಬರ್ 2016, 6:36 IST

ಬದಿಯಡ್ಕ: ‘ತುಳು ಭಾಷೆಯು ಸುಸಂಸ್ಕೃತವಾದ ಜನಭಾಷೆಯಾಗಿದ್ದು, ಅನೇಕ ಭಾಷೆಗಳು ತುಳುವನ್ನು ಆಧರಿಸಿಕೊಂಡು ಬೆಳೆದಿದೆ. ತುಳು ತಾಯಿಯು ಕನ್ನಡ ಹಾಗೂ ಮಲಯಾಳಂ ಭಾಷೆಯ ಸೇವೆಯನ್ನು ಸಾಕಷ್ಟು ಮಾಡಿದ್ದಾಳೆ. ಇದಕ್ಕಾಗಿ ತನ್ನನ್ನು ತಾನು ದುಡಿಸಿಕೊಂಡಿದ್ದಾಳೆ. ತುಳು ಭಾಷೆಯ ಬೇರು ಗಟ್ಟಿಯಾದರೆ ಎಲ್ಲ ಭಾಷೆಗಳೂ ಗಟ್ಟಿಯಾಗುತ್ತದೆ’ ಎಂದು ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಹೇಳಿದರು.

ಸೋಮವಾರ ಬದಿಯಡ್ಕದ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದಲ್ಲಿ ಆರಂಭವಾದ 2 ದಿನಗಳ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಇತಿಹಾಸದಲ್ಲಿ ಪಳಂತುಳುವಿನ ಅನೇಕ ಕೃತಿಗಳು ಬಿಡುಗಡೆಯಾಗಿದ್ದು, ಅವುಗಳು ಧರ್ಮಸ್ಥಳ ಹಾಗೂ ಉಡುಪಿಯಲ್ಲಿವೆ. ಸಮಗ್ರ ತುಳುವಿನ ಸ್ವಲ್ಪ ಭಾಗ ಮಾತ್ರ ಸಮಾಜಕ್ಕೆ ಪರಿಚಯ ವಾಗಿದೆ. ಕೆದಂಬಾಡಿ ಜತ್ತಪ್ಪ ರೈ, ವೆಂಕಟರಾಜ ಪುಣಿಂಚಿತ್ತಾಯ ಮೊದ ಲಾದ ಹಿರಿಯ ತುಳು ವಿದ್ವಾಂಸರು ಇದನ್ನು ನೀಡಿದ್ದಾರೆ’ ಎಂದು ಹೇಳಿದರು
ಮಂಗಳೂರು ಆಕಾಶವಾಣಿ ಕಾರ್ಯ ಕ್ರಮ ನಿರ್ದೇಶಕ ಡಾ.ವಸಂತ ಕುಮಾರ ಪೆರ್ಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವೀಣೆಯ ಪ್ರಾಚೀನ ಹಂತವಾದ ಕಾಂತಗ ವಾದ್ಯ ಕಲಾವಿದ ಚೋಮ ಕಾಟುಕುಕ್ಕೆ ಹಾಗೂ ನಾಟಿ ಪ್ರಸೂತಿ ತಜ್ಞೆ ಕಮಲಾ ಸೊರ್ಕೊಡೆಲು ಅವರನ್ನು ಸನ್ಮಾನಿಸಲಾಯಿತು. ತುಳು ಸಾಹಿತ್ಯ ಸಮ್ಮೇಳನವನ್ನು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭೆಯಲ್ಲಿ ರಾಧಾಕೃಷ್ಣ ಉಳಿಯ ತ್ತಡ್ಕ, ಚಂದ್ರಹಾಸ ರೈ ಪೆರಡಾಲಗುತ್ತು, ಸದಾಶಿವ ರೈ ಬೆಳ್ಳಿಪ್ಪಾಡಿ, ಹರೀಶ ಆಚಾರ್ಯ ಕುಂಬಳೆ, ಮಾಹಿನ್ ಕಳೋಟ್, ಬಾಬು ಮಾಸ್ತರ್ ಕಡಂಬಾರು, ನಿರಂಜನ್ ರೈ, ಸಂಜೀವ ಶೆಟ್ಟಿ ಮಾಡ, ಮಹೇಂದ್ರನಾಥ ಸಾಲೆತ್ತೂರು, ಅಶೋಕ್ ಕುಮಾರ ಕಾಸರಗೋಡು ಇದ್ದರು. ಹರೀಶ್ ಸುಲಯ ಒಡ್ಡಂಬೆಟ್ಟು ಸ್ವಾಗತಿಸಿ, ಸನ್ನಿಧಿ ಟಿ ರೈ ಪೆರ್ಲ ಪ್ರಾರ್ಥಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.