ADVERTISEMENT

ತ್ಯಾಜ್ಯ ವಿಲೇವಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 9:22 IST
Last Updated 19 ಜುಲೈ 2017, 9:22 IST

ಉಳ್ಳಾಲ: ತ್ಯಾಜ್ಯ ಸಂಗ್ರಹಣಾ ಘಟಕ ದಲ್ಲಿ ಪ್ಲಾಸ್ಟಿಕ್ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ವಾರಕ್ಕೊಮ್ಮೆ ಪ್ಲಾಸ್ಟಿಕ್ ಕಸವನ್ನು ನೀಡುವಂತೆ ಆಗಿದೆ. ಗ್ರಾಮದಲ್ಲಿ ಇತ್ತೀಚೆಗೆ ಅಹಿತಕರ ಘಟನೆ ಗಳು ನಡೆಯುತ್ತಿದ್ದು ,ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಒತ್ತಾಯಿಸಿದರು.

ಸುಭಾಷನಗರದ ಸಮುದಾಯ ಭವನದಲ್ಲಿ ಮುನ್ನೂರು ಗ್ರಾಮ ಪಂಚಾ ಯಿತಿಯ 2017-18ರ ಪ್ರಥಮ ಸಾಲಿನ ಗ್ರಾಮಸಭೆಯಲ್ಲಿ ಮಂಗಳವಾರ ಮಾತ ನಾಡಿ, ‘ಮುನ್ನೂರು ಗ್ರಾಮದಲ್ಲಿನ ತ್ಯಾಜ್ಯ ಸಂಗ್ರಹಣಾ ಘಟಕ ಉತ್ತಮವಾಗಿ ಕಾರ್ಯಾಚರಿಸುತ್ತಿದ್ದು, ಕಸ ಸಂಗ್ರಹಣೆಗೆ ಎರಡು ವಾಹನ ಇವೆ. ಇದರಲ್ಲಿ  ತ್ಯಾಜ್ಯ ಸಂಗ್ರಹಿಸಲು ತೊಂದರೆಯಾಗುತ್ತಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ ಕ್ಕೊಮ್ಮೆ ತ್ಯಾಜ್ಯವನ್ನು ಲಾರಿಯಲ್ಲಿ ಕೊಂ ಡೊಯ್ಯುತ್ತಿದ್ದು, ಅದಕ್ಕಾಗಿ ಗ್ರಾಮಸ್ಥರು ವಾರಕ್ಕೆ ಒಂದು ಬಾರಿ ನೀಡಿದರೆ ವಿಲೇ ವಾರಿ ಸುಲಭವಾಗುತ್ತದೆ’ ಎಂದರು.

ತ್ಯಾಜ್ಯ ಘಟಕ ಇದ್ದರೂ, ಕಸ ವಿಲೇ ವಾರಿಗೆ ಪ್ರತಿ ತಿಂಗಳು ಸುಂಕ ಪಡೆಯು ತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕೊಂಡೊ ಯ್ಯುತ್ತಿಲ್ಲ ಎಂಬ ಗ್ರಾಮಸ್ಥರ ಆರೋಪಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮೇಲಿನಂತೆ ಪ್ರತಿಕ್ರಿಯಿಸಿದರು.

ADVERTISEMENT

ಮುನ್ನೂರು ಪಂಚಾಯಿತಿ ವ್ಯಾಪ್ತಿ ಯಲ್ಲಿ  ಎರಡು ಕೊಲೆಯತ್ನ ಪ್ರಕರಣಗಳು ನಡೆದಿದ್ದು, ಆರೋಪಿಗಳನ್ನು ಬಂಧಿಸಿಲ್ಲ. ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜನಸ್ನೇಹಿ ಕಾರ್ಯಕ್ರಮ ನಡೆಸದೇ ಇದ್ದುದರಿಂದ ಜನರ ಸಹ ಕಾರವೂ ಪೊಲೀಸರಿಗೆ ಸಿಗುತ್ತಿಲ್ಲ. ಇದ ರಿಂದಾಗಿ ಗ್ರಾಮದ ಜನರು ಭಯದಿಂದ ಸಂಚರಿಸಬೇಕಿದ್ದು, ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಪೊಲೀಸರಿಂದ ಆಗಬೇಕಿದೆ’ ಎಂದರು.

ಅಧ್ಯಕ್ಷೆ ರೂಪಾ.ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್  ಭಂ ಡಾರ ಬೈಲು, ನೋಡೆಲ್ ಅಧಿಕಾರಿ ಯಾಗಿ  ಶಿಕ್ಷಣ ಇಲಾಖೆಯ ಕ್ಷೇತ್ರ  ಸಂಪ ನ್ಮೂಲ ಅಧಿಕಾರಿ ದುರ್ಗಾಲತಾ,ಆಲ್ಫ್ರೆಡ್ ವಿಲ್ಮಾ ಡಿಸೋಜ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.