ADVERTISEMENT

ನಿರ್ಣಯ ಬದಲಿಸಿ ಟೆಂಡರ್: ಆಕ್ರೋಶ

ಸುಳ್ಯ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:29 IST
Last Updated 10 ಜನವರಿ 2017, 7:29 IST
ಸುಳ್ಯ: ಸಭೆಯಲ್ಲಿ ನಿರ್ಣಯ ಮಾಡಿದಂತೆ ಕ್ರಿಯಾ ಯೋಜನೆ ತಯಾರಿಸುತ್ತಿಲ್ಲ. ಸದಸ್ಯರ ಗಮನಕ್ಕೆ ಬಾರದಂತೆ ಕಾಮಗಾರಿ ಬದಲಾವಣೆ ಮಾಡಲಾಗಿದೆ. ಅದಕ್ಕೆ ಆಡಳಿತ ಮಂಜೂರಾತಿ ನೀಡಲು ಸಾಧ್ಯವಿಲ್ಲ. ಬದಲಾವಣೆ ಮಾಡಿದ ಕಾಮಗಾರಿಯನ್ನು ರದ್ದು ಮಾಡಬೇಕು ಎಂದು ಸುಳ್ಯ ಪಟ್ಟಣ ಪಂಚಾಯಿತಿ ಸದಸ್ಯರು ಆಗ್ರಹಿಸಿದ ಘಟನೆ ಸೋಮ ವಾರ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು.
 
ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆ ವಹಿಸಿದ್ದರು. ಉಪಾ ಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಚಂದ್ರಕುಮಾರ್ ವೇದಿ ಕೆಯಲ್ಲಿದ್ದರು. ಕಾಮಗಾರಿ ಬದಲಾವಣೆ ಮಾಡಿದ್ದು ಯಾರು? ಎಂದು ಸದಸ್ಯ ಕೆ.ಎಸ್.ಉಮ್ಮರ್ ಪ್ರಶ್ನಿಸಿದರು. ‘ನಾನು ಅಧ್ಯಕ್ಷೆ ಆಗುವ ಮೊದಲು ಆದ ಕ್ರಿಯಾ ಯೋಜನೆ. ಪ್ರತಿ ವಾರ್ಡಿ 8 ಲಕ್ಷದಂತೆ ಹಂಚಿಕೆ ಮಾಡಿ ಕಳೆದ ಜುಲೈ 30ರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ₹ 75 ಲಕ್ಷ ಕಾಮಗಾರಿಗಳನ್ನು ಕೇವಲ ಎರಡೇ ವಾರ್ಡಿಗೆ ನಿಗದಿ ಮಾಡಲಾಗಿದೆ ಇದು ಎಷ್ಟು ಸರಿ?’ ಎಂದು ಅವರು ಪ್ರಶ್ನಿಸಿದರು.
 
‘ನನ್ನ ಗಮನಕ್ಕೆ ಬಂದಿಲ್ಲ’ ಎಂದು ಅಧ್ಯಕ್ಷೆ ಶೀಲಾವತಿ ಹೇಳಿದರು. ‘ಅಧ್ಯಕ್ಷರ ಗಮನಕ್ಕೆ ಬಂದಿಲ್ಲ ಎಂದರೆ ಹೇಗೆ?’ ಎಂದು ಗೋಕುಲ್‌ದಾಸ್ ಪ್ರಶ್ನಿಸಿದರು. ‘ಅಧ್ಯಕ್ಷರಿಗೆ ಸ್ವಂತಿಕೆ ಬೇಕು’ ಎಂದು ಪ್ರೇಮಾ ಟೀಚರ್ ಹೇಳಿದರು. 
 
‘ಕಾಮಗಾರಿ ಬದಲಾವಣೆಯನ್ನು ಮಾಡಿದ್ದನ್ನು ಸ್ಥಾಯಿ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಒಪ್ಪಿಕೊಂಡಿದ್ದು, ಅದನ್ನು ಸರಿಪಡಿಸುವುದಾಗಿ ಹೇಳಿದ್ದರು. ಆದರೆ ಈಗ ಸರಿಪಡಿಸದೇ ಟೆಂಡರ್ ಕರೆಯ ಲಾಗಿದೆ’ ಎಂದು ಸದಸ್ಯರಾದ ಗಿರಿಶ್ ಕಲ್ಲುಗದ್ದೆ, ಗೋಪಾಲ ನಡುಬೈಲು ಹೇಳಿ ದರು. ‘ರದ್ದು ಮಾಡಿ’ ಎಂದು ಗೋಕು ಲ್‌ದಾಸ್, ರಮಾನಂದ ರೈ, ಕೆ.ಎಸ್.ಉಮ್ಮರ್ ಆಗ್ರಹಿಸಿದರು.
 
‘ಈಗ ಕಾಮಗಾರಿ ರದ್ದು ಮಾಡಿದರೆ ಹಣ ವಾಪಾಸ್ ಹೋಗುತ್ತದೆ. 14 ನೇ ಹಣಕಾಸು ಯೋಜನೆಯಲ್ಲಿ ಶೇ. 75ರಷ್ಟು ಕಾಮಗಾರಿ ಮಾಡದಿದ್ದರೆ ಮುಂದಿನ ವರ್ಷಕ್ಕೆ ಅನುದಾನ ಕಡಿತ ಗೊಳ್ಳುತ್ತದೆ. ಕಳೆದ ಮೂರು ವರ್ಷಗ ಳಿಂದಲೂ ಶೇ. 75ರಷ್ಟು ಕಾಮಗಾರಿ ನಡೆಯದೇ ಅನುದಾನ ಕಡಿಮೆ ಬರು ತ್ತಿದೆ. ಈ ಬಾರಿಯೂ ಟೆಂಡರ್ ರದ್ದು ಮಾಡಿದರೆ ಬರುವ ವರ್ಷ ಇನ್ನೂ ಕಡಿಮೆ ಬರಬಹುದು’ ಎಂದು ಎಂಜಿನಿ ಯರ್ ಶಿವಕುಮಾರ್ ತಿಳಿಸಿದರು.
 
ಹಣ ವಾಪಾಸ್ ಹೋದರೂ ತೊಂದರೆ ಇಲ್ಲ. ಅನುದಾನ ಕಡಿಮೆ ಬಂದರೂ ಅಡ್ಡಿ ಇಲ್ಲ. ನಿರ್ಣಯ ಬದಲಿಸಿ ಬಂದ ಅನುದಾನ ಎರಡೇ ವಾರ್ಡಿಗೆ ಇಟ್ಟಿದ್ದನ್ನು ವಾಪಾಸ್ ಪಡೆ ಯಲೇಬೇಕು ಎಂದು ರಮಾನಂದ ರೈ ಆಗ್ರಹಿಸಿದರು. ಅಧ್ಯಕ್ಷರಿಗೆ ಶೇ. 30ರಷ್ಟು ಅನುದಾನವನ್ನು ವಿವೇಚನೆಗೆ ನೀಡಲು ಹಿಂದಿನಿಂದಲೂ ಮೀಸಲಾಗಿಟ್ಟಿದ್ದು, ಅದರಂತೆ ಕ್ರಿಯಾಯೋಜನೆ ತಯಾರಿಸ ಲಾಗಿದೆ. ಈಗ ಅದನ್ನು ಬದಲಿಸುವುದು, ರದ್ದು ಮಾಡುವುದಕ್ಕೆ ತನ್ನ ಆಕ್ಷೇಪ ಇದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು.
 
**
ಮಾತಿನ ಚಕಮಕಿ
ಮೀನುಗಾರಿಕಾ ನಿಗಮದ ಮಾರಾಟ ಮಳಿಗೆಗೆ ಕನಿಷ್ಠ 20 ಸಾವಿರ ಬಾಡಿಗೆ ನಿಗದಿ ಮಾಡಬೇಕು ಎಂದು ಪ್ರಕಾಶ್ ಹೆಗ್ಡೆ ಹೇಳಿದರು. ಕಳೆದ 7 ವರ್ಷಗಳಿಂದ ಅವರು ನೀರಿನ ಬಿಲ್, ಒಳಚರಂಡಿ ಬಿಲ್ ಕೂಡಾ ಪಾವತಿಸುತ್ತಿಲ್ಲ. 20 ಸಾವಿರ ಕೊಡದಿದ್ದರೆ ಅವರ ಮಳಿಗೆಯನ್ನು ಮುಂದುವರಿಸುವುದು ಬೇಡ ಎಂದವರು ಸಲಹೆ ನೀಡಿದರು. ಶಾಸಕರು 15 ಸಾವಿರಕ್ಕೆ ನೀಡಲು ಸೂಚಿಸಿದ್ದಾಗಿ ಗೋಕುಲ್‌ದಾಸ್ ಹೇಳಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. 
 
ಶಾಸಕರು ‘ಯಾವುದೇ ಸಲಹೆ ನೀಡಿಲ್ಲ, ನಾನೇ ಹೇಳಿದ್ದು’ ಎಂದು ಅಧ್ಯಕ್ಷೆ ಶೀಲಾವತಿ ಮಾಧವ ಹೇಳಿದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.