ADVERTISEMENT

ನೆಕ್ಕೆರೆ ರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 9:15 IST
Last Updated 19 ಜುಲೈ 2017, 9:15 IST
ಪುತ್ತೂರಿನಿಂದ ಜಿಡೆಕಲ್ಲು ಮೂಲಕ ಬೆದ್ರಾಳಕ್ಕೆ ಹೋಗುವ ಸಂಪರ್ಕ ರಸ್ತೆಯ ನೆಕ್ಕರೆ ಬಳಿ ಮಳೆ ನೀರು ನಿಂತು ರಸ್ತೆಯೇ 'ಕೆರೆ'ಯಾಗಿ ಮಾರ್ಪಟ್ಟಿದೆ.
ಪುತ್ತೂರಿನಿಂದ ಜಿಡೆಕಲ್ಲು ಮೂಲಕ ಬೆದ್ರಾಳಕ್ಕೆ ಹೋಗುವ ಸಂಪರ್ಕ ರಸ್ತೆಯ ನೆಕ್ಕರೆ ಬಳಿ ಮಳೆ ನೀರು ನಿಂತು ರಸ್ತೆಯೇ 'ಕೆರೆ'ಯಾಗಿ ಮಾರ್ಪಟ್ಟಿದೆ.   

ಪುತ್ತೂರು: ಇಲ್ಲಿ ಮಳೆಗಾಲ ಬಂತೆಂದರೆ ಬಹುತೇಕ ರಸ್ತೆಗಳು ಕೆಸರುಗದ್ದೆಗಳಾಗಿ ಪರಿವರ್ತನೆಯಾಗುತ್ತವೆ. ಹೊಂಡ ಗುಂಡಿಗಳು ನಿರ್ಮಾಣವಾಗಿ ವಾಹನ ಮಾತ್ರವಲ್ಲದೆ ಜನರೂ ಸಂಚರಿಸಲು ಆಗದೇ ಸಮಸ್ಯೆ ಎದುರಾಗುತ್ತದೆ.... ಇದು ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ ಬರುವ ನೆಕ್ಕರೆ ಎಂಬಲ್ಲಿ ಜಿಡೆಕಲ್ಲು -ಬೆದ್ರಾಳ ರಸ್ತೆಯ ಅವ್ಯವಸ್ಥೆ.

ರಸ್ತೆಯಲ್ಲಿ ಮಳೆ ನೀರು ನಿಂತು ರಸ್ತೆಯೇ ‘ಕೆರೆ’ಯಾಗಿ ಮಾರ್ಪಟ್ಟಿದ್ದು, ಇದರ ಬದಿಯಲ್ಲಿಯೇ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ. ಮಳೆ ನೀರು ತುಂಬಿದ ಈ ರಸ್ತೆ ಭಾಗವನ್ನು ಬಿಟ್ಟು ಬದಿಯಲ್ಲಿ ವಾಹನ ಚಲಾಯಿ ಸಿಕೊಂಡು ಹೋಗಲು ಮುಂದಾದ ಕೆಲವರು ಈ ಹೊಂಡಕ್ಕೆ ಬಿದ್ದು ಗಾಯ ಗೊಂಡ ಘಟನೆ ಈಗಾಗಲೇ ನಡೆದಿದೆ.  

4 ವರ್ಷಗಳಿಂದ ಈ ರಸ್ತೆಯ ಸ್ಥಿತಿ ಹೀಗೆಯೇ ಮುಂದುವರಿದಿದ್ದು, ಈ ಬಗ್ಗೆ ಸ್ಥಳೀಯರು ಹಲವಾರು ಬಾರಿ ಸಂಬಂ ಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯ ಇಕ್ಕೆಲಗಳಲ್ಲಿ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲ. ಇದ್ದ ಚರಂಡಿಯನ್ನು ಮಣ್ಣು ಹಾಕಿ ಮುಚ್ಚ ಲಾಗಿದೆ. ಇದರಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ.

ADVERTISEMENT

ಇದೀಗ ಚಿಕ್ಕಮುಡ್ನೂರಿನ ‘ಕಲಿ ಯುಗ ಸೇವಾ ಸಮಿತಿ’ ಯವರು ನೆಕ್ಕರೆ ಭಾಗದಲ್ಲಿ ಜನರನ್ನು ಎಚ್ಚರಿಸುವ ಸಲು ವಾಗಿ ಬ್ಯಾನರ್ ಒಂದನ್ನು ಅಳವಡಿಸಿ ದ್ದಾರೆ. ‘ಇಲ್ಲಿನ ಸಮಸ್ಯೆಯನ್ನು ಸರಿಪಡಿ ಸಲು ಅಧಿಕಾರಿ ವರ್ಗ ಹಾಗೂ ಜನಪ್ರತಿ ನಿಧಿಗಳು ವಿಫಲವಾಗಿದ್ದಾರೆ’ ಎನ್ನುವ ಸಂದೇಶವನ್ನೂ ಜನರಿಗೆ ಮುಟ್ಟಿಸುವ ಪ್ರಯತ್ನ ಈ ಬ್ಯಾನರ್ ಮೂಲಕ ನಡೆ ದಿದೆ. ಈ ಭಾಗದ ನಗರಸಭೆಯ ಸದಸ್ಯ ಅನ್ವರ್ ಖಾಸಿಂ ಅವರನ್ನು ಎಚ್ಚರಿಸುವ ಪ್ರಯತ್ನವೂ ಈ ಬ್ಯಾನರ್ ಹಿಂದೆ ಇದೆ.

ಸ್ಪಂದಿಸದ ಜನಪ್ರತಿನಿಧಿಗಳು
‘ನೆಕ್ಕರೆ ಪ್ರದೇಶದ ರಸ್ತೆಯಲ್ಲಿ ಮಳೆ ನೀರು ನಿಂತು ಜನರು ಸಂಚರಿಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರಿಗೆ ಹಾಗೂ ನಗರಸಭೆಗೆ ದೂರು ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಕಲಿಯುಗ ಸೇವಾಸಮಿತಿ ಸದಸ್ಯ ಲಿಗೋರಿ ಸೆರಾವೋ.

* * 

ರಸ್ತೆಯಲ್ಲಿ ಕೆರೆ ನಿರ್ಮಾಣವಾಗಿ ಸಮಸ್ಯೆಯಾಗುತ್ತಿರುವ ಬಗ್ಗೆ ಎಲ್ಲರಿಗೂ ದೂರು ನೀಡಿದ್ದೇವೆ. 4 ವರ್ಷಗಳಿಂದ ದೂರು ಕೊಟ್ಟು ಸಾಕಾಗಿದೆ. ಇಲ್ಲಿ ಬಿದ್ದವರನ್ನು ಎಬ್ಬಿಸುವುದೇ ನಮ್ಮ ಕೆಲಸವಾಗಿದೆ ವಿಲಿಯಂ
ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.