ADVERTISEMENT

ನೇತಾಡುವ ತಂತಿಗಳಿಂದ ಕೊನೆಗೂ ಮುಕ್ತಿ

ನಗರದಲ್ಲಿ ಭರದಿಂದ ಸಾಗಿದ ಭೂಗತ ಕೇಬಲ್‌ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 12:44 IST
Last Updated 21 ಮಾರ್ಚ್ 2017, 12:44 IST
ಮಂಗಳೂರಿನಲ್ಲಿ ನಡೆಯುತ್ತಿರುವ ಭೂಗತ ಕೇಬಲ್‌ ಅಳವಡಿಕೆ ಕಾಮಗಾರಿ
ಮಂಗಳೂರಿನಲ್ಲಿ ನಡೆಯುತ್ತಿರುವ ಭೂಗತ ಕೇಬಲ್‌ ಅಳವಡಿಕೆ ಕಾಮಗಾರಿ   

ಮಂಗಳೂರು: ನೇತಾಡುವ ಹಳೆಯ ದಾದ ವಿದ್ಯುತ್‌ ತಂತಿ, ಬೀಳುವ ಸ್ಥಿತಿ ಯಲ್ಲಿರುವ ವಿದ್ಯುತ್‌ ಕಂಬಗಳು, ನಿತ್ಯ ಅವಘಡದ ಆತಂಕದಲ್ಲಿಯೇ ಓಡಾ ಡುವ ಅನಿವಾರ್ಯತೆ.

ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಗಿರುವ ನಗರದಲ್ಲಿ ವಿದ್ಯುತ್‌ ಪೂರೈಕೆ ವ್ಯವಸ್ಥೆಯ ಚಿಂತಾಜನಕ ಸ್ಥಿತಿಯ ಚಿತ್ರಣವಿದು. ನಗ ರದ ಬಹುತೇಕ ಪ್ರದೇಶಗಳಲ್ಲಿ ಹಳೆಯ ವ್ಯವಸ್ಥೆಯೇ ಇದೆ. ಕಂಬಗಳಿಗೆ ಅಳವ ಡಿಸಿದ ವಿದ್ಯುತ್‌ ತಂತಿಗಳು ನೇತಾಡು ತ್ತಲೇ ಇವೆ. ಹರಿದು ಬೀಳುವ ತಂತಿಗ ಳನ್ನು ಮರು ಜೋಡಣೆ ಮಾಡಿ, ಅದ ಕ್ಕೊಂದು ಪೈಪ್‌ ಹಾಕಿರುವ ದೃಶ್ಯಗಳೂ ಸಾಮಾನ್ಯವಾಗಿವೆ.

ವಿಪರೀತ ಮಳೆ, ಗಾಳಿ ಇರುವ ನಗ ರದಲ್ಲಿ ಹಳೆಯ ವ್ಯವಸ್ಥೆಗೆ ಪೂರ್ಣ ವಿರಾಮ ನೀಡಲು ಮೆಸ್ಕಾಂ ಸಜ್ಜಾಗಿದೆ. ವಿದ್ಯುತ್‌ ತಂತಿಗಳೇ ಕಾಣದ ರೀತಿಯಲ್ಲಿ ವಿದ್ಯುತ್‌ ಪೂರೈಕೆ ಮಾಡಲು ಯೋಜನೆ ಆರಂಭಿಸಿದೆ. ಇದರ ಪರಿಣಾಮವಾಗಿ ಭೂಗತ ಕೇಬಲ್‌ ಅಳವಡಿಕೆ ನಗರದ ವಿವಿಧೆಡೆ ಸದ್ದಿಲ್ಲದೇ ಆರಂಭಗೊಂಡಿದೆ.

ADVERTISEMENT

ನಗರದ ಎಲ್ಲೆಡೆ ಗಿಡಮರಗಳು ಹೆಚ್ಚಾಗಿವೆ. ಸ್ವಲ್ಪ ಗಾಳಿ ಬೀಸಿದರೂ, ಗಿಡ ರೆಂಬೆಗಳು ವಿದ್ಯುತ್‌ ತಂತಿಯ ಮೇಲೆ ಉರುಳುತ್ತವೆ. ಇಡೀ ದಿನ ಅದರ ದುರಸ್ತಿ ಮಾಡಬೇಕು. ಈ ಅವಧಿಯಲ್ಲಿ ವಿದ್ಯುತ್‌ ನಿಲುಗಡೆ ಮಾಡುವ ಅನಿವಾರ್ಯತೆ. ಹೀಗೆ ಸಮಸ್ಯೆಗಳ ಸರಮಾಲೆಯೇ ಆರಂ ಭವಾಗುತ್ತದೆ. ಇದರ ಜತೆಗೆ ಪ್ರತಿ ತಿಂ ಗಳು, ವಿದ್ಯುತ್‌ ತಂತಿಗೆ ತಗಲುವ ಗಿಡದ ರೆಂಬೆಗಳನ್ನು ಕತ್ತರಿಸುವ ಹೆಚ್ಚುವರಿ ಕೆಲಸ ಬೇರೆ. ಹೀಗಾಗಿ ನಗರದ ಜನರು ಭೂಗತ ಕೇಬಲ್‌ ಅಳವಡಿಸುವಂತೆ ಹಲ ವಾರು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.

ಉತ್ತರ ಕರ್ನಾಟಕದ ಹೆಸ್ಕಾಂ ಮತ್ತು ಜೆಸ್ಕಾಂ ಕಂಪೆನಿಗಳು ಈಗಾಗಲೇ ಭೂಗತ ಕೇಬಲ್‌ ಅಳವಡಿಕೆ ಮಾಡುವ ಮೂಲಕ ಸುರಕ್ಷಿತ ವಿದ್ಯುತ್‌ ಸರಬರಾಜು ಮಾಡುತ್ತಿವೆ. ಆದರೆ, ಬುದ್ಧಿವಂತರ ಜಿಲ್ಲೆ ಎಂದೇ ಹೆಸರಾಗಿರುವ ದಕ್ಷಿಣ ಕನ್ನಡ ದಲ್ಲಿ ಮಾತ್ರ ಈ ಕಾರ್ಯ ತುಸು ವಿಳಂಬವಾಗಿಯೇ ಆರಂಭವಾಗಿದೆ.

ಪ್ರಥಮ ಹಂತದಲ್ಲಿ ₹6 ಕೋಟಿ: ನಗರದಲ್ಲಿ ಭೂಗತ ವಿದ್ಯುತ್‌ ಕೇಬಲ ಅಳವಡಿಕೆ ಈಗಾಗಲೇ ಶುರುವಾಗಿದೆ. ಅಲ್ಲಲ್ಲಿ ರಸ್ತೆಗಳ ಒಂದು ಬದಿಯಲ್ಲಿ ಕೇಬ ಲ್‌ಗಳನ್ನು ಅಳವಡಿಸಲಾಗುತ್ತಿದೆ. ಸುಸ ಜ್ಜಿತವಾಗಿ ನಿರ್ಮಾಣವಾಗಿರುವ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ರಸ್ತೆ ಯಲ್ಲಿ ಶೇ 90 ರಷ್ಟು ಭೂಗತ ಕೇಬಲ್‌ ಅಳವಡಿಕೆ ಪೂರ್ಣಗೊಂಡಿದೆ.

ಇನ್ನು ನಗರದಾದ್ಯಂತ ಈ ಯೋಜ ನೆಯನ್ನು ವಿಸ್ತರಿಸಲಾಗುತ್ತಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ ₹6 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಡಿ ಕರಾವಳಿ ವೃತ್ತದಿಂದ ಬೆಂದೂರ್‌ವೆಲ್, ಹಂಪನ ಕಟ್ಟೆ ಮೂಲಕ ಎ.ಬಿ.ಶೆಟ್ಟಿ ವೃತ್ತದವರೆಗೆ ಭೂಗತ ಕೇಬಲ್‌ ಅಳವಡಿಕೆ ಮಾಡಲಾ ಗುತ್ತಿದೆ. ಈ ಕಾಮಗಾರಿಯ ಉಸ್ತುವಾ ರಿಯನ್ನು ಮೆಸ್ಕಾಂ ಕಾರ್ಯಪಾಲಕ ಎಂಜಿ ನಿಯರ್ ಮಂಜಪ್ಪ ನೋಡಿ ಕೊಳ್ಳುತ್ತಿದ್ದಾರೆ.

‘ಇದುವರೆಗೆ ವಿದ್ಯುತ್‌ ತಂತಿಗಳನ್ನು ಮೇಲಿನಿಂದಲೇ ಅಳವಡಿಸುವ ಕ್ರಮ ವಿತ್ತು. ಭೂಗತ ಕೇಬಲ್‌ ಅಳವಡಿಸಿದರೆ ಸುರಕ್ಷಿತ ಎನ್ನುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಭೂಗತ ಕೇಬಲ್‌ ಅಳ ವಡಿಸಿದಲ್ಲಿ, ಅನೇಕ ಸಮಸ್ಯೆಗಳು ನಿವಾ ರಣೆ ಆಗಲಿದ್ದು, ಅನಗತ್ಯ ವೆಚ್ಚಕ್ಕೆ ಕಡಿ ವಾಣ ಬೀಳಲಿದೆ’ ಎನ್ನುತ್ತಾರೆ ಮಂಜಪ್ಪ.

‘ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಇದಕ್ಕೆ ಪೂರಕ ಎನ್ನುವಂತೆ ಪ್ರಾಯೋಗಿಕವಾಗಿ ಭೂಗತ ಕೇಬಲ್‌ ಅಳವಡಿಕೆಗೆ ರಾಜ್ಯ ಸರ್ಕಾರದಿಂದ ₹6 ಕೋಟಿ ಮಂಜೂರು ಮಾಡಿಸಲಾಗಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ಅನುದಾನ ಪಡೆಯಲು ಇದ ರಿಂದ ನೆರವಾಗಲಿದೆ ಎಂದು ಶಾಸಕ ಜೆ.ಆರ್‌. ಲೋಬೊ ಹೇಳುತ್ತಾರೆ.

ಮಳೆ ಆರಂಭವಾಗುವ ಮೊದಲೇ ಭೂಗತ ಕೇಬಲ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡಲ್ಲಿ, ಪದೇ ಪದೇ ವಿದ್ಯುತ್‌ ವ್ಯತ್ಯಯದ ಸಮಸ್ಯೆ ನಿವಾರಣೆ ಆಗಲಿದೆ. ಸ್ಮಾರ್ಟ್‌ ಸಿಟಿಯಲ್ಲಿ ಇಂತಹ ಯೋಜನೆಗಳು ತ್ವರಿತಗತಿಯಲ್ಲಿ ಪೂರ್ಣ ಗೊಳ್ಳಲಿ ಎಂದು ನಗರದ ಜನರು ಆಗ್ರಹಿಸುತ್ತಾರೆ.

ರಸ್ತೆ ಅಗೆತದ ಆತಂಕ
ಒಂದೆಡೆ ಭೂಗತ ಕೇಬಲ್‌ ಅಳವಡಿಕೆ ಆರಂಭವಾಗಿದ್ದರೆ, ಇನ್ನೊಂದೆಡೆ ಕೇಬಲ್‌ ಅಳವಡಿಕೆಗಾಗಿ ರಸ್ತೆಯ ಅಗೆತ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ಭೂಗತ ಕೇಬಲ್‌ ಅಳವಡಿಕೆ ಒಳ್ಳೆಯದು. ಭೂಗತ ಕೇಬಲ್ ಹಾಕುವ ಭರದಲ್ಲಿ ನಗರದ ಲ್ಲಿರುವ ಕಾಂಕ್ರೀಟ್ ರಸ್ತೆಗಳನ್ನು ಹಾಳು ಮಾಡಿ ಬಿಡುವುದು ಬೇಡ. ಕಾಮಗಾರಿ ಮುಗಿದ ತಕ್ಷಣವೇ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಮೆಸ್ಕಾಂ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಜೆ.ಆರ್.ಲೋಬೊ, ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಸ್ತೆ ಅಗೆತಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಬಲ್‌ ಅಳವಡಿಸಿದ ನಂತರ ರಸ್ತೆಯನ್ನು ಸರಿಪಡಿಸುವುದು ಮೆಸ್ಕಾಂನ ಹೊಣೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

* ಮೊದಲ ಹಂತದಲ್ಲಿ ₹6 ಕೋಟಿ ವೆಚ್ಚದ ಯೋಜನೆಯಾಗಿದ್ದು, ಎರಡನೇ ಹಂತದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿ ಆರಂಭವಾಗಲಿದೆ.
-ಜೆ.ಆರ್.ಲೋಬೊ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.