ADVERTISEMENT

ಪಶ್ಚಿಮ ವಾಹಿನಿ ಪ್ರಸ್ತಾವ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 6:50 IST
Last Updated 7 ಏಪ್ರಿಲ್ 2017, 6:50 IST

ಮಂಗಳೂರು: ‘ಕಿಂಡಿ ಅಣೆಕಟ್ಟೆಗಳ ನಿರ್ಮಾಣದ ಮೂಲಕ ಕರಾವಳಿ ಜಿಲ್ಲೆ ಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳುವ ಉದ್ದೇಶಿತ ಪಶ್ಚಿಮ ವಾಹಿನಿ ಯೋಜನೆಗೆ ಪರಿಷ್ಕೃತ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸುವಂತೆ  ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ’ ಸೂಚನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಯಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಪಶ್ಚಿಮ ವಾಹಿನಿ ಯೋಜನೆ ಕುರಿತು ಮಾತನಾಡಿದ ಅವರು, ‘ಈ ಯೋಜನೆಗೆ ಪ್ರಾಥಮಿಕ ಹಂತದಲ್ಲಿ ₹ 100 ಕೋಟಿ ಅನುದಾನ ನೀಡಲಾಗಿದೆ. ಈ ಕಾರಣಕ್ಕಾಗಿ ಅಷ್ಟೇ ಮೊತ್ತಕ್ಕೆ ಯೋಜನೆ ಸೀಮಿತವಲ್ಲ. ಸಮಗ್ರವಾಗಿ ಯೋಜನೆಯ ಪರಿಷ್ಕೃತ ಪ್ರಸ್ತಾವವನ್ನು ಸಿದ್ಧಪಡಿಸಿ ಮುಖ್ಯಮಂತ್ರಿಯವರಿಗೆ ಸಲ್ಲಿಸಬೇಕು. ಆ ಮೂಲಕ ಮುಂದಿನ ಬಜೆಟ್‌ ಗಳಲ್ಲಿ ಹೆಚ್ಚಿನ ಅನುದಾನ ಪಡೆಯ ಬೇಕು’ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಾತನಾಡಿ, ‘ಈ ಹಿಂದೆ ಪಶ್ಚಿಮ ವಾಹಿನಿ ಯೋಜನೆಗೆ ₹ 935 ಮೊತ್ತದ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗಿನ ಅಗತ್ಯಕ್ಕೆ ತಕ್ಕಂತೆ ಪ್ರಸ್ತಾವವನ್ನು ಪರಿಷ್ಕರಣೆ ಮಾಡಬೇಕು. ತ್ವರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಹೇಳಿದರು.

ADVERTISEMENT

ನಾಲ್ಕು ತಿಂಗಳಲ್ಲಿ ಆರಂಭ: ‘ಮಂಗ ಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಜಾರಿ ಗಾಗಿ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ (ಎಸ್‌ ಪಿವಿ) ರಚನೆ ಪ್ರಕ್ರಿಯೆ ಅಂತಿಮ ಹಂತದ ಲ್ಲಿದ್ದು, ಎರಡು ದಿನಗಳಲ್ಲಿ ಕೇಂದ್ರ ಕಾರ್ಪೋರೇಟ್‌ ಇಲಾಖೆಯಿಂದ ನೋಂ ದಣಿ ಪತ್ರ ದೊರೆಯಲಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಗುತ್ತಿಗೆ ದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಯೂ ಅಂತಿಮ ಹಂತದಲ್ಲಿದೆ. ನಾಲ್ಕು ತಿಂಗಳಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು ಅಧಿಕೃತವಾಗಿ ಆರಂ ಭಿಸಬಹುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಸಭೆಗೆ ತಿಳಿಸಿದರು.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (ಕೆಆರ್‌ ಐಡಿಎಲ್‌) ವಿವಿಧ ಇಲಾಖೆಗಳಿಂದ ಕಾಮಗಾರಿಗಳ ಗುತ್ತಿಗೆ ಪಡೆದು, ಸಕಾ ಲಕ್ಕೆ ಕೆಲಸ ಮಾಡದೇ ವಿಳಂಬ ಮಾಡು ತ್ತಿದೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತ ವಾಯಿತು. ಈಗ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ, ಯಾವುದೇ ಕಾಮಗಾರಿಯನ್ನೂ ನಿಗ ಮಕ್ಕೆ ವಹಿಸಬಾರದು ಎಂದು ಸಚಿವರು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘2018-17ರಲ್ಲಿ ಈ ಯೋಜನೆಯ ಅನುದಾನದಿಂದ ಜಿಲ್ಲೆಯಲ್ಲಿ 1000 ಕಿಂಡಿ ಅಣೆಕಟ್ಟುಗಳನ್ನು  ನಿರ್ಮಿಸಲು ಉದ್ದೇಶಿಸಲಾಗಿದೆ. ಜಲಧಾರೆ ಯೋಜನೆ ಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಐದು ಕಿಂಡಿ ಅಣೆಕಟ್ಟು ನಿರ್ಮಿಸುವ ಗುರಿ ಇದೆ. ಬಂಟ್ವಾಳದಲ್ಲಿ 290 , ಬೆಳ್ತಂಗಡಿ 240 , ಮಂಗಳೂರು 275 , ಪುತ್ತೂರು 205, ಸುಳ್ಯದಲ್ಲಿ 140 ಕಿಂಡಿ ಅಣೆಕಟ್ಟೆ ಗಳನ್ನು  ನಿರ್ಮಿಸಲಾಗುವುದು. ಇದ ರಿಂದ ಒಟ್ಟು  191 ಕೋಟಿ ಲೀಟರ್ ನೀರು ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಯೋಜನೆಗೆ ಒಟ್ಟು ₹ 43 ಕೋಟಿ ಅನುದಾನ ಬಳಸಿಕೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದರು.

ಶಾಸಕ ಕೆ.ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಸರ್ವೋತ್ತಮ ಗೌಡ, ಶಾಹುಲ್ ಹಮೀದ್, ನಗರ ಪೊಲೀಸ್ ಕಮಿಷನರ್‌ ಚಂದ್ರಶೇಖರ್, ದಕ್ಷಿಣ ಕನ್ನಡ ಎಸ್‌ಪಿ ಭೂಷಣ್ ಜಿ.ಬೊರಸೆ ಸಭೆಯಲ್ಲಿದ್ದರು.

**

ಕರಪತ್ರ ಬಿಡುಗಡೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅನುದಾನವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾ ರಿಗಳ ಕುರಿತ ‘ನರೇಗಾ ನಡಿಗೆ ಪ್ರಗತಿಯೆಡೆಗೆ’ ಎಂಬ ಕರಪತ್ರವನ್ನು ಸಚಿವರು ಸಭೆಯಲ್ಲಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.