ADVERTISEMENT

ಪುತ್ತೂರು: ಇಂದು ಸಂಭ್ರಮದ ಬ್ರಹ್ಮ ರಥೋತ್ಸವ-

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 9:48 IST
Last Updated 17 ಏಪ್ರಿಲ್ 2014, 9:48 IST
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಕ್ಕೆ ಬುಧವಾರ ರಾತ್ರಿ ಬಲ್ನಾಡಿನಿಂದ ದಂಡನಾಯಕ ,ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರದ ಕಿರುವಾಳು ಭೇಟಿ ಹಾಗೂ ಪಾಲಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಕ್ಕೆ ಬುಧವಾರ ರಾತ್ರಿ ಬಲ್ನಾಡಿನಿಂದ ದಂಡನಾಯಕ ,ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರದ ಕಿರುವಾಳು ಭೇಟಿ ಹಾಗೂ ಪಾಲಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.   

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ಗುರುವಾರ ರಾತ್ರಿ ಬ್ರಹ್ಮ ರಥೋತ್ಸವ ಮತ್ತು ಬೆಡಿ ಪ್ರದರ್ಶನ ನಡೆಯಲಿದೆ.

ಪುತ್ತೂರು ಸೀಮೆ ದೇವಾಲಯವಾದ ಮಹಾ ಲಿಂಗೇಶ್ವರ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ನಡೆಯುವ ಸುಡುಮದ್ದು ಪ್ರದರ್ಶನ `ಪುತ್ತೂರು ಬೆಡಿ’ ಎಂದೇ ಖ್ಯಾತಿ ಪಡೆದಿದೆ. ಪುತ್ತೂರು ಬೆಡಿ ಮತ್ತು ಬ್ರಹ್ಮ ರಥೋತ್ಸವ ವೀಕ್ಷಿಸಲು ಹೊರ ಜಿಲ್ಲೆಗಳ, ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರು ಬರುತ್ತಾರೆ.

ರಾತ್ರಿ 9 ಗಂಟೆಗೆ ಬ್ರಹ್ಮರಥೋತ್ಸವ ನಡೆಯ ಲಿದ್ದು, ಆ ಬಳಿಕ ಬೆಡಿ ಪ್ರದರ್ಶನ ಆರಂಭ ಗೊಳ್ಳಲಿದೆ. ಈ ಬಾರಿ ₨.6.50 ಲಕ್ಷ ವೆಚ್ಚದಲ್ಲಿ ಬಾರೀ ಪ್ರಮಾಣದ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಅರಸಿಕೆರೆಯ ರಾಜ್‌ಕುಮಾರ್ ಫಯರ್ ವರ್ಕ್ಸ್‌ ಸಂಸ್ಥೆಯ ಶಂಕರಾಚಾರ್ ಹಾಗೂ ಬಂಟ್ವಾಳದ ಕಂಬಳಬೆಟ್ಟುವಿನ ಅಬ್ದುಲ್ ಗಫೂರ್ ತಂಡದಿಂದ ಬೆಡಿ ಪ್ರದರ್ಶನ ಒಂದೂವರೆ ಗಂಟೆ ಕಾಲ  ನಡೆಯಲಿದೆ.
ವಿಶೇಷ ಬಸ್ಸಿನ ವ್ಯವಸ್ಥೆ:  ಸಂಜೆ ಮತ್ತು ರಾತ್ರಿಯ ವೇಳೆ ಪುತ್ತೂರು ಕೆಎಸ್‍ಆರ್‌ಟಿಸಿ  ವತಿಯಿಂದ ಗ್ರಾಮೀಣ ಪ್ರದೇಶಗಳಿಗೆ ವಿಶೇಷ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರೋತ್ಸವ ವಿಶೇಷವಾಗಿ ಧರ್ಮಸ್ಥಳ ಮತ್ತು ಬಿಸಿ ರೋಡ್ ಕೆಎಸ್‍ಆರ್‌ಟಿಸಿ ಘಟಕಗಳಿಂದ 20 ಬಸ್‌ಗಳನ್ನು ಬಳಸಿಕೊಳ್ಳಲಾಗುವುದು. ಪುತ್ತೂರು ಕೆಎಸ್‍ಆರ್‌ಟಿಸಿ ಘಟಕದ 170 ಗ್ರಾಮೀಣ ಪ್ರದೇಶದ ಓಡಾಟದ ಬಸ್‌ಗಳ ಪೈಕಿ 56 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಒದಗಿಸ ಲಾಗಿದ್ದು, ಉಳಿದ ಬಸ್‌ಗಳನ್ನು ಜಾತ್ರೋತ್ಸವದ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಹಾಕಲಾಗುವುದು.  ಚುನಾವಣಾ ಕಾರ್ಯಕ್ಕೆ ಒದಗಿಸಲಾದ  ಬಸ್‌ಗಳನ್ನು ಕೂಡ ಜಾತ್ರೋ ತ್ಸವಕ್ಕೆ ವಿಶೇಷವಾಗಿ ಬಳಸಿಕೊಳ್ಳಲಾಗುವುದು ಎಂದು ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಬ್ರಹ್ಮರಥೋತ್ಸವ ಮತ್ತು ಬೆಡಿ ಪ್ರದರ್ಶನದ ವೇಳೆ ಪುತ್ತೂರು ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ಕಿಕ್ಕಿರಿದು ಜನ ಸೇರುತ್ತಿದ್ದು, ನಗರದ ಪೇಟೆಯಲ್ಲೂ ಜನಸಂದಣಿ ದಟ್ಟವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್  ಕ್ರಮಕೈಗೊಳ್ಳಲು ಸಕಲ ಸಿದ್ದತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.