ADVERTISEMENT

ಪುತ್ತೂರು ನಗರದ ಜನರಿಗಿಲ್ಲ ನೀರಿನ ಭಯ

ನೆಕ್ಕಿಲಾಡಿ ಅಣೆಕಟ್ಟೆಯಲ್ಲಿ ನೀರು ಶೇಖರಣೆ: ಈಚೆಗೆ ಸುರಿದ ಮಳೆಯಿಂದ ತಪ್ಪಿದ ಆತಂಕ

ಸಿದ್ದಿಕ್ ನೀರಾಜೆ
Published 27 ಮಾರ್ಚ್ 2017, 6:01 IST
Last Updated 27 ಮಾರ್ಚ್ 2017, 6:01 IST
ಪುತ್ತೂರು ನಗರದ ಜನರಿಗಿಲ್ಲ ನೀರಿನ ಭಯ
ಪುತ್ತೂರು ನಗರದ ಜನರಿಗಿಲ್ಲ ನೀರಿನ ಭಯ   
ಉಪ್ಪಿನಂಗಡಿ: ಪ್ರಸಕ್ತ ಸಾಲಿನಲ್ಲಿ ಹಿಂಗಾರು ಮಳೆ ಕೈಕೊಟ್ಟಿದೆ, ಹರಿಯುವ ನದಿ ಸೊರಗಿದೆ, ಆದರೆ ಪುತ್ತೂರು ನಗ ರಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಉಪ್ಪಿನಂಗಡಿ ಸಮೀಪದ ನೆಕ್ಕಿ ಲಾಡಿ ಡ್ಯಾಂ (ಮೇಲ್ಮಟ್ಟದ ರೇಚಕ ಸ್ಥಾ ವರ)ನಲ್ಲಿ ಅಗತ್ಯಕ್ಕೆ ಬೇಕಾಗುವಷ್ಟು ನೀರು ಶೇಖರಣೆಯಾಗಿದೆ.  ಇದಕ್ಕೆ ಕಾರ ಣ ಈಚೆಗೆ ಸುರಿದ ಮಳೆ. ಪುತ್ತೂರು ಜನ ತೆಗೆ ಇನ್ನೂ 3 ತಿಂಗಳ ಮಟ್ಟಿಗೆ ಕುಡಿಯು ವ ನೀರಿನ ಸಮಸ್ಯೆ ಆಗಲಾರದು ಎಂಬ ವಿಷಯ ಜನರ ಆತಂಕ ದೂರ ಮಾಡಿದೆ. 
 
ಪುತ್ತೂರು ನಗರಕ್ಕೆ ನೀರು ಸರಬ ರಾಜು ಮಾಡುವ ಪುತ್ತೂರು ನಗರ ಸಭೆ ಅಧೀನದಲ್ಲಿರುವ 34-ನೆಕ್ಕಿಲಾಡಿಯಲ್ಲಿ ಹರಿಯುವ ಕುಮಾರಧಾರ ನದಿಯಲ್ಲಿ ನಿರ್ಮಿಸಲಾಗಿರುವ ಡ್ಯಾಂನಲ್ಲಿ ನದಿ ತಳ ಮಟ್ಟದಿಂದ 3 ಮೀಟರ್ ನೀರು ಇದೆ. 
 
65 ಲಕ್ಷ ಲೀಟರ್ ನೀರು ಸರಬ ರಾಜು:  ಡ್ಯಾಂನಲ್ಲಿ ಸುಮಾರು 1 ಕಿ.ಮೀ  ವ್ಯಾಪ್ತಿಯಲ್ಲಿ 3 ಮೀಟರ್ ಎತ್ತರ ದಲ್ಲಿ ಅಂದಾಜು 630 ದಶಲಕ್ಷ ಲೀಟರ್ ನೀರು ಸಂಗ್ರಹ ಇದೆ. ದಿನಂಪ್ರತಿ 65 ಲಕ್ಷ ಲೀಟರ್ ನೀರು ನೆಕ್ಕಿಲಾಡಿ ಯಲ್ಲಿರುವ ಮೇಲ್ಮಟ್ಟದ ರೋಚಕ ಸ್ಥಾವರದಲ್ಲಿ ನೀರು ಶುದ್ಧೀಕರಣಗೊಂಡು ಪುತ್ತೂರು ನಗರಕ್ಕೆ ನೀರು ಸರಬರಾಜು ವ್ಯವಸ್ಥೆ ಸೀಟಿಗುಡ್ಡೆ ಮತ್ತು ಚಿಕ್ಕಮುಡ್ನೂರು ಟ್ಯಾಂಕ್‌ಗೆ ಹರಿದು ಹೋಗುತ್ತಿದೆ.
 
ಡ್ಯಾಂನಲ್ಲಿ ಒಟ್ಟು 8 ಗೇಟುಗಳಿವೆ. 430 ತಡೆ ಇರುತ್ತದೆ. ಇದೀಗ ಡ್ಯಾಂನಲ್ಲಿ ನೀರು 3 ಮೀಟರ್‌ಗಿಂತ ಎತ್ತರದಲ್ಲಿ ಇರುವುದರಿಂದ ಗೇಟುಗಳಿಂದ  ಮೇಲೆ ಹರಿದು ಹೋಗುತ್ತಿದೆ.  ಕಳೆದ ವರ್ಷ ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ ಇದ್ದಾಗ 2 ಗೇಟು ನೀರನ್ನು ನೇತ್ರಾವತಿ ಮೂಲಕ ಮಂಗಳೂರು ಕಡೆಗೆ ಹರಿದು ಬಿಡಲಾಗಿತ್ತು.  ಆದರೆ ಈ ಬಾರಿ ಅಂತಹ ಪ್ರಮಯ ಬಾರದು. 
 
ಸಮಸ್ಯೆ ಇಲ್ಲ
ನಗರಕ್ಕೆ ನೀರು ಸರಬರಾಜು ವ್ಯವಸ್ಥೆ ಹೊಂದಿರುವ ನೆಕ್ಕಿಲಾಡಿ ಡ್ಯಾಂನಲ್ಲಿ 650 ದಶಲಕ್ಷ ಲೀಟರ್ ನೀರಿನ ಶೇಖರಣೆ ಇದೆ. ಜೂನ್ ತಿಂಗಳವರೆಗೆ  ಸಾಕಾಗುತ್ತದೆ. ಒಂದೆರಡು ಮಳೆ ಬಂದರೆ ಪುತ್ತೂರು ಜನತೆಗೆ ಕುಡಿಯುವ ನೀರಿಗೆ ಯಾವುದೇ ರೀತಿ ಸಮಸ್ಯೆ ಆಗಲಾರದು ಎಂದು ಪುತ್ತೂರು ನೀರು ಸರಬರಾಜು ವ್ಯವಸ್ಥೆ ಮುಖ್ಯಸ್ಥ ವಸಂತ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.