ADVERTISEMENT

ಪೊಲೀಸ್ ದೌರ್ಜನ್ಯ ವಿರುದ್ಧ ಪಿಎಫ್ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:05 IST
Last Updated 18 ಏಪ್ರಿಲ್ 2017, 7:05 IST

ಬಂಟ್ವಾಳ: ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಸುನಿಲ್ ನಾಯ್ಕ್ ಮತಿಭ್ರಮಣೆಯಿಂದ ಮುಸ್ಲಿಮರ ಮೇಲೆ ಪೂರ್ವಗ್ರಹ ಪೀಡಿತರಂತೆ ವರ್ತಿಸುತ್ತ ಮಂಗಳೂರಿನಲ್ಲಿ ಅಮಾಯಕ ಯುವಕ ಅಹ್ಮದ್ ಖುರೇಷಿ ಅವರ ಕಿಡ್ನಿ ವೈಫಲ್ಯ ಗೊಳ್ಳಲು ಕಾರಣವಾಗಿದ್ದಾರೆ. ಇದಕ್ಕಾಗಿ ಕೂಡಲೇ ಅವರನ್ನು ಜಿಲ್ಲೆಯಿಂದ ವರ್ಗಾ ವಣೆಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮತ್ತೆ ಉಗ್ರ ಹೋರಾಟ ಆರಂಭಿಸ ಬೇಕಾಗುತ್ತದೆ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು.

ಬಂಟ್ವಾಳ ತಾಲ್ಲೂಕಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವತಿಯಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಈಚೆಗೆ ಸಂಜೆ ಪ್ರತಿಭಟನೆ ನಡೆಸಿ ಮಂಗಳೂ ರಿನಲ್ಲಿ ಈಚೆಗೆ ನಡೆದ ಲಾಠಿಚಾರ್ಜ್ ಮತ್ತು ಪೊಲೀಸ್ ದೌರ್ಜನ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಕೇವಲ ವಿಚಾರಣೆ ನೆಪದಲ್ಲಿ ಅಹ್ಮದ್ ಖುರೇಷಿಯನ್ನು ಏಳು ದಿನ ಅಕ್ರಮ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಲಾಗಿದ್ದು, ಈ ಬಗ್ಗೆ ನ್ಯಾಯ ಕೇಳಲು ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲು ಹೋದರೆ ಸಂವಿಧಾನ ವಿರೋಧಿ ಮಾದರಿಯಲ್ಲಿ ಲಾಠಿ ಚಾರ್ಜ್‌ ಮೂಲಕ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ’ ಎಂದರು.

ಇದೇ ವೇಳೆ ಜನಪ್ರತಿನಿಧಿಗಳು ಸಹಿತ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಪೊಲೀಸ್ ಕಮಿಷನರ್ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಪಿಎಫ್ಐ ಮುಖಂಡ ಎ.ಕೆ.ಇಮ್ತಿ ಯಾಝ್, ಪ್ರಮುಖರಾದ ಸಲೀಮ್ ಫರಂಗಿಪೇಟೆ, ಝಕರಿಯಾ ಕಲ್ಲಡ್ಕ, ಇಸಾಕ್ ಶಾಂತಿಅಂಗಡಿ, ಪುರಸಭಾ ಸದಸ್ಯ ಮುನೀಶ್ ಅಲಿ, ಅಬೂಬಕ್ಕರ್ ಸಿದ್ದೀಕ್ ಮೊದಲಾದವರು ಪತ್ರಿಭ ಟನೆಯಲ್ಲಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.