ADVERTISEMENT

‘ಪ್ರತಿಭೆಗೆ ಅವಕಾಶ ಕಲ್ಪಿಸುವುದು ಶ್ರೇಷ್ಠ ಕಾರ್ಯ’

ಕುಕ್ಕೆಯಲ್ಲಿ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 6:03 IST
Last Updated 3 ಜನವರಿ 2017, 6:03 IST

ಸುಬ್ರಹ್ಮಣ್ಯ: ಪ್ರತಿಭಾವಂತರ ಪ್ರತಿಭೆಗೆ ಅವಕಾಶ ಕಲ್ಪಿಸುವುದು ಶ್ರೇಷ್ಠ ಕಾರ್ಯ. ಅನೇಕ ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸಿದ್ದ ಕಲಾವಿದರಿಗೆ ವೇದಿಕೆ ಒದಗಿಸಿವೆ. ತಮ್ಮ ಕಲಾ ಪ್ರೌಢಿ ಮೆಯನ್ನು ಸಾದರಪಡಿಸಿದ ಪವಿತ್ರ ರಂಗ ವೇದಿಕೆ ಇದು.

ಗ್ರಾಮೀಣ ಕಲಾಸಕ್ತರಿಗೆ ಕಲೆಯ ಆಸ್ವಾದಕ್ಕೆ ದೇವಳದ ವತಿ ಯಿಂದ ವಿಶೇಷ ಅವಕಾಶ ಒದಗಿಸ ಲಾಗಿದೆ. ಸರ್ವರೂ ಈ ಕಾರ್ಯಕ್ರಮ ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಅಂಗಡಿಗುಡ್ಡೆಯ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯುವ ನಾಲ್ಕು ದಿನಗಳ ಕಿರುಷಷ್ಠಿ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನಸ್ಸನ್ನು ಅರಳಿಸುವ ದೇಶಿಯ ಕಲಾ ಪ್ರಕಾರಗಳು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದೆ. ಭಾರತೀಯ ಕಲೆಯು ದೈವೀ ಭಾವನೆಗಳೊಂದಿಗೆ ಶಾಂತಿ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್, ಕೃಷ್ಣಮೂರ್ತಿ ಭಟ್, ಮಾಧವ.ಡಿ, ದಮಯಂತಿ ಕೂಜು ಗೋಡು ಕೆ.ಎಸ್, ತಾಲ್ಲೂಕು ಪಂಚಾ ಯಿತಿ ಸದಸ್ಯ ಅಶೋಕ್ ನೆಕ್ರಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಶ್ರೀ ದೇವಳದ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಯೋಜನಾ ಸದಸ್ಯ ಶಿವರಾಮ ರೈ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್ ಎನ್.ಎಸ್, ಮೋಹನದಾಸ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಕೂಜುಗೋಡು, ಶ್ರೀ ದೇವಳದ ಕಚೇರಿ ಅಧೀಕ್ಷಕ ಬಾಲ ಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಪವಿತ್ರಾ ಪ್ರಾರ್ಥನೆ ಹಾಡಿದರು. ಸತೀಶ್ ಕೂಜುಗೋಡು ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ. ಎಸ್ ವಂದಿಸಿ, ಉಪನ್ಯಾಸಕ ಸೋಮ ಶೇಖರ ನಾಯಕ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.