ADVERTISEMENT

‘ಫಲಿತಾಂಶದ ಗೊಂದಲ ಪರಿಹರಿಸಿ’

ಕುಲಸಚಿವರ ರಾಜೀನಾಮೆಗೆ ಆಗ್ರಹಿಸಿ ಕುಲಪತಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:01 IST
Last Updated 3 ಫೆಬ್ರುವರಿ 2017, 7:01 IST
‘ಫಲಿತಾಂಶದ ಗೊಂದಲ ಪರಿಹರಿಸಿ’
‘ಫಲಿತಾಂಶದ ಗೊಂದಲ ಪರಿಹರಿಸಿ’   

ಮಂಗಳೂರು: ಮಂಗಳೂರು ವಿಶ್ವವಿದ್ಯಾ ಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಪ್ರತಿಬಾರಿಯೂ ವಿಶ್ವವಿ ದ್ಯಾಲಯದ ಆಡಳಿತ ಮಂಡಳಿ ವಿಫಲ ವಾಗಿದೆ ಎಂದು ಆರೋಪಿಸಿ ಎಬಿವಿಪಿ 200ಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಮಿನಿ ವಿಧಾನ ಸೌಧದ ಬಳಿ ಕುಲಪತಿಗಳ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸರಿಯಾಗಿ ಪರೀಕ್ಷೆಯನ್ನು ನಡೆಸಿ, ಸಮಯಕ್ಕೆ ಸರಿಯಾಗಿ ಫಲಿತಾಂಶ ನೀಡು ವುದು ಪ್ರಮುಖ ಭಾಗ. ಆದರೆ ಫಲಿ ತಾಂಶ ಪ್ರಕಟಿಸುವಲ್ಲಿಯೇ ಕಳೆದ 3 ಸೆಮಿಸ್ಟರ್‌ಗಳಿಂದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಎಡವುತ್ತಿದೆ. ಇದ ರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾ ಗುತ್ತಿದ್ದು, ಆಡಳಿತ ಮಂಡಳಿಯ ಕಾರ್ಯ ವೈಖರಿ, ಕುಲಪತಿಗಳು ಹಾಗೂ ಕುಲಸಚಿವರು ಶೈಕ್ಷಣಿಕ ವಿಷಯಗಳನ್ನು ನಿರ್ಲಕ್ಷಿಸುತ್ತಿರುವುದನ್ನು ಎತ್ತಿ ತೋರಿಸು ತ್ತದೆ ಎಂದು ದೂರಿದರು.

ನವೆಂಬರ್, ಡಿಸೆಂಬರ್‌ನಲ್ಲಿ ನಡೆದ ಪದವಿ ಪರೀಕ್ಷೆ ಫಲಿತಾಂಶವನ್ನು ಜನವರಿ 18 ರಂದು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿತ್ತು. ನಂತರ ಏಕಾಏಕಿ ಫಲಿತಾಂಶವನ್ನು ಹಿಂತೆಗೆದುಕೊಂಡಿರುವುದು ಹಾಗೂ ಈ ಕುರಿತು ಕುಲಪತಿಗಳಾಗಲಿ, ಪರೀಕ್ಷಾಂಗ ಕುಲಸಚಿವರಾಗಲಿ ಇಲ್ಲಿಯವರೆಗೆ ಅಧಿ ಕೃತ ಪ್ರತಿಕ್ರಿಯೆ ನೀಡದಿರುವುದು ಬೇಜ ವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರೀಕ್ಷಾಂಗ ಕುಲಸಚಿವರು ರಾಜೀ ನಾಮೆ ನೀಡಬೇಕು. ನವೆಂಬರ್, ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಹಿಂಪಡೆದು ಗೊಂದಲ ಸೃಷ್ಟಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಳೆದ ಎಲ್ಲ ಸೆಮಿಸ್ಟರ್‌ಗಳ ಅಂಕ ಪಟ್ಟಿ, ಫಲಿತಾಂಶದಲ್ಲಿ ಇರುವ ಸಮಸ್ಯೆ ಮತ್ತು ಗೊಂದಲಗಳ ಪರಿಹಾರಕ್ಕಾಗಿ ವಿಶ್ವ ವಿದ್ಯಾಲಯ ಮಟ್ಟದ ವಿಶೇಷ ತಂಡ ರಚಿಸಿ, ತಕ್ಷಣ ಸಮಸ್ಯೆ ಪರಿಹರಿಸಬೇಕು. ವಿಶ್ವವಿದ್ಯಾಲಯ ಮಟ್ಟದಲ್ಲಿ ಹೆಲ್ಪ್‌ಲೈನ್ ಪ್ರಾರಂಭಿಸಿ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಶೋಭಿತ್, ಸುಧಿತ್, ಶೀತಲ್ ಕುಮಾರ್ ಜೈನ್, ರಾಜೇಂದ್ರ, ಚೈತನ್ಯ, ಮೋಹಿತ್, ಕೀರ್ತನ್, ಸಂಕೇತ್, ಪ್ರಮಿತ್, ಆದ್ಯ, ವಿಶಾಲ್, ಜಾನವಿ, ಶ್ರೇಯಾ, ಗಾಯತ್ರಿ, ಮಯೂರೇಶ್, ಶರಣ್, ಅಭಿಷೇಕ್ ಇದ್ದರು.

***

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು
- ಹಿತೇಶ್, ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.