ADVERTISEMENT

ಬೆಲೆಯೂ ಇಲ್ಲ.. ಸಾಲವೂ ಸಿಗುತ್ತಿಲ್ಲ

ಸಂಕಷ್ಟದಲ್ಲಿ ಕರಾವಳಿ ಅಡಿಕೆ ಕೃಷಿಕರ ಬದುಕು..!

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:10 IST
Last Updated 21 ಜುಲೈ 2017, 7:10 IST

ಪುತ್ತೂರು: ಅಡಿಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಅಡಿಕೆಯನ್ನೇ ನಂಬಿ ಜಿಲ್ಲೆಯ ಕೃಷಿಕ ವರ್ಗ ಬದುಕು ಕಟ್ಟಿಕೊಂ ಡಿದ್ದಾರೆ. ಹಳೆ ಅಡಿಕೆಗೆ ಇದೀಗ ಮಾರುಕ ಟ್ಟೆಯಲ್ಲಿ ಕಿಲೋಗೆ ₹ 280 ರಷ್ಟು ಧಾರಣೆ ಇದ್ದರೂ ಹೊಸ ಅಡಿಕೆಯ ಧಾರಣೆ ₹ 235ರ ಒಳಗೆ ಇರುವುದ ರಿಂದ ಮಧ್ಯಮ ವರ್ಗದ ರೈತರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ.

ನೋಟು ಅಮಾನ್ಯದ ನಂತರ ಆರ್ಥಿಕ ಮುಗ್ಗಟ್ಟಿನ ಹಂತದಿಂದ ಮೇಲೆ ಏರಲು ರೈತರು ಕಷ್ಟಪಟ್ಟರು. ರಾಜ್ಯ ಸರ್ಕಾರ ರೈತನ ಸಾಲದಲ್ಲಿ ₹ 50 ಸಾವಿರ ಮನ್ನಾ ಮಾಡಿದೆ. ಆದರೆ ಸರ್ಕಾರದಿಂದ ಸಾಲ ಮನ್ನಾ ಮಾಡಲಾದ ಹಣ ಬಾರದ ಕಾರಣ ಕೃಷಿಕನಿಗೆ ಸಹಕಾರಿ ಸಂಘಗಳಿಂದಲೂ ಸಾಲ ದೊರೆಯುತ್ತಿಲ್ಲ. ಅತ್ತ ಸಾಲವೂ ಇಲ್ಲದೆ, ಇತ್ತ ಅಡಿಕೆಗೂ ಧಾರಣೆ ಇಲ್ಲದೆ ರೈತರು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ.

ಕಳೆದ ಕೆಲ ತಿಂಗಳ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪುತ್ತೂರಿಗೆ ಭೇಟಿ ನೀಡಿದ್ದ ಸಂ ದರ್ಭದಲ್ಲಿ ಅಡಿಕೆಗೆ ಬೆಂಬಲ ಬೆಲೆ ನೀಡಲು ₹ 162 ಕೋಟಿ ತಕ್ಷಣ ಬಿಡು ಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೆ ಯಾವುದೇ ಬೆಂಬಲ ಬೆಲೆಯೂ ಕೃಷಿಕರ ಪಾಲಿಗೆ ಸಿಕ್ಕಿಲ್ಲ.

ADVERTISEMENT

ಜಿಎಸ್‌ಟಿ ಜಾರಿಯಾದ ನಂತರ 15 ದಿನಗಳಲ್ಲಿ ಅಡಿಕೆ ಧಾರಣೆ ಏರಲಿದೆ ಎಂದು ಅಡಿಕೆ ಕೃಷಿಕರು ನಂಬಿದ್ದರು. ಈ ನಂಬಿಕೆಯೂ ಈಗ ಹುಸಿಯಾಗಿದ್ದು, ಕೃಷಿಕರು ನಿರಾಸೆಗೊಂಡಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ ಸ್ವಲ್ಪಮಟ್ಟಿನ ಧಾರಣೆ ಇದ್ದರೂ ಮಧ್ಯಮ ವರ್ಗದ ಕೃಷಿಕರಲ್ಲಿ ಹಳೆ ಅಡಿಕೆ ದಾಸ್ತಾನು ಇಲ್ಲ. ಈಗ ಹಳೆ ಅಡಿಕೆ ಇರುವುದು ಶ್ರೀಮಂತ ವರ್ಗದ ರೈತರಲ್ಲಿ ಮಾತ್ರ. ಕೆಲ ತಿಂಗಳ ಹಿಂದೆ ₹ 255 ರಷ್ಟಿದ್ದ ಹೊಸ ಅಡಿಕೆಯ ಧಾರಣೆಯು ಇದೀಗ ₹235ಕ್ಕೆ ಬಂದು ನಿಂತಿರು ವುದರಿಂದ ಬಡ ಹಾಗೂ ಮಧ್ಯಮ ವರ್ಗದ ರೈತರು ಸಮಸ್ಯೆಗೆ ಸಿಲುಕಿದ್ದಾರೆ.

ಅಡಿಕೆಗೆ ಬೆಂಬಲ ಬೆಲೆ ಘೋಷಣೆ ಯಾದ ಬಳಿಕ ಅಡಿಕೆ ಮಾರುಕಟ್ಟೆ ಚೇತ ರಿಸಿಕೊಳ್ಳಬಹುದು, ಹೊಸ ಅಡಿಕೆಯ ಧಾರಣೆ ಏರಬಹುದು ಎಂದು ಅಡಿಕೆ ಕೃಷಿಕರು ನಂಬಿದ್ದರು. ಮಧ್ಯಮ ವರ್ಗದ ರೈತರು ತಮ್ಮಲ್ಲಿರುವ ಸಣ್ಣ ಪ್ರಮಾಣದ ಹೊಸ ಅಡಿಕೆಯನ್ನು ಮಾರಾಟ ಮಾಡದೆ ಕೂಡಿಟ್ಟು ಧಾರಣೆ ಏರಿಕೆಯ ಸಂದರ್ಭಕ್ಕಾಗಿ ಕಾದು ಕುಳಿತಿದ್ದರು.

ಆದರೆ ಹೊಸ ಅಡಿಕೆಯ ಧಾರಣೆ ಕುಸಿಯುತ್ತಲೇ ಸಾಗಿದೆ. ಅಡಿಕೆಗೆ ಬೆಂಬಲ ಬೆಲೆ ಘೋಷಣೆಯಾಗಿ 4 ತಿಂಗಳು ಕಳೆದಿದೆ. ಆದರೆ ಈ ತನಕ ನಯಾ ಪೈಸೆ ಕೂಡಾ ರೈತನ ಪಾಲಿಗೆ ದೊರೆತಿಲ್ಲ. ಹಾಗಾದರೆ ₹ 162 ಕೋಟಿ ಬೆಂಬಲ ಬೆಲೆ ಅನುದಾನ ಎಲ್ಲಿ ಹೋಯಿತು ಎಂದು ರೈತರು ಪ್ರಶ್ನಿಸತೊಡಗಿದ್ದಾರೆ.

ಶಶಿಧರ ರೈ ಕುತ್ಯಾಳ

**

ಅಡಿಕೆಗೆ ಬೆಂಬಲ ಬೆಲೆ ದೊರೆತಿಲ್ಲ. ಕೇವಲ ಘೋಷಣೆಗಳಿಂದ ರೈತ ಉದ್ಧಾರವಾಗುವುದಿಲ್ಲ ಎಂಬುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಿಳಿದುಕೊಳ್ಳಬೇಕು.

ಶ್ರೀಧರ್ ಶೆಟ್ಟಿ ಬೈಲುಗುತ್ತು
ಕರ್ನಾಟಕ ರೈತಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.