ADVERTISEMENT

‘ಬೇಡಿಕೆ ಈಡೇರಿಕೆಗೆ ನಿರ್ಣಾಯಕ ಹೋರಾಟ’

ಬಾಕಿ ಇರುವ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:28 IST
Last Updated 16 ಫೆಬ್ರುವರಿ 2017, 7:28 IST
ಪಡುಬಿದ್ರಿ:  ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಗಳಲ್ಲಿ ಜನರ ಬೇಡಿಕೆಯನ್ನು ಫೆ.25ರ ಒಳಗೆ ಈಡೇರಿಸದೇ ಇದ್ದಲ್ಲಿ ಮೂರು ಟೋಲ್‌ಗಳ ಹೋರಾಟ ಸಮಿತಿ ಆಶ್ರಯ ದಲ್ಲಿ ಹೋರಾಟ ನಡೆಸಲಾಗುವುದು ಎಂದು ಉಡುಪಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
 
ಬುಧವಾರ ಪಡುಬಿದ್ರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಕಿ ಇರುವ ಕಾಮಗಾರಿ ಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಈ ಬಗ್ಗೆ ಜಿಲ್ಲಾಡಳಿತದ ಜತೆಗೆ ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು. ಈಗಾ ಗಲೇ ಹೆದ್ದಾರಿ ಕಾಮಗಾರಿ ವೇಳೆ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ತೀವ್ರವಾಗಿ ಗಾಯ ಗೊಂಡಿದ್ದಾರೆ. ಇವರಿಗೆ ನವಯುಗ ಕಂಪೆನಿ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.
 
ಎಲ್ಲಾ ಮೂರು ಟೋಲ್‌ಗಳಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆ ಮೇರೆಗೆ ಕೆಲಸ ನೀಡಬೇಕು. ಅವರಿಗೆ ನ್ಯಾಯಯುತ ಸಂಬಳ ಹಾಗೂ ಲಭ್ಯ ಸವಲತ್ತು ನೀಡಬೇಕು ಎಂದು ಆಗ್ರಹಿಸಿದರು. ಬಾಕಿ ಇರುವ ಹೆದ್ದಾರಿ ಕಾಮಗಾರಿ ಯನ್ನು ಪೂರ್ಣಗೊಳಿಸದೆ ಟೋಲ್ ಸಂಗ್ರಹ ಮಾಡಬಾರದು. ಕೇರಳ ರಾಜ್ಯ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದರು. 
ತಲಪಾಡಿ ಟೋಲ್ ಹೋರಾಟ ಸಮಿತಿ ಗಡಿನಾಡ ಅಧ್ಯಕ್ಷ ಸಿದ್ದಿಕ್ ತಲಪಾಡಿ ಮಾತನಾಡಿ, ಸರ್ಕಾರ ಹಾಗೂ ಜನಪ್ರತಿನಿಧಿಗಳು ಜನರನ್ನು ಬೀದಿಗೆ ತರುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
 
ಸಂಸದೆ ಶೋಭಾ ಕರಂದ್ಲಾಜೆ ಈವರೆಗೆ ನಮ್ಮೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ, ಅವರಿಗೆ ಈಗ ಮನವರಿಕೆಯಾಗಿದೆ. 98 ಕಿ.ಮೀ.ನಲ್ಲಿ 9 ಕಿ.ಮೀ ಮಾತ್ರ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಕುಂದಾ ಪುರದಲ್ಲಿ 6 ಸೇತುವೆ ಇನ್ನೂ ಪೂರ್ಣ ಗೊಂಡಿಲ್ಲ. ಕುಂದಾಪುರ, ಉಡುಪಿ, ಪಡುಬಿದ್ರಿ ಪರಿಸರದಲ್ಲಿ ಇನ್ನೂ ಕಾಮಗಾರಿ ಅತಂತ್ರದಲ್ಲಿದೆ ಎಂದು ಸಾಸ್ತಾನ ಟೋಲ್ ಹೋರಾಟ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಆರೋಪಿಸಿದರು.
 
ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ತಲಪಾಡಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಿಕ್, ಹೆಜಮಾಡಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಗುಲಾಂ ಮೊಹಮ್ಮದ್, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ, ಟ್ಯಾಕ್ಸಿಮೆನ್ ಅಸೋಸಿಯೇಶನ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ರಮೇಶ್ ಕೋಟ್ಯಾನ್, ವಿಶ್ವಾಸ್ ಅಮೀನ್, ಸುಧಾಕರ ಶೆಟ್ಟಿ ಇದ್ದರು.
 
ಜಿಲ್ಲಾಧಿಕಾರಿ ಬೇಜವಾಬ್ದಾರಿ ವರ್ತನೆ ಬಿಡಬೇಕು
 
ಖಾಸಗಿ ಕಂಪೆನಿ ಪರ ವಕಾಲತ್ತು ವಹಿಸಿ, ಮಾತುಕತೆಗೆ ಸಿದ್ದರಾ ಗಿರುವ ಜಿಲ್ಲಾಧಿಕಾರಿ ಬೇಜವಾ ಬ್ದಾರಿ ವರ್ತನೆ ಬಿಡಬೇಕು. ಜನವರಿ 31 ರಂದು ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ವಿವರ ಪಡೆದಿದ್ದ ಜಿಲ್ಲಾಧಿಕಾರಿ ಎರಡು ದಿನಗಳಲ್ಲಿ ಯಾವ ಆಧಾರದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ಕಲ್ಪಿಸಿದರು ಎಂಬ ಆಕ್ರೋಶ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.