ADVERTISEMENT

ಮಂಗಳೂರು ಮೇಯರ್ ಆಗಿ ಕವಿತಾ ಸನಿಲ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:49 IST
Last Updated 9 ಮಾರ್ಚ್ 2017, 10:49 IST
ಮಂಗಳೂರು ಮೇಯರ್ ಕವಿತಾ ಸನಿಲ್
ಮಂಗಳೂರು ಮೇಯರ್ ಕವಿತಾ ಸನಿಲ್   

ಮಂಗಳೂರು: ಮಹಾನಗರ ಪಾಲಿಕೆಯ ನೂತನ  ಮೇಯರ್ ಅಗಿ ಕಾಂಗ್ರೆಸ್ ಪಕ್ಷದ ಕವಿತಾ ಸನಿಲ್ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್‌ನ ರಜನೀಶ ಆಯ್ಕೆಯಾದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಕವಿತಾ ಸನಿಲ್ ಹಾಗೂ ಬಿಜೆಪಿಯಿಂದ ಪೂರ್ಣಿಮಾ ನಾಮಪತ್ರ ಸಲ್ಲಿಸಿದ್ದರು. ಕವಿತಾ ಅವರಿಗೆ 38 ಹಾಗೂ ಪೂರ್ಣಿಮಾ ಅವರಿಗೆ 20 ಮತಗಳು ಲಭಿಸಿದವು.

ADVERTISEMENT

ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಜನೀಶ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.