ADVERTISEMENT

‘ಮನುಷ್ಯ ಉದಾತ್ತನಾಗಲು ಪ್ರಯತ್ನಿಸಬೇಕು’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 7:22 IST
Last Updated 25 ಮಾರ್ಚ್ 2017, 7:22 IST
ಮೂಡುಬಿದಿರೆಯ ಧವಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಕನ್ನಡ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ ಪದ್ಮಪ್ರಸಾದ್ ಮಾತನಾಡಿದರು. ಪ್ರೊ.ಎಂ. ರವೀಶ್ ಕುಮಾರ್, ಮಲ್ಲಿಕಾ ರಾವ್ ಮತ್ತಿತರರು ಇದ್ದಾರೆ.
ಮೂಡುಬಿದಿರೆಯ ಧವಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಕನ್ನಡ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ ಪದ್ಮಪ್ರಸಾದ್ ಮಾತನಾಡಿದರು. ಪ್ರೊ.ಎಂ. ರವೀಶ್ ಕುಮಾರ್, ಮಲ್ಲಿಕಾ ರಾವ್ ಮತ್ತಿತರರು ಇದ್ದಾರೆ.   

ಮೂಡುಬಿದಿರೆ:  ‘ಮನುಷ್ಯ ಉದಾತ್ತನಾ ಗಲು ಪ್ರಯತ್ನಿಸಬೇಕು. ಉಸಿರು ಅಳಿ ದರೂ ಹೆಸರು ಉಳಿಯುವಂತೆ ವ್ಯಕ್ತಿತ್ವ ನಿರ್ಮಾಣವಾಗಲು ಕಾವ್ಯ, ಓದು ನಮ್ಮಲ್ಲಿ ಮೈಗೂಡಿಸಿಕೊಂಡಿರಬೇಕು’ ಎಂದು ಸಂಶೋಧಕ, ಹಂಪಿ ಕನ್ನಡ ವಿ.ವಿ.ಯಲ್ಲಿ ಜೈನ ಸಾಹಿತ್ಯ ಮತ್ತು ಸಂ ಸ್ಕೃತಿ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಎಸ್.ಪಿ.ಪದ್ಮಪ್ರಸಾದ್ ಹೇಳಿದರು.

ಶ್ರೀ ಧವಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಜರುಗಿದ ‘ಕನ್ನಡ ಕಾವ್ಯ ಪರಂ ಪರೆ’ ಕುರಿತು ಅವರು ಉಪನ್ಯಾಸ ನೀಡಿದರು.

‘ಕನ್ನಡ ಶಾಸನಗಳ ಸಾಲುಗಳನ್ನು ಉಲ್ಲೇಖಿಸುತ್ತಾ, ಪ್ರಸಿದ್ಧ ಕವಿಗಳ ಪದ್ಯ ಗಳನ್ನು ತಿಳಿಸುತ್ತಾ ಓದಿನ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮನಮುಟ್ಟುವಂತೆ ವಿವರಿಸಿದ ಅವರು ಒಳ್ಳೆಯ ಕಾವ್ಯವು ಸಮರ್ಪಣಾ ಭಾವವನ್ನು ತಿಳಿಸಿಕೊಡು ತ್ತದೆ’ ಎಂದರು. ಪ್ರಾಚಾರ್ಯ ಪ್ರೊ. ಎಂ.ರವೀಶ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್, ಉಪನ್ಯಾಸಕರಾದ ಕುಸುಮಾ, ಸುಧೀಶ್, ವಿದ್ಯಾರ್ಥಿಗಳಾದ ಆನ್ಸಿಲ್ ಪ್ರಿನಿಸ್ಟನ್ ಸೆರಾವೊ ಕಾರ್ಯಕ್ರಮ ನಿರೂ ಪಿಸಿದರು. ಮಾಧವ ಸ್ವಾಗತಿಸಿ, ಸಂತೋಷ್ ನಾಯಕ್ ವಂದಿಸಿದರು.

ಪುಸ್ತಕ ಮಾಹಿತಿ ಕೋರಿಕೆ
ಮಂಗಳೂರು:
ಮಂಗಳೂರು ವಿಶ್ವವಿದ್ಯಾ ಲಯದಲ್ಲಿ ಸ್ಧಾಪನೆಗೊಂಡಿರುವ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದಲ್ಲಿ ವ್ಯವಸ್ಧಿತ ಗ್ರಂಥಭಂಡಾರ, ಪತ್ರಾಗಾರ, ವಸ್ತುಸಂಗ್ರಹಾಲಯ ನಿರ್ಮಾಣ ಮುಂ ತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳ ಲಾಗಿದೆ. ಪುಸ್ತಕಗಳ ಸಂಗ್ರಹ ಕಾರ್ಯ ಈಗಾಗಲೇ ಆರಂಭವಾಗಿದ್ದು, ಆಸಕ್ತ ಸಾರ್ವಜನಿಕರ ಬೆಂಬಲ ಕೋರಲಾಗಿದೆ.

ನಾರಾಯಣ ಗುರುಗಳು ರಚಿಸಿರುವ ಕೃತಿಗಳು, ಅವರ ಧ್ವನಿ-ದೃಶ್ಯರೂಪದ ಮಾಹಿತಿಗಳು, ದಾಖಲೆಗಳು, ಚಿತ್ರ-ಪತ್ರಗಳು, ತಾಳೆಯೋಲೆ ಗ್ರಂಥಗಳು, ಗುರುಗಳ ಬಗ್ಗೆ ಅವರ ಅನುಯಾಯಿಗಳು, ಅಧ್ಯಯನಶೀಲರು ಬರೆದಿರುವ ಕೃತಿಗಳು ಯಾವುದೇ ಭಾರತೀಯ ಭಾಷೆ ಯಲ್ಲಿದ್ದರೂ, ಪೀಠದ ಗ್ರಂಥಾಲಯಕ್ಕೆ ಬೇಕಾಗಿವೆ. ದಾನರೂಪವಾಗಿ ಅಥವಾ ಅವಶ್ಯತೆ ಕಂಡಲ್ಲಿ ಖರೀದಿ ಷರತ್ತಿನೊಂ ದಿಗೆ ಕಚೇರಿಗೆ ಕಳುಹಿಸಿಕೊಟ್ಟು ಸಹಕರಿಸುವಂತೆ ಕೋರಲಾಗಿದೆ.

ಮಾಹಿತಿ ನೀಡಿದರೆ ಸ್ಥಳಕ್ಕೆ ಬಂದು ಸಂಗ್ರಹಿಸುವ ವ್ಯವಸ್ಧೆ ಮಾಡಲಾಗು ವುದು. ಹೆಚ್ಚಿನ ಮಾಹಿತಿಗೆ   ಮೊ.ಸಂ. 94829 75125 ಇಲ್ಲಿ ಸಂಪರ್ಕಿಸು ವಂತೆ ಪ್ರಕಟಣೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.