ADVERTISEMENT

ಮರಳು ಅಭಾವ: ಅಭಿವೃದ್ಧಿ ಕೆಲಸ ಕುಂಠಿತ

ಸಿದ್ದಿಕ್ ನೀರಾಜೆ
Published 22 ಸೆಪ್ಟೆಂಬರ್ 2017, 8:56 IST
Last Updated 22 ಸೆಪ್ಟೆಂಬರ್ 2017, 8:56 IST
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಮಂಜೂರು ಆಗಿರುವ ಮನೆ, ಮರಳು ಅಭಾವದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಮಂಜೂರು ಆಗಿರುವ ಮನೆ, ಮರಳು ಅಭಾವದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದೆ.   

ಉಪ್ಪಿನಂಗಡಿ: ಹೊಸ ಮರಳು ನೀತಿ ಜಾರಿಗೆ ಬರಲಿದೆ. ಇನ್ನು ಮುಂದೆ ಮರಳು ಸಮಸ್ಯೆ ಇರಲಾರದು ಎಂದು ಜಿಲ್ಲೆಯ ಸಚಿವರಿಂದ ಆರಂಭಗೊಂಡು, ಜಿಲ್ಲೆಗೆ ಬರುವ ಮುಖ್ಯಮಂತ್ರಿ, ಸಚಿವ ರಾದಿಯಾಗಿ ಎಲ್ಲರೂ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ 3 ವರ್ಷಗಳಿಂದ ಆರಂಭಗೊಂಡ ಮರಳು ಅಭಾವ ಜಿಲ್ಲೆಯ ಮಟ್ಟಿಗೆ ಶಾಪವಾಗಿ ಕಾಡ ತೊಡಗಿದೆ ಎಂಬ ದೂರುಗಳು ಸಾರ್ವ ಜನಿಕರಿಂದ ಕೇಳಿ ಬರುತ್ತಿವೆ.

ಮರಳು ಅಭಾವದಿಂದಾಗಿ ಖಾಸಗಿ ಮತ್ತು ಸರ್ಕಾರಿ ಅಭಿವೃದ್ಧಿ ಕಾಮಗಾ ರಿಗಳು ಅರ್ಧದಲ್ಲೇ ಸ್ಥಗಿತ ಗೊಂಡಿದ್ದು, ಸರ್ಕಾರದ ಬಹಳಷ್ಟು ಯೋಜನೆಯ ಕಾಮಗಾರಿಗಳು ನಿಲುಗಡೆಗೊಂಡು ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಕುಂಠಿತವಾಗಿದೆ ಎಂಬ ದೂರುಗಳು ವ್ಯಕ್ತವಾಗುತ್ತಿವೆ.

ಬಸವ ವಸತಿ ಯೋಜನೆ: ಸರ್ಕಾರ ಬಡವರಿಗಾಗಿ ನೀಡುವ ಬಸವ ವಸತಿ ಯೋಜನೆ ಮನೆಗಳೂ, ಮರಳು ಅಭಾವದಿಂದಾಗಿ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದ್ದು, ಉಪ್ಪಿನಂ ಗಡಿಯಂತಹ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಜೂರು ಆಗಿರುವ 22 ಮನೆಗಳ ಪೈಕಿ, 20 ಮನೆಗಳು ಮರಳು ಅಭಾವದಿಂದಾಗಿ ಅರ್ಧದಲ್ಲೆ ಸ್ಥಗಿತವಾಗಿವೆ.

ADVERTISEMENT

ಬಡವರು, ಕೂಲಿಯಾಳುಗಳಿಗೆ ಸರ್ಕಾರ ನೀಡಿರುವ ಮನೆ ನಿರ್ಮಾಣಕ್ಕೆ ಮರಳು ಅಭಾವ ಈ ರೀತಿಯ ಸಮಸ್ಯೆ ತಂದೊಡ್ಡಿದ್ದು, ಗ್ರಾಮ ವ್ಯಾಪ್ತಿಯಲ್ಲಿ ಖಾಸಗಿಯಾಗಿ ನಿರ್ಮಾಣ ಆಗುವ ಅದೆಷ್ಟೋ ಮನೆಗಳು, ಕಟ್ಟಡಗಳು ಅರ್ಧದಲ್ಲೇ ಸ್ಥಗಿತಗೊಂಡಿವೆ. ಈ ರೀತಿಯಾಗಿ ಜಿಲ್ಲೆಯಾದ್ಯಂತ ಸಮಸ್ಯೆ ತಲೆದೋರಿದೆ ಎಂಬ ಜನರು ದೂರುತ್ತಿದ್ದಾರೆ.

ಅರ್ಧದಲ್ಲಿ ರಸ್ತೆ ಕಾಮಗಾರಿ: ಮರಳು ಅಭಾವದಿಂದಾಗಿ ಗ್ರಾಮ ವ್ಯಾಪ್ತಿಯಲ್ಲಿ ನಡೆಯುವ ಬಹಳಷ್ಟು ರಸ್ತೆ, ಮೋರಿ ಮೊದಲಾದ ಕಾಮಗಾರಿಗಳು ಸ್ಥಗಿತ ಗೊಂಡಿದೆ.
ಶಾಸಕರ ಪ್ರದೇಶಾಭಿವೃದ್ಧಿ, ಪರಿಶಿಷ್ಟ ಜಾತಿ, ಪಂಗಡದ ಯೋಜನೆಗಳು, ಗ್ರಾಮ ಪಂಚಾಯಿತಿ ಅನುದಾನದ ಕಾಮಗಾರಿಗಳ ಪೈಕಿ ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ ಕಾಂ ಕ್ರಿಟ್‌ ರಸ್ತೆ, ಮೋರಿ ಮೊದಲಾದ ಕಾಮಗಾರಿಗಳು ನಡೆಯಬೇಕು. ಇದೀಗ ಮರಳು ಅಭಾವದಿಂದಾಗಿ ಬಹು ತೇಕ ಕಾಮಗಾರಿಗಳು ಅರ್ಧದಲ್ಲೇ ನಿಲುಗಡೆ ಗೊಂಡಿದೆ ಎಂದು ಹೇಳಲಾಗುತ್ತಿದೆ.

ಕಾರ್ಮಿಕರಿಗೂ ಕೆಲಸ ಇಲ್ಲ: ಮರಳು ಅಭಾವ ಒಂದೆಡೆ ಅಭಿವೃದ್ಧಿ ಕೆಲಸಗಳಿಗೆ ತೊಡಕು ಉಂಟಾಗಿದ್ದರೆ, ಇನ್ನೊಂದೆಡೆ ಕಾಮಗಾರಿಗಳು ಸ್ಥಗಿತ ಆಗಿರುವುದರಿಂದಾಗಿ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೆ ಕೈಕಟ್ಟಿ ಕೂರುವಂತಾಗಿದೆ.

ತಮ್ಮ ದುಡಿಮೆಗೂ ಕುತ್ತು ತಂದಿದೆ ಎಂದು ಕಟ್ಟಡ ಕಾರ್ಮಿಕರು ತಮ್ಮ ಅಸ ಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಮರಳು ಅಭಾವ ಜಿಲ್ಲೆಯ ಮಟ್ಟಿಗೆ ಶಾಪವಾಗಿ ಕಾಡತೊಡಗಿದ್ದು, ಒಟ್ಟು ವ್ಯವಸ್ಥೆ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.