ADVERTISEMENT

ಮಹಿಳಾ ಮೀಸಲಾತಿಯಿಂದ ಅಭಿವೃದ್ಧಿ: ಶೋಭಾ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:39 IST
Last Updated 10 ಜನವರಿ 2017, 7:39 IST
ಶಿರ್ವ: ಮಹಿಳಾ ಮೀಸಲಾತಿಯಿಂದಾಗಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಅವಕಾಶ ದೊರಕಿದ್ದು, ಪುರುಷರಂತೆ ಮಹಿಳೆಯರೂ ಕೂಡಾ ಅಧಿಕಾರವಹಿಸಿ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವಂತಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
 
ಕಟಪಾಡಿ ಕೋಟೆ ಗ್ರಾಮ ಪಂಚಾ ಯಿತಿಯ ಮಹಿಳಾ ಗ್ರಾಮ ಸಭೆಯ ಪ್ರಯುಕ್ತ ನಡೆದ ಮಹಿಳಾ ಸಂಭ್ರಮ ಕಾರ್ಯಕ್ರಮವನ್ನು ಭಾನುವಾರ ಉದ್ಘಾ ಟಿಸಿ ಮಾತನಾಡಿದರು. ಗ್ರಾಮಾಭಿ ವೃದ್ಧಿಯನ್ನು ಮಾಡುವಲ್ಲಿ ಅನೇಕ ಗ್ರಾಮ ಪಂಚಾಯಿತಿಗಳು ಅನುದಾನದ ಕೊರತೆ ಯನ್ನು ಎದುರಿಸುತ್ತಿವೆ. ಹೀಗಾಗಿ, ಅನು ದಾನ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸಬೇಕು. ಮಾತ್ರ ವಲ್ಲದೆ ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
 
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಹಿಳೆಯರ ಕೈಯಲ್ಲಿ ಪಂಚಾಯಿತಿ ಅಧಿಕಾರದ ಚುಕ್ಕಾಣಿ ನೀಡಿದಲ್ಲಿ ಯಾವ ರೀತಿ ಗ್ರಾಮೀಣಾಭಿವೃದ್ಧಿ ಮಾಡ ಬಹುದು ಎಂಬುದನ್ನು ರಾಜ್ಯದ ಅನೇಕ ಪಂಚಾಯಿತಿಗಳು ತೋರಿಸಿಕೊಟ್ಟಿವೆ. ಹಾಗಾಗಿ ಹೆಚ್ಚಿನ ಗ್ರಾಮಗಳು ಸುಧಾರ ಣೆಯಾಗುತ್ತಿವೆ ಎಂದರು.
 
ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೃತಿಕಾ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೀಟಾ ಎಲ್.ಗೋನ್ಸಾಲ್ವಿಸ್, ಜಿಲ್ಲಾ ಪಂ ಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ರವೀಂದ್ರನಾಥ್  ಶೆಟ್ಟಿ, ಕಟಪಾಡಿ ಎಸ್.ವಿ.ಎಸ್. ಕಾಲೇಜು ಸಂಚಾಲಕ ಕೆ.ವಸಂತ ಮಾಧವ ಭಟ್, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜೇಶ್ ಕುಮಾರ್ ಅಂಬಾಡಿ ಉಪಸ್ಥಿತರಿದ್ದರು.
 
ಕೋಟೆ ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷ ಗಣೇಶ್ ಕುಮಾರ್ ಸ್ವಾಗತಿಸಿದರು. ಪವಿತ್ರ ಶೆಟ್ಟಿ, ರತ್ನಾಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಸುರೇಖಾ ವಂದಿಸಿದರು.
 
**
ಮಹಿಳೆಯರ ದರ್ಬಾರು
ನಮ್ಮ ರಾಜ್ಯದಲ್ಲಿ ಮನೆಯಿಲ್ಲದ ವರು ಇದ್ದಾರೆ. ಆದರೆ, ಮೊಬೈಲ್ ಇಲ್ಲದವರಿಲ್ಲ. ವಿದ್ಯುನ್ಮಾನ ಯುಗದಲ್ಲಿ ಮೊಬೈಲ್ ಮೂಲಕ ಸಂದೇಶ, ಮಾಹಿತಿ ಕಳುಹಿಸಿ ಗ್ರಾಮ ಸಭೆಯನ್ನು ಯಶಸ್ವಿಯಾಗಿ ನಡೆಸಬಹುದು ಎಂಬುದನ್ನು ರಾಜ್ಯದ ಅನೇಕ ಗ್ರಾಮ ಪಂಚಾಯಿತಿಗಳು ಈಗಾಗಲೇ ತೋರಿಸಿಕೊಟ್ಟಿವೆ ಎಂದು ಈ ಸಂದರ್ಭ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. 
 
ರಾಜ್ಯದ 6012 ಗ್ರಾಮ ಪಂಚಾಯಿತಿಗಳಲ್ಲಿ 3000 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 99,500 ಗ್ರಾಮ ಪಂಚಾ ಯಿತಿ ಸದಸ್ಯರಿದ್ದು, ಅದರಲ್ಲಿ ಒಟ್ಟು 55ಸಾವಿರ ಸದಸ್ಯರು ಮಹಿಳೆಯರೇ ಆಗಿದ್ದಾರೆ ಎಂದು ಮಾಹಿತಿ ನೀಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.