ADVERTISEMENT

ಯೋಗ ಜಗತ್ತಿಗೇ ವಿಸ್ತರಿಸಿದೆ: ಸಚಿವ ರೈ

ಮಂಗಳೂರು ವಿಶ್ವವಿದ್ಯಾಲಯ: ಅಂತರರಾಷ್ಟ್ರೀಯ ಯೋಗ ಶಿಕ್ಷಕರ ತರಬೇತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:59 IST
Last Updated 3 ಫೆಬ್ರುವರಿ 2017, 6:59 IST
ಯೋಗ ಜಗತ್ತಿಗೇ ವಿಸ್ತರಿಸಿದೆ: ಸಚಿವ ರೈ
ಯೋಗ ಜಗತ್ತಿಗೇ ವಿಸ್ತರಿಸಿದೆ: ಸಚಿವ ರೈ   

ಮುಡಿಪು: ‘ಭಾರತವು ವಿಮಾನ ಅಥವಾ ಟೆಲಿಫೋನ್‌ನನ್ನು ಮೊದಲಿಗೆ ಕಂಡು ಹಿಡಿಯಲಾಗದಿದ್ದರೂ ನಾವು ರೋಗದಿಂದ ಮುಕ್ತವಾಗುವಂತಹ ಯೋಗವನ್ನು ಕಂಡು ಹಿಡಿದು ಇಡೀ ಜಗತ್ತಿಗೆ ಕೊಡುಗೆ ನೀಡಿದ್ದೇವೆ. ಭಾರತ ದಿಂದ ಆರಂಭವಾದ ಯೋಗ ಶಿಕ್ಷಣ ಇಂದು ವಿಶ್ವವ್ಯಾಪಿಯಾಗಿರುವುದು ಹೆಮ್ಮಯ ಸಂಗತಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಮಾನವಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಹಾಗೂ ಧರ್ಮನಿಧಿ ಯೋಗ ಪೀಠ ಆಶ್ರಯದಲ್ಲಿ ದಕ್ಷಿಣ ಕೊರಿಯಾದ ವಾಂಕ್ವಾಂಗ್ ಡಿಜಿಟಲ್ ವಿಶ್ವವಿದ್ಯಾಲ ಯದ ಸಹಯೋಗದಲ್ಲಿ ಐದು ದಿನಗಳ ಕಾಲ ನಡೆಯಲಿರುವ ‘ಅಂತರರಾ ಷ್ಟ್ರೀಯ ಯೋಗ ಶಿಕ್ಷಕರ ತರಬೇತಿ’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೂ ಯೋಗ ಶಿಕ್ಷಣದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಮಂಗಳೂರು ವಿವಿಯಲ್ಲಿ ಬೇಡಿಕೆಯಿ ರುವ ಯೋಗ ತರಬೇತಿ ಕೇಂದ್ರ ಸ್ಥಾಪ ನೆಯ ಬಗ್ಗೆಯೂ ಮುಖ್ಯಮಂತ್ರಿಯ ವರಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ಬರು ವಂತೆ ಪ್ರಯತ್ನ ಮಾಡುತ್ತೇನೆ’ ಎಂದರು.

ಲೋನವಾಲ ಕೈವಲ್ಯಧಾಮದ ವೈಜ್ಞಾನಿಕ ಸಂಶೋಧನಾ ಕೇಂದ್ರದ ಸಂ ಶೋಧನಾ ಅಧಿಕಾರಿ ಹಾಗೂ ಸರ್ಜನ್ ಡಾ.ಎಸ್.ಡಿ.ಪಾಠಕ್ ಅವರು, ‘ಇಂದು ಜನರು ಹೆಚ್ಚಾಗಿ ಮಾನಸಿಕ ಒತ್ತಡಗ ಳಿಂದಲೇ ಕಾಯಿಲೆಗಳಿಗೆ ತುತ್ತಾಗುತ್ತಿ ದ್ದಾರೆ. ಮನುಷ್ಯರು ಮಾನಸಿಕ ಒತ್ತಡ ಮುಕ್ತರಾಗಿ ಜೀವನ ನಡೆಸಬೇಕಾಗಿದ್ದು, ಈ ನಿಟ್ಟಿನಲ್ಲಿ ಯೋಗವು ಬಹಳ ಮಹತ್ವ ಪೂರ್ಣವಾದುದು’ ಎಂದರು.

ದಕ್ಷಿಣ ಕೊರಿಯಾದ ವಾಂಕ್ವಾಂಗ್ ವಿಶ್ವವಿದ್ಯಾಲಯದ ಪ್ರೊ.ಜಾಂಗ್ ಸೂನ್ ಸೋಯ್ ಅವರು ಮಾತನಾಡಿ, ‘ಯೋಗವು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಯೋಗದಿಂದ ಮಾನವೀಯತೆಯ ಸಂಬಂಧಗಳನ್ನು ವೃದ್ಧಿಸಲು ಸಾಧ್ಯವಾಗಿದೆ. ಇಂದು ದಕ್ಷಿಣ ಕೊರಿಯಾ ರಾಷ್ಟ್ರದಲ್ಲೂ ಯೋಗವು ಪ್ರಸಿದ್ಧಿಯಾಗಿ ಜನರು ಹೆಚ್ಚಿನ ಒಲವನ್ನು ಹೊಂದಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿ ಪ್ರೊ. ಕೆ.ಭೈರಪ್ಪ, ‘ಯೋಗವು ಮನಸ್ಸು ಮತ್ತು ದೇಹದ ಸಮತೋಲನವನ್ನು ಕಾಪಾಡಿ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಮಂಗಳೂರು ವಿವಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ವಾವಂತೆ ಯೋಗ ಸರ್ಟಿಫಿಕೆಟ್ ಕೋರ್ಸ್ ಹಾಗೂ ಡಿಪ್ಲೊಮ ಕಳೆದ ವರ್ಷದಿಂದ ಜಾರಿ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

ಮಂಗಳೂರು ವಿವಿಯ ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಕೃಷ್ಣ ಶರ್ಮ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಎ.ಎಂ.ಖಾನ್ ಸ್ವಾಗತಿಸಿ,  ಉದಯ್ ವಂದಿಸಿದರು. ಪ್ರೊ. ರವಿ ಶಂಕರ್ ರಾವ್ ನಿರೂಪಿಸಿದರು.

***

ಮಂಗಳೂರು ವಿವಿಯಲ್ಲಿ ಬೇಡಿಕೆಯಿರುವ ಯೋಗ ತರಬೇತಿ ಕೇಂದ್ರ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿ ಅವರಲ್ಲಿ ಚರ್ಚಿಸಿ ಕಾರ್ಯ ರೂಪಕ್ಕೆ ಬರುವಂತೆ ಪ್ರಯತ್ನ ಮಾಡುತ್ತೇನೆ.
- ಬಿ. ರಮಾನಾಥ ರೈ, ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.