ADVERTISEMENT

ಲಕ್ಷ ದೀಪೋತ್ಸವ: ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 5:14 IST
Last Updated 18 ನವೆಂಬರ್ 2017, 5:14 IST

ಉಜಿರೆ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ವೀಕ್ಷಿಸಲು ಶುಕ್ರವಾರ ನಾಡಿನೆಲ್ಲೆಡೆಯಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಬಂದಿದ್ದರು.

ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಅಲ್ಲಿಂದ ದೇವಸ್ಥಾನಕ್ಕೆ ನಡೆದು ಕೊಂಡು ಬರುವುದು ಸಂಪ್ರದಾಯ. ನದಿ ಸ್ನಾನದೊಂದಿಗೆ ದೈಹಿಕವಾಗಿ ಶುಚಿ ಯಾಗಿ, ದೇವರ ದರ್ಶನ ಮಾಡಿ, ಸೇವೆ ಅರ್ಪಿಸಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.

ರಾಜ್ಯ ಮಟ್ಟದ ವಸ್ತು ಪ್ರದರ್ಶನ, ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್ ಮ್ಯೂಸಿಯಂ, ಲಲಿತೋದ್ಯಾನ, ರತ್ನಗಿರಿ, ತಾಳೆಗರಿ ಗ್ರಂಥಾಲಯ ವೀಕ್ಷಿಸಿ, ಜನರು ತಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಂಡರು.

ADVERTISEMENT

ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ವಿದ್ವಾಂಸರ ಉಪನ್ಯಾಸ ಆಲಿಸಿ ಆನಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂ ಜನೆಯೊಂದಿಗೆ ಪ್ರೇಕ್ಷಕರಿಗೆ ತೃಪ್ತಿ, ಸಂತೋಷವನ್ನು ನೀಡಿದವು. ಅನೇಕ ಮಂದಿ ಕಲಾವಿದರು ಶಂಖ, ಕೊಂಬು, ಕಹಳೆ, ಜಾಗಟೆ, ಚೆಂಡೆ ವಾದನದೊಂದಿಗೆ ಕಲಾ ಸೇವೆ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.