ADVERTISEMENT

ವರದಿ ನೀಡದ ಅಧಿಕಾರಿಗಳಿಗೆ ಎಚ್ಚರಿಕೆ

ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2016, 5:03 IST
Last Updated 2 ಜುಲೈ 2016, 5:03 IST

ಸುಳ್ಯ: ಸುಳ್ಯ ತಾಲ್ಲೂಕು ಮಟ್ಟದ ತ್ರೈಮಾ ಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಪಯಸ್ವಿನಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್. ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾ ಕೃಷ್ಣ ಬೊಳ್ಳೂರು, ಕಾರ್ಯನಿರ್ವಹಣಾ ಧಿಕಾರಿ ಮಧುಕುಮಾರ್ ವೇದಿಕೆಯಲ್ಲಿ ದ್ದರು. ಸಭೆಗೆ ಕಂದಾಯ ಇಲಾಖೆಯಿಂದ ವರದಿಯೂ ಬಂದಿಲ್ಲ, ಅಧಿಕಾರಿಗಳು ಬಂದಿಲ್ಲ ಎಂಬ ವಿಷಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಭೆಯ ಗಮನಕ್ಕೆ ತಂದರು.

ಸಭೆಗೆ ತಹಶೀಲ್ದಾರ್ ಅನಂತಶಂಕರ ಅವರನ್ನು ಕರೆಸಿ ಪ್ರಶ್ನಿಸಿದಾಗ ಏನು ವರದಿ ನೀಡಬೇಕು, ನೀಡುವಂತದ್ದೇನೂ ಇಲ್ಲ ಎಂದು ಅವರು ಹೇಳಿದ್ದು ಸಭೆಯಲ್ಲಿ ದ್ದವರ ಆಕ್ರೋಶಕ್ಕೆ ಕಾರಣವಾಯಿತು. ತಹಶೀಲ್ದಾರ್ ಕ್ರಮವನ್ನು ಶಾಸಕ ಅಂಗಾರ ಖಂಡಿಸಿದರು. ತಹಶೀಲ್ದಾರ್ ಮಾನವೀಯತೆಯಿಂದ ವರ್ತಿಸುತ್ತಿಲ್ಲ, ಎಲ್ಲಾ ದಾಖಲೆ ನೀಡಿ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದರೂ ತಿರಸ್ಕರಿಸುತ್ತಾರೆ.

ಪರಿಹಾರಕ್ಕೆ ಮನವಿ ಮಾಡಿದರೆ ತನಗೆ ಆವಾಜ್ ಮಾಡಿದ್ದಾರೆ ಎಂದು ಸದಸ್ಯ ರಾಧಾಕೃಷ್ಣ ಪರಿವಾರಕಾನ ದೂರಿದರು. 94ಸಿ ಅಡಿ ತಾರತಮ್ಯ ನೀತಿ ಅನುಸರಿ ಸಲಾಗುತ್ತಿದೆ ಎಂದು ಅವರು ಆರೋಪಿ ಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ಮನ್ಮಥ ಇದಕ್ಕೆ ದನಿಗೂಡಿಸಿದರು.

ಕಳೆದೊಂದು ವಾರದಿಂದ ನೆಲ್ಲೂರು ಕೆಮ್ರಾಜೆ ಹಾಗೂ ಮರ್ಕಂಜ ಗ್ರಾಮ ಗಳಿಗೆ ವಿದ್ಯುತ್ ಸರಬರಾಜು ಸರಿ ಯಾಗಿಲ್ಲ ಎಂದು ಹರೀಶ್ ಕಂಜಿಪಿಲಿ ಎಚ್ಚರಿಕೆ ನೀಡಿದರು.ಮೆಸ್ಕಾಂ ಧೋರಣೆ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಖಾಸಗಿ ರಸ್ತೆಗಳು ಪಿಡಬ್ಲುಡಿ ರಸ್ತೆಗೆ ಸೇರುವಲ್ಲಿ ಮೋರಿ ನಿರ್ಮಿಸದೇ ಚರಂಡಿ ಮುಚ್ಚಿ ರಸ್ತೆ ನಿರ್ಮಿಸುತ್ತಾರೆ. ಹೀಗಾಗಿ ಚರಂಡಿ ನೀರು ರಸ್ತೆಯಲ್ಲೇ ಹೋಗು ವಂತಾಗಿದೆ. ಈ ಕುರಿತು ಕ್ರಮ ಕೈಗೊಳ್ಳ ಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಆಗ್ರಹಿಸಿದರು. ರಸ್ತೆ ಚರಂಡಿ ನಿರ್ಮಿಸು ವಾಗ ಖಾಸಗಿ ರಸ್ತೆ ಸಂಪರ್ಕ ಇರುವಲ್ಲಿ ಅಧಿಕಾರಿಗಳು ಹಾಗೇ ಬಿಟ್ಟಿರುತ್ತಾರೆ. ಸಂಪರ್ಕ ರಸ್ತೆಗೆ ಮೋರಿ ಹಾಕದಿದ್ದ ಪಕ್ಷದಲ್ಲಿ ಮುಲಾಜು ಇಲ್ಲದೆ ಚರಂಡಿ ಸರಿಪಡಿಸಬೇಕು ಎಂದು ಅಂಗಾರ ಸೂಚಿಸಿದರು.

ತೊಡಿಕಾನ ಅಂಗನವಾಡಿ ನಿವೇಶ ನಕ್ಕೆ ₹ 3 ಲಕ್ಷ ಖರ್ಚಾಗಿದೆ. ಒಟ್ಟು ₹ 4 ಲಕ್ಷ ಮೂಜೂರಾಗಿದೆ. ಹಾಗಾಗಿ ಕಟ್ಟಡ ಕಾಮಗಾರಿ ಆಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿಯರ್ ಹೇಳಿದ್ದು ವ್ಯಾಪಕ ಚರ್ಚೆಗೆ ಕಾರಣ ವಾಯಿತು. ಕಟ್ಟಡಕ್ಕೆ ಬಂದು ಅನು ದಾನದಲ್ಲಿ ನಿವೇಶನ ಸಮತಟ್ಟು ಮಾಡಿ ದ ಕ್ರಮ ಸರಿಯಲ್ಲ ಅದಕ್ಕೆ ಬೇರೆ ಅನು ದಾನ ಬಳಕೆ ಮಾಡಬೇಕಿತ್ತು ಎಂದು ಅಂಗಾರ ಹೇಳಿದರು.

ಆಲೆಟ್ಟಿ ಆಶ್ರಮ ಶಾಲೆಯ ಮಗುವಿಗೆ ಬಿಸಿ ಚಹಾ ಬಿದ್ದು ತೊಡೆ ಸುಟ್ಟು ಹೋಗಿದೆ. ಅಲ್ಲಿನ ವಾರ್ಡನ್ ಮನೆ ಯವರಿಗೆ ವಿಷಯ ತಿಳಿಸಿಲ್ಲ. ಔಷಧಿ ಯನ್ನೂ ಮಾಡಿಲ್ಲ. ವಿಷಯ ತಿಳಿದು ಮಗುವಿನ ಪೋಷಕರು ಬಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖ ಲಿಸಿದ್ದಾರೆ. ಅಧಿಕಾರಿ ಬೇಜವಾ ಬ್ದಾರಿಗೆ ಯಾರು ಹೋಣೆ ಎಂದು ಪಶ್ನಿಸಿದ ರಾಧಾಕೃಷ್ಣ ಪರಿವಾರಕಾನ ಅಂತಹ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.