ADVERTISEMENT

ವೃತ್ತಿ ಆಯ್ಕೆಯಲ್ಲಿ ತೃಪ್ತಿ ಮುಖ್ಯ: ಪೈ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 10:04 IST
Last Updated 22 ಜುಲೈ 2017, 10:04 IST

ಮಂಗಳೂರು: ದೊಡ್ಡ ಮೊತ್ತದ ಸಂಬಳ ಸಿಗುವ ವೃತ್ತಿಯನ್ನೇ ಎಲ್ಲರೂ ಬಯ ಸುತ್ತಾರೆ. ಆದರೆ ಆ ವೃತ್ತಿಯ ಬಗ್ಗೆ ಪ್ರೀತಿ ಇಲ್ಲದೇ ಇದ್ದರೆ, ಅಂತಹ ವೃತ್ತಿಯನ್ನು ಬಹಳ ಕಾಲ ಮುಂದುವರೆಸುವುದು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂ ರಿನ ಸೆಂಚುರಿ ರಿಯಲ್‌ ಎಸ್ಟೇಟ್‌ ಹೋಲ್ಡಿಂಗ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ರವೀಂದ್ರ ಪೈ ಹೇಳಿದರು.

ರಥಬೀದಿಯ ಡಾ. ಪಿ. ದಯಾನಂದ ಪೈ– ಪಿ. ಸತೀಶ್‌ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೃತ್ತಿಕ್ಷೇತ್ರ ದಲ್ಲಿ ಕನಸುಗಳು ನಾವು ಬೆಳೆದ ವಾತಾ ವರಣವನ್ನು ಅವಲಂಬಿಸಿ ಇರುತ್ತವೆ. ಆದ್ದರಿಂದ ದೊಡ್ಡ ಮೊತ್ತದ ಸಂಬಳ ವನ್ನು ಮಾತ್ರ ನಿರೀಕ್ಷಸದೇ ಅದು ನಮ್ಮ ಸಾಮರ್ಥ್ಯಕ್ಕೆ ನಿಲುಕುವುದೇ ಎಂಬು ದನ್ನು ಅರಿಯಬೇಕು. ಮೊದಲು ಸಣ್ಣಮ ಟ್ಟಿನ ವೃತ್ತಿ ದೊರೆತರೂ ಅಡ್ಡಿಯಿಲ್ಲ, ಬಳಿಕ ಇಷ್ಟಪಡುವ ಕ್ಷೇತ್ರದಲ್ಲೇ ತೊಡಗಿ ಸಿಕೊಳ್ಳುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದರು.

ಬೆಳಿಗ್ಗೆ 9ರಿಂದ 5 ಗಂಟೆಯವರೆಗಿನ ವೃತ್ತಿಗೆ ಸೀಮಿತರಾಗಿ ಉಳಿಯುವ ಪರಿ ಸ್ಥಿತಿ ಈಗಿಲ್ಲ. ಕೈಗೆತ್ತಿಕೊಂಡ ಕೆಲಸವನ್ನು ಮುಕ್ತಾಯ ಮಾಡುವ ಸಮರ್ಪಣಾ ಮನೋಭಾವ ಅಗತ್ಯ. ಆದ್ದರಿಂದ ದುಡಿ ಮೆಯ ಬಗ್ಗೆ ಬದ್ಧತೆ ಅಗತ್ಯ ಎಂದು ಅವರು ವಿವರಿಸಿದರು.

ADVERTISEMENT

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪ್ರದೀಪ್‌ ಡಿಸೋಜ ಮಾತನಾಡಿ, ‘ ಗ್ರಾಮೀಣ ಪ್ರದೇಶದಿಂದ ಬಂದು ಅಧ್ಯಯನ ಮಾಡಿದ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವಾಗ ಕಂಪೆನಿಗಳು ರಿಯಾಯಿತಿ ತೋರಿಸಬೇಕು. ಅವರು ಕಡಿಮೆ ಸೌಕರ್ಯದಲ್ಲಿ ಶಿಕ್ಷಣ ಪಡೆದಿರುತ್ತಾರೆ. ಆದರೆ ತರಬೇತಿ ನೀಡಿ ದರೆ ಉತ್ತಮ ರೀತಿಯಲ್ಲಿ ವೃತ್ತಿ ನಿಭಾ ಯಿಸುವ ಸಾಮರ್ಥ್ಯ ಅವರಲ್ಲಿದೆ’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರ್ಕಾರ ಕಳೆದ ವರ್ಷ ₹ 145 ಕೋಟಿ ಎತ್ತಿಟ್ಟಿದ್ದರೆ, ಈ ವರ್ಷ ₹ 280 ಕೋಟಿ ಎತ್ತಿಟ್ಟಿದೆ ಎಂದು ವಿವರಿಸಿದರು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಉದಯಶಂಕರ್‌ ಎಚ್‌. ಅಧ್ಯಕ್ಷತೆ ವಹಿಸಿದ್ದರು. ಮಂಡ ಮಸ್‌ ಎಜುಕೇಶನ್‌ ಅಕಾಡೆಮಿಯ ಪ್ರಾದೇಶಿಕ ಮುಖ್ಯಸ್ಥ ರವೀಂದ್ರ ಎಸ್‌. ನಾಯಕ್‌, ಪೋಷಕ– ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ್‌, ಮಧು ಸೂದನ್‌ ಭಟ್‌, ಸಂಯೋಜಕಿ ಪ್ರೊ. ಗೀತಾ ಎಂ.ಎಲ್‌. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.