ADVERTISEMENT

ಶಿಕ್ಷಕರಲ್ಲಿ ಶಿಕ್ಷಣದ ಆಸಕ್ತಿ ಕಡಿಮೆ–ಆತಂಕ

​ಪ್ರಜಾವಾಣಿ ವಾರ್ತೆ
Published 21 ಮೇ 2017, 8:44 IST
Last Updated 21 ಮೇ 2017, 8:44 IST

ಉಪ್ಪಿನಂಗಡಿ: ಮಕ್ಕಳ ಕಲಿಕಾ ಸಾಮ ರ್ಥ್ಯದಲ್ಲಿ ದೋಷವಿಲ್ಲ, ಕಲಿಸುವ ಶಿಕ್ಷಕರಲ್ಲಿ ದೋಷವಿದೆ. ಶಿಕ್ಷಕರಲ್ಲಿ ಗುಣಾತ್ಮಕ ಶಿಕ್ಷಣದ ಆಸಕ್ತಿ ಕಡಿಮೆ ಯಾಗುತ್ತಿದೆ ಹೀಗಾಗಿ ಶಿಕ್ಷಣದಲ್ಲಿ ಗುಣಾತ್ಮಕತೆ ಇಳಿಮುಖವಾಗುತ್ತಿದೆ ಎಂದು ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅಭಿಪ್ರಾಯಪಟ್ಟರು.

ಬೆಂಗಳೂರಿನ ಮಗು ಮತ್ತು ಕಾನೂನು ಕೇಂದ್ರ ಹಾಗೂ ಶಾಲಾಭಿ ವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ದ.ಕ. ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಉಪ್ಪಿನಂಗಡಿ ಸರ್ಕಾರಿ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ‘ಶಿಕ್ಷಣದ ಹಕ್ಕು ಉಪನ್ಯಾಸ ಸರಣಿ-14’ರಲ್ಲಿ ಅವರು ಮಾತನಾಡಿದರು.

‘ಶಿಕ್ಷಕರಿಗೆ ಜ್ಞಾನದ ಕೊರತೆ ಇದೆ. ಪ್ರಸಕ್ತ ಶಿಕ್ಷಣ ಉದ್ಯೋಗಕ್ಕೆ ದಾರಿ ಎಂಬಂತೆ ಬಳಕೆಯಾಗುತ್ತಿದೆ. ಆದರೆ ನಿಜವಾಗಿಯೂ ಶಿಕ್ಷಣ ಬದುಕು ರೂಪಿಸುವಂತೆ ಬಳಕೆಯಾಗಬೇಕಾಗಿದೆ. ಗುಣಮಟ್ಟದ ಶಿಕ್ಷಣದತ್ತ ವಿಶೇಷ ಒತ್ತು ನೀಡುವುದರಿಂದ ಮಕ್ಕಳನ್ನು ಉತ್ತಮ ಬದುಕು ರೂಪಿಸುವ ಪ್ರಜೆಗಳನ್ನಾಗಿಸಲು ಸಾಧ್ಯ’ ಎಂದರು.

ADVERTISEMENT

ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ದ.ಕ. ಜಿಲ್ಲಾಧ್ಯಕ್ಷ ಎಸ್.ಎಂ. ಇಸ್ಮಾಯಿಲ್ ನೆಲ್ಯಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲಾ ಶಿಕ್ಷಕ ಸಂಘದ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ. ಐತ್ತಪ್ಪ ನಾಯ್ಕ್ ಮಾತನಾಡಿದರು.ವೇದಿಕೆಯ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಮೊಯಿದ್ದೀನ್‌ ಕುಟ್ಟಿ ಸ್ವಾಗತಿಸಿ, ಶಿಕ್ಷಕಿ ಕಸ್ತೂರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.