ADVERTISEMENT

‘ಶಿಕ್ಷಣ, ಆರೋಗ್ಯ–ಕ್ರೈಸ್ತರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:44 IST
Last Updated 19 ಮೇ 2017, 5:44 IST
ವಿಟ್ಲ ಸಮೀಪದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಫಾತಿಮಾ ಮಾತೆಯ ದಿವ್ಯ ಸಂದೇಶದ ಶತಮಾನೋತ್ಸವ ಸಮಾರೋಪ ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನದ ರಜತ ಮಹೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ  ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
ವಿಟ್ಲ ಸಮೀಪದ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಫಾತಿಮಾ ಮಾತೆಯ ದಿವ್ಯ ಸಂದೇಶದ ಶತಮಾನೋತ್ಸವ ಸಮಾರೋಪ ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನದ ರಜತ ಮಹೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.   

ವಿಟ್ಲ: ಶಿಕ್ಷಣ, ಆರೋಗ್ಯ, ಕೃಷಿ ವಿಚಾರದಲ್ಲಿ ಕ್ರೈಸ್ತ ಸಮುದಾಯ ಹೆಚ್ಚಿನ ಆದ್ಯತೆ ನೀಡಿದೆ. ಮೂಲಭೂತ ಸೌಕರ್ಯಗಳು ಇಲ್ಲದ ಸಮಯದಲ್ಲಿ ಚರ್ಚ್‍ಗಳ ಸಮೀಪ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಹೆಗ್ಗಳಿಕೆಯೂ ಈ ಸಮು ದಾಯಕ್ಕೆ ಸಲ್ಲುತ್ತದೆ. ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ನಿರ್ಮಿಸುವ ಮೂಲಕ ಸಮಾಜ ಕಟ್ಟುವ ಕಾರ್ಯ ವನ್ನು ಮಾಡಿದೆ. ಊರಿಗೆ ಕೊಡುಗೆಗ ಳನ್ನು ನೀಡುವಲ್ಲಿ ಧರ್ಮಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಬುಧವಾರ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಫಾತಿಮಾ ಮಾತೆಯ ದಿವ್ಯ ಸಂದೇಶದ ಶತಮಾನೋತ್ಸವ ಸಮಾರೋಪ ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನದ ರಜತ ಮಹೋ ತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣದ ಸೌಲಭ್ಯದ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಇಷ್ಟು ಮುಂದುವರಿಯಲು ಸಾಧ್ಯವಾಗಿದೆ. ಅತ್ಯಧಿಕ ಶಿಕ್ಷಣ ಕೇಂದ್ರಗಳು ನಮ್ಮ ಜಿಲ್ಲೆಯಲ್ಲಿದ್ದು, ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಬಿಷಪ್ ಅವರ, ಧರ್ಮಪ್ರಾಂತ್ಯದ ಆಡಳಿತದಲ್ಲಿದೆ. ಕೃಷಿಯ ಪ್ರಯೋಗಶೀಲತೆಯನ್ನು ಮಾಡುವುದರಲ್ಲಿ ಕ್ರೈಸ್ರರು ಮುಂದಿ ದ್ದಾರೆ. ಯುವ ಸಂಚಲನದ ಮೂಲಕ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಮುಂದಾ ಗಿರುವುದು ಉತ್ತಮ ಬೆಳವಣಿಗೆ ಯಾಗಿದೆ ಎಂದರು.

ADVERTISEMENT

‘ಈಗಾಗಲೇ ಬಿಷಪ್ ಅವರ ಸೂಚನೆಯ ಮೇರೆಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಚರ್ಚ್ ಹಾಗೂ ಶಾಲೆಗೆ ಸುಮಾರು ₹ 1 ಕೊಟಿ ಅನು ದಾನ ನೀಡಲಾಗಿದೆ. ಈ ಚರ್ಚ್‌ಗೂ ನಮ್ಮ ಕಡೆಯಿಂದ ಸಹಕಾರವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಡ್ಪಳ್ಳಿ ಜಪ ಮಾಲೆ ಮಾತೆಯ ದೇವಾಲಯದ ಧರ್ಮಗುರು ಜಾನ್ ಡಿ ಸೋಜ ಮಾತ ನಾಡಿ, ದೇವರನ್ನು ನಂಬಿದವರು ಉತ್ತಮ ಜೀವನ ನಡೆಸಲು ಸಾಧ್ಯ. ದೇವರ ಸಂದೇಶವನ್ನು ಎಲ್ಲರು ಪಾಲಿಸಿ ಅನುಸರಿಸಿದಾಗ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು.

ಮೊಗರ್ನಾಡು ಸಂತ ಜಾನ್ ಪಾವ್ಲ್ ದ್ವಿತೀಯ ವಲಯದ ಐಸಿವೈಎಂ ಅಧ್ಯಕ್ಷ ಸಂದೇಶ್ ಫೆರಾವೊ ಅವರನ್ನು ಸನ್ಮಾನಿಸ ಲಾಯಿತು.

ಚರ್ಚ್‌ನ ಅಭಿವೃದ್ಧಿಗೆ ಶ್ರಮಿಸಿದ ಸಂಘಟನೆಗಳ ಪಧಾಧಿಕಾ ರಿಗಳನ್ನು ಗೌರವಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯ ಐಸಿವೈಎಂ ನಿರ್ದೇಶಕ ರೊನಾಲ್ಡ್ ಡಿಸೋಜ, ಮೊಗರ್ನಾಡು ಸಂತ ಜಾನ್ ಪಾವ್ಲ್ ದ್ವಿತೀಯ ವಲಯದ ಐಸಿವೈಎಂ ನಿರ್ದೇಶಕ ಹೆನ್ರಿ ಡಿಸೋಜ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ, ಉಪಾಧ್ಯಕ್ಷೆ ಸೆಲ್ವಿನ್ ಡಿಸೋಜ, ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಧರ್ಮಗುರು ಗಳಾದ ವಿಶಾಲ್ ಮೆಲ್ವಿನ್ ಮೊನಿಸ್, ಪಾಲನ ಮಂಡಳಿ ಉಪಾಧ್ಯಕ್ಷ ರೈಮಂಡ್ ಡಿಸೋಜ, ಕಾರ್ಯದರ್ಶಿ ವಿಲ್ಲಿಯಂ ಡಿಸೋಜ ಇದ್ದರು.

ಐಸಿವೈಎಂ ಅಧ್ಯಕ್ಷ ಲೈಝಿಲ್ ಪ್ರೇಮ್ ಡಿಸೋಜ ಸ್ವಾಗತಿಸಿದರು. ಸೀಮಾ ವರದಿ ವಾಚನ ಮಾಡಿದರು. ರಾಜೇಶ್ ಫೆರಾವೋ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.