ADVERTISEMENT

ಶಿಕ್ಷಣ ಇಲಾಖೆ ಅಧಿಕಾರಿ ಹೇಳಿಕೆಗೆ ಖಂಡನೆ

ಕಿಲ್ಪಾಡಿ ಪಂಚಾಯಿತಿ ಗ್ರಾಮ ಸಭೆ: ಪಾಲಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 6:15 IST
Last Updated 31 ಡಿಸೆಂಬರ್ 2016, 6:15 IST

ಮೂಲ್ಕಿ: ಮೂಲ್ಕಿ ಹೋಬಳಿಯ ಕಿಲ್ಪಾಡಿ ಗ್ರಾಮ ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿ ರಘುನಾಥ್‌ ಅವರು ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ಕನ್ನಡ ಶಾಲೆಗಳು ಬಾಗಿಲು ಮುಚ್ಚುವ ಹಂತದಲ್ಲಿವೆ.

ನನ್ನ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದೇನೆ, ಮಂತ್ರಿಗಳು ಕೂಡಾ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸುತ್ತಿದ್ದಾರೆ, ಆರ್‌ಟಿಇ ಯಲ್ಲಿ ಅವಕಾಶವಿದೆ ಎಂದು ಹೇಳು ತ್ತಿದ್ದಂತೆ ಸಭೆಯಲ್ಲಿ ಪಾಲಕರು ಹಾಗೂ ಪಂಚಾಯಿತಿ ಸದಸ್ಯರು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. 

ಕೆಂಚನಕೆರೆ ಸರ್ಕಾರಿ ಶಾಲೆಯಲ್ಲಿ  ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್‌ ರಾವ್ ಅಧ್ಯಕ್ಷತೆಯಲ್ಲಿ ಶುಕ್ರ ವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದು ಕೊಂಡರು. ಸರ್ಕಾರಿ ಶಾಲೆಗಳು ನಿಮ್ಮಂತಹ ಅಧಿಕಾರಿಗಳಿಂದಲೆ ಮು ಚ್ಚುವ ಹಂತದಲಿವೆ.  ನಿಮ್ಮ ಮಕ್ಕಳನ್ನು ಬೇಕಾದರೆ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಿ. ಕನ್ನಡದಲ್ಲಿ ಕಲಿತು ಸರ್ಕಾರಿ ಉದ್ಯೋಗ ಪಡೆದು ಸರ್ಕಾರದ ವಿರುದ್ಧ ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡುವ ನಿಮ್ಮ ಧೋರಣೆ  ಖಂಡಿಸಲಾಗುತ್ತದೆ ಎಂದರು.

ಕನ್ನಡ ಶಾಲೆ ಶಿಕ್ಷಕರಾಗಿರುವ ನೀವು ಈ ರೀತಿಯಾದ ಹೇಳಿಕೆ ನೀಡಬಾರದು. ಇಂಗ್ಲಿಷ್ ಶಾಲೆಗಳ ಕುರಿತು ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಿರಾ. ಎಂದು ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿ ಮೌನಕ್ಕೆ ಶರಣಾದರು. ಜನವರಿ 31 ರಂದು ಕುಡಿಯುವ ನೀರಿನ ಸಂಪರ್ಕ ಪಡೆದಿರುವ ಎಲ್ಲ ಗ್ರಾಹಕರು ಮೀಟರ್ ಅಳವಡಿಸಿ ಮತ್ತು ಬಿಲ್ಲನ್ನು ಪಾವತಿ ಸುವಂತೆ ಸೂಚಿಸಲಾ ಯಿತು. ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿ ಕಾರಣ ಕೇಳಿ ನೋಟಿಸ್ ನೀಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.

ಮಾಸಾಶನ, ಗಿಡಗಂಟಿಗಳ ಕಟಾವು, ಶವ ಸಂಸ್ಕಾರಕ್ಕೆ ಅನುದಾನದ ಕೊರತೆ, ಪಂಚಾಯಿತಿ ಕಚೇರಿ ಜಮೀನು, ಉದ್ದಿನ ಬೇಳೆ ಇನ್ನಿತರ ಕೃಷಿ ಸಲಕರಣೆಗೆ ಅಸಡ್ಡೆ, ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿ, ನರ್ಸರಿ ಶಾಲೆಗೆ ಅವಕಾಶ ನೀಡಿ ಅಂಗವಾಡಿ ಶಾಲೆ ಕಡೆಗಣಿಸುತ್ತಿರುವುದು, ಪೊಲೀಸ್ ಗಸ್ತು, ಮೊಬೈಲ್‌ನಲ್ಲಿ  ಅಶ್ಲೀಲ ಸಂಭಾ ಷಣೆಗೆ ದೂರು ನೀಡಿದ್ದರು ಕ್ರಮವಿಲ್ಲ, ಸರ್ಕಾರಿ ಭೂಮಿ ಪಂಚಾಯಿತಿ ಸುಪ ರ್ದಿಗೆ  ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಗ್ರಾಮಸ್ಥರಾದ ರಘುನಾಥ ಕಾಮತ್, ಕ್ಯಾನ್ಯೂಟ್ ಅರಾನ್ಹ, ಲಲಿತಾ ಭಾಸ್ಕರ್, ನರೇಂದ್ರ, ಲಾರೆನ್ಸ್ ರೆಬೆಲ್ಲೋ, ಸತೀಶ್ ಕಿಲ್ಪಾಡಿ, ಸುರೇಶ್ ಕೊಲಕಾಡಿ ಮತ್ತಿತ ರರು ಚಚರ್ೆಯಲ್ಲಿ ಪಾಲ್ಗೊಂಡರು. 

ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲ್ಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಶೆಟ್ಟಿ, ಸದಸ್ಯರಾದ ನಾಗ ರಾಜ್ ಕುಲಾಲ್, ದಮಯಂತಿ, ಶಾಂತಾ, ಮಹಮ್ಮದ್ ಷರೀಫ್, ಸುನಿತಾ, ಸಾವಿತ್ರಿ, ಗೋಪಿನಾಥ ಪಡಂಗ, ನೋಡಲ್ ಅಧಿಕಾರಿಯಾಗಿ ನಾಗರತ್ನ, ಎಂಜಿನಿಯರ್ ಪ್ರಶಾಂತ್ ಆಳ್ವ, ಪಿಡಿಒ ಹರಿಶ್ಚಂದ್ರ, ಕೃಷಿ ಗಂಗಾ ದೇವಿ, ಅರಣ್ಯದ ಸೇಸಪ್ಪ, ಮೂಲ್ಕಿ ಪೊಲೀಸ್ ಠಾಣೆಯ ರಾಜು, ಶಿಕ್ಷಣ ಇಲಾಖೆ ರಘುನಾಥ್, ಪಂಚಾಯಿತಿ ರಮೇಶ್ ಬಂಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.