ADVERTISEMENT

ಸಮ್ಮೇಳನಾಧ್ಯಕ್ಷರಾಗಿ ಸತೀಶ್‌ ಚಪ್ಪರಿಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 11:02 IST
Last Updated 13 ಫೆಬ್ರುವರಿ 2017, 11:02 IST

ಬೈಂದೂರು: ಕಿರಿಮಂಜೇಶ್ವರದ ಅಗ ಸ್ತ್ಯೇಶ್ವರ ದೇವಾಲಯದ ರಥಬೀದಿಯ ಉಳ್ಳೂರು ಮೂಕಜ್ಜಿ ವೇದಿಕೆಯಲ್ಲಿ ಇದೇ 23ರಂದು ನಡೆಯುವ 15ನೇ ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪತ್ರಕರ್ತ, ಅಂಕಣಕಾರ, ಲೇಖಕ ಸತೀಶ್‌ ಚಪ್ಪರಿಕೆ ಅವರನ್ನು ಆಯ್ಕೆಮಾಡಲಾಗಿದೆ.

ಸಮೀಪದ ಕಾಲ್ತೋಡು ಗ್ರಾಮದ ಚಪ್ಪರಿಕೆ ಎಂಬ ಕುಗ್ರಾಮದಲ್ಲಿ ಜನಿಸಿ, ಕಿರಿಮಂಜೇಶ್ವರದ ನಾಗೂರಿನಲ್ಲಿ ಬಾಲ್ಯ ವನ್ನು ಕಳೆದ ಅವರು ತಮ್ಮ ಅಭಿಜಾತ ಪ್ರತಿಭೆಯ ಬಲದಿಂದ ರಾಷ್ಟ್ರಮಟ್ಟದ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ವನ್ನು ಖಂಬದಕೋಣೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ನಾವುಂದದಲ್ಲಿ ಪಡೆದಿರುವ ಸತೀಶ್ ಬೆಂಗಳೂರಿನಲ್ಲಿ ಬಿಎಸ್ಸಿ ಮತ್ತು ಅಣ್ಣಾಮಲೈ ವಿಶ್ವ ವಿದ್ಯಾಲಯದಲ್ಲಿ ಸಸ್ಯ ಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಬ್ರಿಟಿಷ್ ಚೆವ್ನಿಂಗ್ ಸ್ಕಾಲರ್‌ ಆಗಿ ಲಂಡನ್‌ನ ವೆಸ್ಟ್‌ ಮಿನ್‌ಸ್ಟರ್‌  ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನ ನಡೆಸಿದ್ದರು.

ಪತ್ರಿಕಾರಂಗ ಪ್ರವೇಶಿಸಿದ ನಂತರ ಅವರು ಹಲವು ವರ್ಷ ಕ್ರೀಡಾ ವರದಿ ಗಾರರಾಗಿ ದುಡಿದಿ ದ್ದರು. ಬೆಂಗಳೂರಿನ ಸಿಂಬ ಯೋಸಿಸ್ ಇನ್‌ ಸ್ಟಿಟ್ಯೂಟ್ ಆಫ್ ಮೀಡಿಯಾ ಅಂಡ್ ಕಮ್ಯುನಿಕೇಶನ್‌ನಲ್ಲಿ ಸಹಾಯಕ ಪ್ರಾಧ್ಯಾ ಪಕರಾಗಿ, ಸಿಟಿ ಮೀ ಡಿ ಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದುಡಿದಿದ್ದಾರೆ. 

ಪ್ರಸ್ತುತ ವೆರ್ಬಿಂದನ್ ಕಮ್ಯು ನಿಕೇಶನ್‌ನ ಆಡಳಿತ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ದೇಶ, ವಿದೇಶದ ಗಣ್ಯಾ ತಿಗಣ್ಯರ ಸಂದರ್ಶನ ನಡೆಸಿದ ಹಿರಿಮೆಗೆ ಪಾತ್ರ ರಾಗಿರುವ ಅವರ ಅಂಕಣ ‘ಮುಸಾಫಿರ್’ ಇತ್ತೀಚಿನವರೆಗೆ ಪ್ರಜಾ ವಾಣಿಯಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆ ಗಳಿಸಿತ್ತು. 

ಅವರ ‘ಮಾತೊಂದು ಮೌನ ಕಣಿ ವೆ’, ‘ಹಸಿರು ಹಾದಿ’, ‘ವಿಶ್ವಕಪ್ ಕ್ರಿಕೆಟ್’, ‘ಬೇರು’, ‘ಥೇಮ್ಸ್ ತಟದ ತಲ್ಲಣ’,  ‘ಗರ್ಭ’, ‘ಎಡಮಾವಿನ ಹೊಳೆಯ ದಡ ದಲ್ಲಿ’ ಎಂಬ ಕೃತಿಗಳು ಪ್ರಕಟವಾಗಿವೆ. ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಅವರಿಗೆ ಒಲಿದಿದೆ. ಅವರ ಹು ಟ್ಟೂರಿನ ಬಳಿ ನಡೆಯುತ್ತಿರುವ ಸಮ್ಮೇಳ ನದ ಅಧ್ಯಕ್ಷರಾಗಿ ಅವರನ್ನು ಆಯ್ಕೆ ಮಾಡಿರುವುದು ಶ್ಲಾಘನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.