ADVERTISEMENT

ಸಸಿಹಿತ್ಲು ಬೀಚ್‌ನತ್ತ ಜನರ ದಂಡು

​ಪ್ರಜಾವಾಣಿ ವಾರ್ತೆ
Published 28 ಮೇ 2017, 7:20 IST
Last Updated 28 ಮೇ 2017, 7:20 IST

ಮಂಗಳೂರು: ಸಸಿಹಿತ್ಲಿನಲ್ಲಿ ಶನಿ ವಾರವೂ ಸರ್ಫಿಂಗ್‌ ಸಂಭ್ರಮದ ಕ್ಷಣ ಗಳಿಗೆ ಸಮುದ್ರದಲ್ಲಿ ಅಬ್ಬರಿಸಿ ಬರುವ ಅಲೆಗಳು ಸಾಕ್ಷಿಯಾಗಿದ್ದವು. ಎರಡನೇ ದಿನವೂ ಸರ್ಫಿಂಗ್‌ ಆಟವನ್ನು ನೋಡು ವುದಕ್ಕೆ ರಾಜ್ಯ ಸೇರಿದಂತೆ ವಿದೇಶಗ ಳಿಂದಲೂ ಪ್ರೇಕ್ಷಕರು ಬಂದಿದ್ದರು.

ಕಾಲಿಗೆ ಸರ್ಫರ್‌ಗಳು ಸರ್ಫಿಂಗ್‌ ಹಲಗೆಯನ್ನು ಕಟ್ಟಿಕೊಂಡು ಸಮುದ್ರಕ್ಕೆ ಇಳಿಯುವ ದೃಶ್ಯ, ಮೊಬೈಲ್‌ಗಳಲ್ಲಿ ಸೆಲ್ಫಿಗಾಗಿ ಫೋಸು, ಗೆಲುವಿನ ಖುಷಿಯ ಅಪ್ಪುಗೆ, ಇನ್ನು ವಿದೇಶಿಗರಂತು ದೂರದ ಅಲೆಗಳಲ್ಲಿ ಸಾಹಸಕ್ಕೆ ಇಳಿದ ಸರ್ಫರ್‌ಗಳ ಭಾವಚಿತ್ರ ಸೆರೆ ಹಿಡಿಯಲು ಕ್ಯಾಮೆರಾ ಹಿಡಿದು ಸುತ್ತಾಡುತ್ತಿದ್ದರು.

ಬೆಳಿಗ್ಗೆ ಬೀಚ್‌ ಅಂಗಳದಲ್ಲಿ ಬೀಚ್‌ ವಾಲಿಬಾಲ್‌ ನಡೆಯಿತು. ಆಟ ಮುಗಿಸಿ ದಡ ಸೇರಿದ್ದ ಕೆಲವು ಸರ್ಫರ್‌ಗಳು ವಾಲಿಬಾಲ್‌ ಆಡುವ ಮೂಲಕ ಸಂತಸ ಪಟ್ಟರು. ಬೋಟ್‌ ವಿಹಾರಕ್ಕೆ ಜನಗಳ ದಂಡು ಹಿರಿದು ಬರುತ್ತಿದೆ.

ADVERTISEMENT

ಜನರು ಜಾಕೇಟ್‌ ತೊಟ್ಟು ಬೋಟ್‌ ನಡೆಸುತ್ತ ವಿಹಾರಮಾಡಿ ಸಂತೋಷ ಪಟ್ಟರು. ಕುಟುಂಬದ ಜತೆಗೆ ಬಂದಿದ್ದ ಪ್ರೇಕ್ಷಕರು ಬೀಚ್‌ನಲ್ಲಿ ಒಂದು ಸುತ್ತು ಹಾಕಿ ಅಲ್ಲಿ ಸಿಗುವ ಆಹಾರ ಹಾಗೂ ಸರ್ಫಿಂಗ್‌ ಬೋರ್ಡ್‌, ಪರಸ್ಪರ ಪರಿಚಯ ಮಾಡಿಕೊಂಡರು. ಇನ್ನು ಸಣ್ಣ ಮಕ್ಕಳು ಸಮುದ್ರ ದಲ್ಲಿ ನೀರಿನಾಟ ಆಡಿ ಸಂಭ್ರಮಿಸಿದರು. ಸ್ಕೇಟಿಂಗ್‌, ಸ್ಲ್ಯಾಕ್‌ ಲೈನಿಂಗ್‌ ಆಡುವ ಮಕ್ಕಳು, ದೊಡ್ಡವರ ದಂಡೆ ಸೇರಿತ್ತು.

ದೂರದ ಊರುಗಳಿಂದ ಬಂದಿದ್ದ ಪ್ರೇಕ್ಷಕರಿಗೆ ಹಾಗೂ ಸರ್ಫರ್‌ಗಳಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗಿದೆ. ಅಲ್ಲಿಯೇ ಕೆಲವರು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಜತೆಗೆ ಸರ್ಫಿಂಗ್‌ ವೀಕ್ಷಣೆಗೆ ಬರುವ ಜನರಿಗೆ ಆಯೋಜಕರು ಉಚಿತ ವಾಹನ ಸೌಲಭ್ಯ ಒದಗಿಸಿದ್ದರು. ಸುಮಾರು 10 ಕ್ಕೂ ಹೆಚ್ಚು ಟೆಂಪೋ, 5 ಕ್ಕೂ ಹೆಚ್ಚು ಕಾರುಗಳು ಜನರನ್ನು ಬೀಚ್‌ಗೆ ಕರೆದು ತರುತ್ತಿದ್ದವು. ಬಂದಿದ್ದ ಜನರಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು.

ಬೀಚ್‌ನಲ್ಲಿ ಕರಾವಳಿ ತರಹೇವಾರಿ ಖಾದ್ಯ ಪರಿಚಯಿಸುವುದಕ್ಕೆ 14 ಆಹಾರ ಮೇಳದ ಸ್ಟಾಲ್‌ ಹಾಕ ಲಾಗಿದೆ. ನೀರು ದೋಸೆ, ಬಾಳೆ ಹಣ್ಣಿನ ಬನ್ಸ್, ಗಸಿ, ಚಿಕನ್‌ ಸುಕ್ಕಾ, ಚಿಕನ್‌ ಫ್ರೈ, ಮೀನು ಗಾರರು ಮಾಡುವ ಸಾಂಪ್ರದಾ ಯಿಕ ಶೈಲಿ ಮೀನು ಸಾರು, ಡ್ರೈ ಫಿಶ್‌, ಸಿಗಡಿ ಚಟ್ನಿ, ಕೊರಿ ರೊಟ್ಟಿ ಸೇರಿದಂತೆ ವಿವಿಧ ಪದಾರ್ಥಗಳನ್ನು ಬಂದಿದ್ದ ಜನರು ಸವಿದು ಖುಷಿ ಪಟ್ಟರು. 

ಇಡೀ ದಿನ ಸರ್ಫಿಂಗ್‌ ಮಾಡಿದ ದಣಿದ ಸರ್ಫರ್‌ಗಳಿಗೆ ಸಂಜೆ ವೇಳೆಯಲ್ಲಿ ಮನಸ್ಸಿಗೆ ಖುಷಿ ನೀಡುವ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸ ಲಾಗುತ್ತಿದೆ.
ಭಾನುವಾರ ಇಂಡಿಯನ್‌ ಓಪನ್‌ ಆಫ್‌ ಸರ್ಫಿಂಗ್‌ನಲ್ಲಿ ಫೈನಲ್‌ ಪಂದ್ಯಗಳು ನಡೆಯಲಿದ್ದು, ಸುಮಾರು 5 ಸಾವಿರ ದಿಂದ 7 ಸಾವಿರ ಜನರು  ಬರುವ ನಿರೀಕ್ಷೆ ಇದೆ ಎಂದು ಆಯೋಜಕ ರಲ್ಲೊಬ್ಬರಾದ ಯತೀಶ್‌ ಬೈಂಕಪಾಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.