ADVERTISEMENT

ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ-: ಸಚಿವ ರೈ

ಉದನೆಯಲ್ಲಿ ಸೇತುವೆ, ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 6:46 IST
Last Updated 6 ಡಿಸೆಂಬರ್ 2017, 6:46 IST

ಉಪ್ಪಿನಂಗಡಿ:  ‘ನನ್ನ ಸ್ವಕ್ಷೇತ್ರ ಬಂಟ್ವಾ ಳಕ್ಕೆ ನೀಡುತ್ತಿರುವ ಅಧ್ಯತೆಯನ್ನು ಮೀಸಲು ಕ್ಷೇತ್ರ ಸುಳ್ಯಕ್ಕೂ ನೀಡುತ್ತಿದ್ದು, ಸುಳ್ಯ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಆದ್ಯತೆ ನೆಲೆಯಲ್ಲಿ ಮಾಡಿಕೊಡಲಾಗಿದೆ’ ಎಂದು  ಸಚಿವ ಬಿ. ರಮಾನಾಥ ರೈ ಹೇಳಿದರು.

ರಸ್ತೆ ಅಭಿವೃದ್ದಿ ನಿಗಮದ ವತಿ ಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೊಣಾಜೆ ಗ್ರಾಮ ಸಂಪರ್ಕ ಕಲ್ಪಿಸುವ ₹9.60 ಕೋಟಿ ವೆಚ್ಚದ ಸೇತುವೆ ಕಾಮಗಾರಿ , ಜಿಲ್ಲಾ ಪಂಚಾಯಿತಿ  ನಬಾರ್ಡ್‌ ನೆರವಿನ ₹80 ಲಕ್ಷ ವೆಚ್ಚದ ಶಿರಾಡಿ ಗ್ರಾಮದ ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ  ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಇಲ್ಲದಿದ್ದರೂ ಡಾ. ರಘು ಅವರ ಪ್ರಯತ್ನದ ಮೂಲಕ ಸುಳ್ಯ ಕ್ಷೇತ್ರದ ಅತೀ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲಾಗಿದೆ. ದ.ಕ. ಜಿಲ್ಲೆ 4 ಸೇತುವೆ ಮಂಜೂರು ಆಗಿದ್ದು, ಈ ಪೈಕಿ ಸುಳ್ಯ ಕ್ಷೇತ್ರಕ್ಕೆ ಉದನೆ ಮತ್ತು ಆರಂತೋಡು ಎಂಬಲ್ಲಿಗೆ ಎರಡು ದೊಡ್ಡ ಸೇತುವೆಗಳ ಬೇಡಿಕೆ ಈಡೇರಿಸಲಾಗಿದೆ’ ಎಂದರು.

ADVERTISEMENT

‘ಸುಳ್ಯ ಕ್ಷೇತ್ರದಲ್ಲಿ ಶ್ರೀಲಂಕಾ ನಿರಾಶ್ರಿತರು ಮೂಲ ಸೌಕರ್ಯಗಳಿಂದ ವಂಚಿತರಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರುಗಳ  ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.

‘ಪ್ರಮುಖರಾದ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ ‘ಕಾಂಗ್ರೆಸ್ ಮುಖಂಡರ ಬೇಡಿಕೆಗೆ ಅನುಗುಣವಾಗಿ  ಸಚಿವರ ಶಿಫಾರಸಿನಂತೆ  ಅಭಿವೃದ್ಧಿ ಕೆಲಸಗಳು ಆಗಿವೆ’ ಎಂದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿ ಯರ್ ಟಿ. ಡಿ. ನಂಜುಂಡಪ್ಪ, ಕೆಪಿಸಿಸಿ ಸದಸ್ಯ ಡಾ. ರಘು ಮಾತನಾಡಿದರು.

ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಕೆ.ಪಿ.ಸಿ.ಸಿ. ಸುಳ್ಯ ವಿಧಾನ ಸಭಾ ಕ್ಷೇತ್ರದ ವೀಕ್ಷಕಿ ಸವಿತಾ ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಆಶಾ ಲಕ್ಷ್ಮಣ್, ಉಷಾ ಅಂಚನ್, ಕೆ.ಡಿ.ಪಿ. ಸದಸ್ಯ ಸತೀಶ್ ಕೆಡೆಂಜಿ, ಮಂಗಳೂರು ನಗರಪಾಲಿಕೆ ಸದಸ್ಯ ಎ.ಸಿ. ವಿನಯರಾಜ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಬೇಬಿ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ, ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಎ.ಪಿ.ಎಂ.ಪಿ. ನಿರ್ದೇಶ ಕರಾದ ಎ.ಸಿ. ಮಾಥ್ಯು, ಪಕ್ಷದ ಮುಖಂ ಡರಾದ ಕೆ.ಪಿ. ತೋಮಸ್, ವಿಶ್ವನಾಥ ಪೂಜಾರಿ ಇದ್ದರು.

ಕಡಬ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗೀಸ್ ಸ್ವಾಗತಿಸಿ, ದಿವಾಕರ ಗೌಡ ವಂದಿಸಿದರು. ಕೆ.ಕೆ. ಸೆಬಾಸ್ಟಿಯನ್ ನಿರೂಪಿಸಿದರು.

ಬಿಜೆಪಿ ಸದಸ್ಯೆಯಿಂದ  ಶ್ಲಾಘನೆ: ಬಿಜೆಪಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಪಿ.ವೈ. ಕುಸುಮಾ ತಮ್ಮ ಭಾಷಣದಲ್ಲಿ " ಸಚಿವ ರಮಾನಾಥ ರೈಯವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಅವರಿಗೆ ನಾನು ಅಭಾರಿ ಆಗಿದ್ದೇನೆ" ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜನಪರ ಕಾರ್ಯಗಳನ್ನು ಹಾಕಿಕೊಂಡಿದ್ದು, ನನಗೆ ಹೆಮ್ಮೆ ಅನಿಸುತ್ತದೆ ಎಂದರು".

ಸಭೆಯಲ್ಲಿ ಚಪ್ಪಾಲೆ, ಶಿಳ್ಳೆ, ಕರತಾಡನ ಕೇಳಿ ಬಂತು.

***

ಜಿಲ್ಲೆಗೆ ಮಂಜೂರಾದ 4 ಸೇತುವೆಗಳಲ್ಲಿ 2 ಸುಳ್ಯ ಕ್ಷೇತ್ರಕ್ಕೆ

ಶ್ರೀಲಂಕಾ ನಿರಾಶ್ರಿತರಿಗೆ ಮೂಲ ಸೌಕರ್ಯ ಒದಗಿಸಲು ವ್ಯವಸ್ಥೆ

₹ 9.60 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಚಾಲನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.