ADVERTISEMENT

‘ಹೆಣ್ಣು ಮಕ್ಕಳ ಕುರಿತಾದ ಗ್ರಹಿಕೆಗಳು ಬದಲಾಗಲಿ’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:29 IST
Last Updated 16 ಫೆಬ್ರುವರಿ 2017, 7:29 IST
ಬ್ರಹ್ಮಾವರ: ಹೆಣ್ಣು ಮಕ್ಕಳ ಮೇಲಿನ ಹಿಂಸೆಯನ್ನು ಕೊನೆಗಾಣಿಸಲು ಕೇವಲ ಕಾನೂನಿನ ಮೂಲಕ ಸಾಧ್ಯವಿಲ್ಲ. ಸಾಮಾಜಿಕವಾಗಿ ಹೆಣ್ಣು ಮಕ್ಕಳ ಕುರಿತಾದ ಗ್ರಹಿಕೆಗಳು ಬದಲಾಗಬೇಕಿದೆ ಎಂದು ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
 
ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟ ಪದಲ್ಲಿ ಇತ್ತೀಚೆಗೆ ಬಾಳ್ಕುದ್ರು ಹಂಗಾ ರಕಟ್ಟೆ ಅಭಿವೃದ್ಧಿ ಸಂಸ್ಥೆಯ ೭ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿ ಕೊಂಡ ಭ್ರೂಣಲಿಂಗ ಪತ್ತೆ ಪಡೆ ಮಾಹಿತಿ ಶಿಬಿರ ಮತ್ತು ಕಲಾಕುಸುಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತಾಡಿದರು.
ಕುಂದಾಪುರ ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷ ಕೆ.ಆರ್‌.ನಾಯಕ್ ಅಧ್ಯಕ್ಷತೆ ವಹಿಸಿದ್ದರು.
 
ಮುಂಬಯಿ ಉದ್ಯಮಿ ಮೋಹನ್‌ ದಾಸ್ ಶೆಟ್ಟಿ, ಉಪ್ರಳ್ಳಿ ದೇವಸ್ಥಾನದ ಮಂಜುನಾಥ ಆಚಾರ್ಯ,ವಿದ್ಯುತ್‌ ಗುತ್ತಿಗೆದಾರ  ಉದಯ ಕುಮಾರ್, ಜ್ಯೋತಿಷಿ  ಶಂಕರನಾರಾಯಣ ಅಡಿಗ, ರಾಮದೇವ ಕಾರಂತ, ಗೀತಾಂಜಲಿ ಆರ್. ನಾಯಕ್,  ಸಂಪನ್ಮೂಲ ವ್ಯಕ್ತಿ ಡಾ.ರಾಮ್‌ರಾವ್, ಕೇಶವ್ ಆಚಾರ್ ನೀಲಾವರ, ಗಣೇಶ್ ಬಳೆಗಾರ ಜನ್ನಾಡಿ, ರಾಮ ಗಾಣಿಗ ಹಂದಾಡಿ, ರಾಮಕೃಷ್ಣ ಮಂದಾರ್ತಿ, ಮಾರ್ಷಲ್ ಫರ್ನಾ ಂಡೀಸ್, ಕಾರ್ಕಳದ ಉಷಾ ನಾಯಕ್, ಕುಂದಾಪುರ ಜಯಲಕ್ಷ್ಮೀ ಇದ್ದರು.
 
ಅಭಿವೃದ್ಧಿ ಸಂಸ್ಥೆಯ ರಮೇಶ್ ವಕ್ವಾಡಿ ಸ್ವಾಗತಿಸಿದರು. ಕುಸುಮ ಕಾಮತ್ ವಂದಿಸಿದರು. ಅನಿತಾ ಉಡುಪಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.