ADVERTISEMENT

‘ತುಳುವರ ಆಹಾರವೇ ಔಷಧಿ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2013, 9:00 IST
Last Updated 21 ನವೆಂಬರ್ 2013, 9:00 IST

ವಿಟ್ಲ: ತುಳು ನಾಡಿನ ಆಹಾರವೇ ಒಂದು ಔಷಧಿಯಾಗಿದೆ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಕೇಂದ್ರ ಸಮಿತಿಯ ಮಹಿಳಾ ವಿಭಾಗದ ಗೌರವಾಧ್ಯಕ್ಷೆ, ಒಡಿ­ಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾ­ನಂದಮಯೀ ಹೇಳಿ­ದರು.

ವಿಟ್ಲದ ವಿಠಲ ಪಪೂ ಕಾಲೇಜಿನ ಸುವರ್ಣ ರಂಗ­ಮಂದಿರದಲ್ಲಿ ಬುಧ­ವಾರ 'ತುಳುವೆರೆ ಅಟಿಲ್ದ ಮಿನದನ' (ಆಹಾರೋತ್ಸವ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುಳು ಸಂಸ್ಕೃತಿಯನ್ನು ಮುಂದಿನ ಪೀಳಗೆಗೆ ಕೊಂಡೊಯ್ಯುವುದು ತುಳು ಜಾತ್ರೆಯ ಉದ್ದೇಶವಾಗಿದೆ. ಆಹಾರ ಸೇವನೆ ಹಾಗೂ ಆಯ್ಕೆ ಮಾಡುವ ವೇಳೆ ಜಾಗರೂಕ­ರಾಗಿರಬೇಕು.  ಅದು ಮನಸ್ಸಿನ ಮೇಲೆ ಪ್ರಭಾವ ಬೀರು­ತ್ತದೆ. ಕುಳಿತು ಊಟ ಮಾಡುವುದೇ ಉತ್ತಮ ಪದ್ಧತಿ ಎಂದರು.

ಪುತ್ತೂರು ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ  ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸ್ವಾಮೀಜಿ­ಯವರ ಕಾಳಜಿ ಅಮೂಲ್ಯವಾದುದು. ಸಂಸ್ಥಾನದ ಬೆಳ್ಳಿಹಬ್ಬ ಮತ್ತು ‘ತುಳು ತೇರ್ ಒಯಿಪುಗ’ ಕಾರ್ಯಕ್ರಮ­ದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕವಯತ್ರಿ ಸವಿತಾ ಎಸ್.ಭಟ್ ಅಡ್ವಾಯಿ , ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ವಿಜಯ ಶೆಟ್ಟಿ ಸಾಲೆತ್ತೂರು ಮಾತನಾಡಿದರು.

ವಿಟ್ಲ ಗ್ರಾ.ಪಂ.ಅಧ್ಯಕ್ಷೆ ಭವಾನಿ ರೈ ಕೊಲ್ಯ, ಬಂಟ್ವಾಳ ತಾಲ್ಲೂಕು ತುಳು ತೇರ್ ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಕಾರ್ಯಾಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಬಂಟ್ವಾಳ ಮಹಿಳಾ ಸಮಿತಿಯ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಉಪಾಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಮಮತಾ ಡಿ.ಎಸ್.ಗಟ್ಟಿ, ಐಡಾ ಸುರೇಶ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ತಾರಾನಾಥ ಕೊಟ್ಟಾರಿ, ಜತೆ ಕಾರ್ಯದರ್ಶಿ ಪಿ.ಲಿಂಗಪ್ಪ ಗೌಡ, ಮೇಲ್ವಿಚಾರಕ ಸದಾಶಿವ ಅಳಿಕೆ ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಧರ್ಮಾವತಿ ಪಿ.ಬಿ.ಗೌಡ ಸ್ವಾಗತಿಸಿದರು. ರೇಣುಕಾ ಎಸ್.ರೈ ಆಶಯ ಗೀತೆ ಹಾಡಿದರು. ಉಪಾಧ್ಯಕ್ಷೆ ಸುನೀತಾ ಪದ್ಮನಾಭ ವಂದಿಸಿದರು. ಲಕ್ಷ್ಮೀ ಕೆ.ಭಟ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.