ADVERTISEMENT

14 ವರ್ಷದಿಂದ ಬೀದಿ ಮಡೆಸ್ನಾನದ ಸೇವೆ

ಲೋಕೇಶ್ ಬಿ.ಎನ್‌
Published 22 ನವೆಂಬರ್ 2017, 9:47 IST
Last Updated 22 ನವೆಂಬರ್ 2017, 9:47 IST
ಬೀದಿಮಡೆಸ್ನಾನ ನಡೆಸುತ್ತಿರುವ ಹರೀಶ್ ಕೊಠಾರಿ
ಬೀದಿಮಡೆಸ್ನಾನ ನಡೆಸುತ್ತಿರುವ ಹರೀಶ್ ಕೊಠಾರಿ   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಭಕ್ತರು ಬೀದಿ ಮಡೆಸ್ನಾನ ಸೇವೆ ನಡೆಸುತ್ತಾರೆ. ಇದ ರಿಂದ ಚರ್ಮರೋಗ ನಿವಾರಣೆ ಆಗು ತ್ತದೆ ಎಂಬ ನಂಬಿಕೆ ಇದ್ದು, ಸತತ 14 ವರ್ಷದಿಂದ ಇಲ್ಲಿ 5 ದಿನ ಸೇವೆ ಸಲ್ಲಿಸುತ್ತಿದ್ದಾರೆ. ಅವರೇ ಧರ್ಮಸ್ಥಳದ ಹರೀಶ್ ಕೊಠಾರಿ.

ಕುಮಾರಧಾರೆಯಿಂದ ದೇಗುಲದ ತನಕ 2.ಕಿ.ಮೀ ದೂರ ರಸ್ತೆಯಲ್ಲಿ ನಡೆಸುವ ಕಠಿಣ ಸೇವೆ ಇದಾಗಿದ್ದು, ವರ್ಷದಲ್ಲಿ ಜಾತ್ರೆ ವೇಳೆ ಮಾತ್ರ ಈ ಸೇವೆ ನಡೆಯುತ್ತದೆ. ಉರುಳು ಸೇವೆ ನಡೆಸುವ ಮುಂಚೆ ಬಹಳಷ್ಟು ದಿನ ವೃತವನ್ನು ಕೈಗೊಂಡು ನಡೆಸುವ ಕಠಿಣ ಸೇವೆಯಿದು. ಹರೀಶ್ ಕೊಠಾರಿ ಅವರು ಬೀದಿ ಮಡೆಸ್ನಾನ ಸೇವೆಯನ್ನು ಕುಮಾರಧಾರದಿಂದ ದೇಗುಲದ ತನಕ ನೆರವೇರಿಸುತ್ತಾರೆ. ಈ ಬಾರಿಯೂ ತಮ್ಮ ಸೇವೆಯನ್ನು ಮುಂದುವರೆಸಿರುವರು.

ಲಕ್ಷ ದೀಪೋತ್ಸವ ಮರುದಿನ ಪಂಚಮಿ ದಿನದ ನಡುವೆ ಕೆಲವೊಮ್ಮೆ 4 ಮತ್ತೆ ಕೆಲವೊಮ್ಮೆ 5 ದಿನ ಈ ಸೇವೆ ಸಲ್ಲಿಸಲಾಗುತ್ತದೆ. 2 ಕಿ.ಮೀ ಕ್ರಮಿಸಲು ಅಲ್ಲಲ್ಲಿ ವಿಶ್ರಾಂತಿ ಪಡೆದು ಸೇವೆ ಸಲ್ಲಿಸುವುದುಂಟು. ಆದರೆ ಕೊಠಾರಿಯವರು ಎಲ್ಲಿಯೂ ವಿಶ್ರಾಂತಿ ಪಡೆಯದೆ ಕೇವಲ 45 ನಿಮಿಷದಲ್ಲಿ ಈ ಸೇವೆ ಪೂರೈಸುತ್ತಾರೆ. ಇವರು ಸುಬ್ರಹ್ಮಣ್ಯದಲ್ಲಿ ಕೂಡಾ ಉದ್ಯಮ ಹೊಂದಿದ್ದಾರೆ.

ADVERTISEMENT

ಲಕ್ಷ ದೀಪೋತ್ಸವದ ಶ್ರೀ ದೇವರ ಚಂದ್ರಮಂಡಲ ರಥೋತ್ಸವ ನೆರವೇರಿದ ಬಳಿಕ ಸುಬ್ರಹ್ಮಣ್ಯ ದೇವರಿಗೆ ಅತ್ಯಂತ ಪ್ರಿಯವಾದ ಬೀದಿ ಮಡೆಸ್ನಾನ ಸೇವೆ ನಡೆಯುತ್ತದೆ. ರಥೋತ್ಸವದ ನಂತರ ಅನೇಕ ಭಕ್ತರು ಈ ಸೇವೆಯನ್ನು ಆರಂಭಿಸುತ್ತಾರೆ. ಚಂಪಾಷಷ್ಠಿ ಮಹಾರಥೋತ್ಸವದ ತನಕ ಸಾವಿರಾರು ಭಕ್ತರು ಈ ಸೇವೆ ಯನ್ನು ನೆರವೇರಿಸುತ್ತಾರೆ. ಚೌತಿ ಮತ್ತು ಪಂಚಮಿಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸೇವೆಯನ್ನು ತೀರಿಸುತ್ತಾರೆ. ಸಂಜೆ ಯಿಂದ ಮಾರನೇಯ ದಿನ ಬೆಳಗ್ಗಿನ ತನಕ ಈ ಸೇವೆಯನ್ನು ಭಕ್ತರು ನೆರ ವೇರಿಸುತ್ತಾರೆ.

ಇವರು ಸುಮಾರು 22 ವರ್ಷಗಳಿಂದ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲೂ ಸೇವೆ ನಡೆಸುತ್ತಾ ಬಂದಿರುವರು. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಜಾತ್ರೆಯ 5 ದಿನಗಳ ಕಾಲವೂ ಬೀದಿ ಮಡಸ್ನಾನ ಸೇವೆ ನೆರವೇರಿಸುತ್ತಿದ್ದಾರೆ.

ಕುಮಾರಧಾರೆ- ಕಾಶಿಕಟ್ಟೆ ನಡು ವಿನ ರಸ್ತೆ ಇಕ್ಕಟ್ಟಾಗಿದ್ದು, ರಸ್ತೆಯ ಎರಡು ಕಡೆ ಮಣ್ಣನ್ನು ಹಾಕಿ ರಸ್ತೆ ವಿಸ್ತರಿಸಿ, ಬೆಳಕು ವ್ಯವಸ್ಥೆ ಕಲ್ಪಿಸಿ ಸೇವೆ ನೆರವೇರಿಸುವ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ. ರಸ್ತೆಯ ಬದಿ ಯಲ್ಲಿ ಶ್ರೀ ದೇವಳದ ತನಕವೂ ಎಚ್ಚರಿಕೆ ನಾಮಫಲಕಗಳನ್ನು ನೆಡಲಾಗಿದೆ. ಇದು ವಾಹನ ಚಾಲಕರಿಗೆ ಬೀದಿಮಡೆಸ್ನಾನ ಸೇವೆ ನಡೆಯುತ್ತಿರುವ ಕುರಿತು ಮಾರ್ಗದರ್ಶನ ನೀಡುತ್ತದೆ. ಬೆಳಗ್ಗೆ, ಸಂಜೆ, ರಾತ್ರಿ, ಈ ಅವಧಿಯಲ್ಲಿ ಭಕ್ತರು ಸೇವೆ ನಡೆಸುವರು. ಚೌತಿ ಮತ್ತು ಪಂಚಮಿಯ ದಿನ ಅಧಿಕ ಪ್ರಮಾಣದಲ್ಲಿ ಭಕ್ತರು ಸೇವೆ ಸಲ್ಲಿಸುವರು.

* * 

ಹರಕೆ ಹೊತ್ತು ಸಲ್ಲಿಸುವುದಲ್ಲ. ಭಕ್ತಿಯಿಂದ ನೆರವೇರಿಸುವ ಸೇವೆ ಇದು. ನಿರಂತರ ಸೇವೆಯಿಂದ ನನಗೆ ಒಳಿತಾಗಿದ್ದು ದೇವರ ಆಶೀರ್ವಾದ ದೊರೆತಿದೆ. ಸೇವೆ ಮುಂದುವರೆಸುವೆ.
ಹರೀಶ್ ಕೊಠಾರಿ, ಧರ್ಮಸ್ಥಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.