ADVERTISEMENT

42 ಪ್ರಕರಣಗಳ ಆರೋಪಿ ಹತ್ಯೆ

ಕುಖ್ಯಾತ ರೌಡಿ ಖಾಲಿಯಾ ರಫೀಕ್‌ಗೆ ಗುಂಡಿಟ್ಟು ಕೊಲೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:49 IST
Last Updated 16 ಫೆಬ್ರುವರಿ 2017, 7:49 IST
ಕೋಟೆಕಾರಿನ ಘಟನಾ ಸ್ಥಳದಲ್ಲಿ ಪೊಲೀಸ್ ಕಮೀಷನರ್ ಚಂದ್ರಶೇಖರ್ ಪರಿಶೀಲನೆ ನಡೆಸಿದರು.
ಕೋಟೆಕಾರಿನ ಘಟನಾ ಸ್ಥಳದಲ್ಲಿ ಪೊಲೀಸ್ ಕಮೀಷನರ್ ಚಂದ್ರಶೇಖರ್ ಪರಿಶೀಲನೆ ನಡೆಸಿದರು.   
ಉಳ್ಳಾಲ: ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆಗಳಲ್ಲಿ 42 ರಷ್ಟು ಪ್ರಕರಣಗಳ ಆರೋಪಿಯಾಗಿದ್ದ ಕುಖ್ಯಾತ ರೌಡಿ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಖಾಲಿಯ ರಫೀಕ್ (38) ಎಂಬಾತನನ್ನು ಕೋಟೆಕಾರು ಪೆಟ್ರೋಲ್ ಪಂಪ್ ಎದುರುಗಡೆ ಮಂಗಳವಾರ ರಾತ್ರಿ ತಲವಾರಿನಿಂದ ಕಡಿದು, 8 ಸುತ್ತು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.
 
ಖಾಲಿಯಾ ಸಂಚರಿಸುತ್ತಿದ್ದ ರಿಟ್ಜ್‌ ಕಾರನ್ನು ಹಿಂಬಾಲಿಸಿಕೊಂಡು ಬಂದ ಸ್ವಿಫ್ಟ್‌ ಕಾರಿನಲ್ಲಿದ್ದ ಇನ್ನೊಂದು ಕಾರಿನಲ್ಲಿದ್ದ ಕಸಾಯಿ ಅಲಿ ಯಾನೆ ನೂರ್ ಅಲಿ ಮತ್ತು ತಂಡ ಈ ಕೃತ್ಯ ನಡೆಸಿರಬೇಕು ಎಂದು ಶಂಕಿಸಲಾಗಿದ್ದು, ಉಳ್ಳಾಲ ಪರಿಸರದಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದೆ.
 
ಖಾಲಿಯಾ ರಫೀಕ್, ಗೆಳೆಯ ಜಾಯೀದ್ ಸೇರಿದಂತೆ ಇನ್ನಿಬ್ಬರು ಉಪ್ಪ ಳದಿಂದ ಹೊಸಂಗಡಿವರೆಗೆ  ಆಲ್ಟೊ ಕಾರಿನಲ್ಲಿ  ಮಂಗಳವಾರ ತಡರಾತ್ರಿ ಪ್ರಯಾಣ ಬೆಳೆಸಿದ್ದರು.  ಹೊಸಂಗಡಿ ಯಲ್ಲಿ  ಕಾರನ್ನು ಬದಲಾಯಿಸಿದ ತಂಡ ರಿಟ್ಜ್ ಕಾರಿನಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಕಾರು ಕೋಟೆ ಕಾರು ಪೆಟ್ರೋಲ್ ಪಂಪ್ ತಲುಪುತ್ತಿದ್ದಂತೆ  ವಿರುದ್ಧ ದಿಕ್ಕಿನಲ್ಲಿ ಬಂದ  ಕೇರಳ ನೋಂದಾಯಿತ ಮರಳು ಸಾಗಣೆ ಲಾರಿ ಇವರಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು.  
 
ಅಷ್ಟರಲ್ಲಿ ಇವರ ಕಾರಿನ ಹಿಂಬದಿ ಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಐದು ಮಂದಿಯ ತಂಡದಲ್ಲಿ ಒಬ್ಬ ಖಾಲಿಯಾ ಇದ್ದ ಕಾರಿನ ಗಾಜಿಗೆ ತಲವಾರಿನಿಂದ ದಾಳಿ ನಡೆಸಿದ್ದನು.  ದುಷ್ಕರ್ಮಿಗಳಿಂದ ಅಪಾಯವಿರುವುದನ್ನು ಮನಗಂಡ ಕಾಲಿಯಾ  ಕಾರಿನಿಂದ ಹೊರ ಹಾರಿ  ಮುಚ್ಚಿದ್ದ ಪೆಟ್ರೋಲ್ ಪಂಪಿನತ್ತ ಜೀವ ಉಳಿಸಲು ಓಡಿದ.  ಈತನ ಜತೆಗಿದ್ದ ಇಬ್ಬರು  ಸ್ಥಳದಿಂದ  ಓಡಿ ಪರಾರಿ ಯಾದರು.  ಎಡಭಾಗದ ಪಕ್ಷವಾತದಿಂದ ಬಳಲುತ್ತಿದ್ದ ಜಾಯೇದ್ ಮಾತ್ರ ಕಾರಿ ನಿಂದ ಹೊರಗಿಳಿಯಲಾಗದೆ ಉಳಿದು ಕೊಂಡಿದ್ದ. 
 
ಪೆಟ್ರೋಲ್ ಪಂಪಿನತ್ತ  ಓಡಿದ ಖಾಲಿಯಾನನ್ನು ಹಿಂಬಾಲಿಸಿದ ಕಾರಿನ ಲ್ಲಿದ್ದ ಐದು ಮಂದಿ ಮತ್ತು ಲಾರಿಯಲ್ಲಿದ್ದ ಇಬ್ಬರು ತಲವಾರಿನಿಂದ ಕಡಿದು, ಎಂಟು ಸುತ್ತು ರಿವಾಲ್ವರ್ ಮೂಲಕ ಗುಂಡು ಹಾರಿಸಿದ್ದಾರೆ. ಆಗ ಕಾರಿನೊಳಗಿದ್ದ ಜಾಯೇದ್ ಬೊಬ್ಬೆ ಹೊಡೆಯಲು ಆರಂ ಭಿಸಿದ್ದು, ಆತನ  ಎಡಭಾಗಕ್ಕೆ ತಲ ವಾರಿನಿಂದ  ಕಡಿದಿದ್ದಾರೆ.  ಅಷ್ಟರಲ್ಲಿ ಶಬ್ದ ಕೇಳಿ ಪೆಟ್ರೋಲ್ ಪಂಪಿನ ಒಳಗೆ  ಮಲಗಿದ್ದ ಸಿಬ್ಬಂದಿ ಹೊರಧಾವಿಸು ತ್ತಿದ್ದಂತೆ  ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.  
 
ಕೂಡಲೇ   ಪೊಲೀಸರಿಗೆ ಮಾಹಿತಿ ರವಾನಿಸಿದ ಪೆಟ್ರೋಲ್ ಪಂಪ್ ಸಿಬ್ಬಂದಿ ಬಳಿಕ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿ ಸುವ  ದಾರಿಮಧ್ಯೆ ಖಾಲಿಯಾ ಸಾವನ್ನ ಪ್ಪಿದ್ದ. ಗಂಭೀರ ಗಾಯಗೊಂಡಿರುವ ಜಾಯೇದ್‌ನನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಸಹೋದರನ ಹತ್ಯೆಗೆ ಸೇಡು: ಮುತಾ ಲಿಬ್  ಹತ್ಯೆಗೆ ಪ್ರತೀಕಾರವಾಗಿ  ಆತನ ಸಹೋದರ ಸಂಬಂಧಿ  ಕಸಾಯಿ ಅಲಿ ಯಾನೆ ನೂರ್ ಅಲಿ ಈ ಹಿಂದೆಯೂ ಕೊಲೆಗೆ ಯತ್ನಿಸಿದ್ದ. ಇದೇ ತಂಡ  ಕೋಟೆಕಾರ್‌ ವರೆಗೆ ಹಿಂಬಾಲಿಸಿ ಈ ಕೃತ್ಯ ನಡೆಸಿದೆ ಎಂದು ಮಂಜೇಶ್ವರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
 
42 ಪ್ರಕರಣಗಳ ಆರೋಪಿ: 2015ರ ಆ.13 ರಂದು  ಬಾಳಿಗಾ ಅಝೀಝ್ ಸಹಚರ  ಬಾಯಿಕಟ್ಟೆ ನಿವಾಸಿ ಆಸೀಫ್ (24)  ಎಂಬಾತನನ್ನು ಪೈವಳಿಕೆಯಲ್ಲಿ ಹತ್ಯೆ ನಡೆಸಿದ್ದರು.  ಕನ್ಯಾನದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಆಸೀಫ್ ಮತ್ತು ರಿಯಾಝ್ ಜತೆಯಾಗಿ ಬಂದು ವಾಪಸಾಗುತ್ತಿದ್ದಾಗ ಕಾರಿನಲ್ಲಿ ಬಂದ ಕಾಲಿಯಾ ರಫೀಕ್ ನೇತೃತ್ವದ ತಂಡ ತಲವಾರಿನಿಂದ ಕಡಿದು ಹತ್ಯೆ ನಡೆಸಿತ್ತು.
 
2015ರ ಅ.6 ರಂದು ಪುತ್ತೂರಿನ ಸಿಪಿಸಿ ಪ್ಲಾಝಾದಲ್ಲಿದ್ದ ಸನಾಝ್ ಎಂಬವರಿಗೆ ಸೇರಿದ್ದ  ರಾಜ ಧಾನಿ ಜ್ಯುವೆಲ್ಲರ್ಸ್ ಚಿನ್ನಾಭರಣಗಳ ಮಳಿಗೆಗೆ  ಗುಂಡಿನ ದಾಳಿ ನಡೆಸಿದ ಪ್ರಕರಣ,  2013ರ ಅ,24 ರಂದು ಉಪ್ಪಳ ನಿವಾಸಿ ಮುತಾಲಿಬ್ ಎಂಬ ವರು ಪತ್ನಿ ಜತೆಗೆ  ಉಪ್ಪಳದಿಂದ ಮನೆಗೆ ಹಿಂತಿರುಗುತ್ತಿದ್ದ  ವೇಳೆ  ಕಾಲಿಯ ರಫೀಕ್ ಮತ್ತು ತಂಡ  ಕಾರನ್ನು ಅಡ್ಡಗಟ್ಟಿ  ಮುತಾಲಿಬ್‌ನನ್ನು ಹೊರಗೆಳೆದು  ತಲವಾರಿನಿಂದ ಕಡಿದು ಹತ್ಯೆ ನಡೆಸಿತ್ತು. ಪತ್ನಿ ಎದುರುಗಡೆಯೇ ಹತ್ಯೆ ನಡೆಸಿ ದ್ದುದರಿಂದ  ಪ್ರಕರಣ ಕರುಣಾಜನಕವಾಗಿತ್ತು.  
 
ಈ  ಪ್ರಕರಣಕ್ಕೆ ಸಂಬಂಧಿಸಿ ಖಾಲಿಯಾನನ್ನು ಅಜ್ಮೇರ್ ನಿಂದ ಬಂಧಿಸಲಾಗಿತ್ತು. 2008 ರಲ್ಲಿ  ಕೈಕಂಬ ಉಪ್ಪಳದಲ್ಲಿ  ಕಿಡ್ನಾಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ   ಕಾಸರ ಗೋಡಿನ  ನ್ಯಾಯಾಲಯಕ್ಕೆ ಕರೆತರುವ ಸಂದರ್ಭ  ಪೊಲೀಸರ ಕೈಯಿಂದ ತಪ್ಪಿಸಿ  ಪರಾರಿಯಾಗಿದ್ದ. ಆ ಬಳಿಕ ಮಂಗಳೂ ರು ಪೊಲೀಸರು ಬಂಧಿಸಿದ್ದರು. 
 
ಘಟನಾ ಸ್ಥಳಕ್ಕೆ ಪೊಲೀಸ್  ಕಮಿಷ ನರ್‌ ಚಂದ್ರಶೇಖರ್‌, ಮಂಗಳೂರು ಡಿಸಿಪಿ ಸಂಜೀವ್ ಕುಮಾರ್, ಎಸಿಪಿ ಶೃತಿ,  ಉಳ್ಳಾಲ ಠಾಣೆ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ  ತೆರಳಿ ಪರಿಶೀಲಿಸಿದರು. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಬಂದಿದ್ದು. ಉಳ್ಳಾಲ ಹಾಗೂ ಮಂಜೇ ಶ್ವರ ಪೊಲೀಸರು ಚರ್ಚಿಸಿದ್ದು ತನಿಖೆ ನಡೆಸುತ್ತಿದ್ದಾರೆ.  
 
ಹಿಂದೆ ನಡೆದಿತ್ತು ಕೊಲೆಯತ್ನ
 
2015 ಡಿಸೆಂಬರ್ 30ರಂದು ರಾತ್ರಿಯೂ ಖಾಲಿಯಾ ರಫೀಕ್‌ನ ಮೇಲೆ ಕೊಲೆಯತ್ನ ನಡೆದಿತ್ತು. ಈತ ಸಂಚರಿಸುತ್ತಿದ್ದ ಕಾರಿನ ಮೇಲೆ ಇನ್ನೊಂದು ಗೂಂಡಾ ತಂಡ ಉಪ್ಪಳ-ಕೈಕಂಬ ರಸ್ತೆಯಲ್ಲಿ ಗುಂಡು ಹಾರಿಸಿದೆ. ಈ ವೇಳೆ ಖಾಲಿಯಾ ರಫೀಕ್ ವ್ಯಾಗನರ್ ಕಾರಿನಲ್ಲಿ ಸಂಚರಿಸುತ್ತಿದ್ದ. ಈ ಪ್ರಕರಣದಲ್ಲಿ ಖಾಲಿಯಾ ರಫೀಕ್ ಹಾಗೂ ಇನ್ನೊಂದು ತಂಡದ ಗೂಂಡಾನನ್ನು ಪೊಲೀಸರು ಬಂಧಿಸಿದ್ದರು. ಹೀಗೆ ಬಂಧಿತನಾದ ಖಾಲಿಯಾ ರಫೀಕ್ ಜೈಲಿನಲ್ಲಿದ್ದು ಕೆಲವು ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದನು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.