ADVERTISEMENT

ರವಿಕಾಂತೇ ಗೌಡ ಬರುವುದು ನಿಶ್ಚಿತ: ರಾಮಲಿಂಗಾರೆ‌ಡ್ಡಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 6:56 IST
Last Updated 24 ಜನವರಿ 2018, 6:56 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಮೂಲ್ಕಿ: ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನಿಷ್ಠಾವಂತ ಅಧಿಕಾರಿ. ಹಾಗಾಗಿಯೇ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಇಲ್ಲಿ 6 ತಿಂಗಳಲ್ಲೇ ವರ್ಗಾವಣೆ ವಿಚಾರ ಬರುವುದಿಲ್ಲ. ಅವರಿಗೆ 18 ತಾಲ್ಲೂಕು ಇರುವ ಬೆಳಗಾವಿ ನೀಡಲಾಗಿದೆ. ಚುನಾವಣಾ ಆಯೋಗದ ಸೂಚನೆ ಪ್ರಕಾರ ವರ್ಗಾವಣೆ ನಡೆಯುತ್ತಿದ್ದು, ಇದು ಮುಂದುವರಿಯಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗ ವಹಿ ಸಲು ಮಂಗಳವಾರ ಕರ್ನಿರೆಗೆ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಿಂದ ಎಸ್ಪಿ ರವಿಕಾಂತೇ ಗೌಡ ಜಿಲ್ಲೆಗೆ ಬರಲಿದ್ದಾರೆ ಎಂದರು.

ಅಪರಾಧದಲ್ಲಿ ರಾಜ್ಯ 2ನೇ ಸ್ಥಾನ ಹೊಂದಿರುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ಜಾವ ಡೇಕರ್ ಎನ್‌ಸಿಆರ್‌ಪಿ ಬಗ್ಗೆ ಮಾಹಿತಿ ಹೊಂದಿದ್ದರೆ ಉತ್ತಮ. ಅಪರಾಧದಲ್ಲಿ ಕರ್ನಾಟಕ ದೇಶದಲ್ಲಿ ಹತ್ತನೇ ಸ್ಥಾನ ಹೊಂದಿದೆ. ಬಿಜೆಪಿ ಆಡಳಿತ ಅವಧಿ ಯಲ್ಲಿ ಶೇ 6ರಷ್ಟಿದ್ದ ಅಪರಾಧ ಪ್ರಮಾ ಣ ಈಗ, ಶೇ 5 ಕ್ಕೆ ಇಳಿದಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚು ಅಪರಾಧ ನಡೆ ಯುತ್ತಿದೆ. ಈ ಬಗ್ಗೆ ಜಾವಡೇಕರ್‌ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ರಾಜ್ಯ ಬಂದ್ ವಿಚಾರದಲ್ಲಿ ಕಾಂಗ್ರೆಸ್‌ ಕೈವಾಡ ಇಲ್ಲ. ರೈತರೇ ದಿನ ನಿಗದಿಪಡಿಸಿ ಬಂದ್ ಕರೆ ನೀಡಿದ್ದಾರೆಯೇ ಹೊರತು ಕಾಂಗ್ರೆಸ್ ಅಲ್ಲ. ಇಂತಹ ರಾಜಕಾರಣ ಕಾಂಗ್ರೆಸ್‌ನಿಂದ ನಡೆಯಲು ಸಾಧ್ಯವೂ ಇಲ್ಲ, ಬಿಜೆಪಿಯವರು ಎಲ್ಲವನ್ನೂ ರಾಜ ಕೀಯ ದೃಷ್ಟಿಯಿಂದಲೇ ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಶಿರಾಡಿಯಲ್ಲಿ ಮತ್ತೆ ನಕ್ಸಲ್ ಹಾವಳಿ ವಿಚಾರವಾಗಿಯೇ ಮಾತನಾಡಿದ ಅವರು, ನಕ್ಸಲ್ ಸಮಸ್ಯೆ ಅಷ್ಟೇನೂ ತೋರುತ್ತಿಲ್ಲ. ಆದರೂ ನಕ್ಸಲ್ ವಿಚಾರ ಕೇಳುತ್ತಿದ್ದಂತೆ ಶೋಧ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.