ADVERTISEMENT

ಶ್ರೀಗಳಿಗಿಂತ ಕುಮಾರಸ್ವಾಮಿ ದೊಡ್ಡವರಲ್ಲ

ಬೆಳ್ಳೂಡಿಯ ಕನಕ‌ ಶಾಖಾ ಮಠದಲ್ಲಿ ಕೆ.ಎಸ್‌. ಈಶ್ವರ‍ಪ್ಪ

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:24 IST
Last Updated 26 ಮೇ 2018, 10:24 IST
ಹರಿಹರ ತಾಲ್ಲೂಕಿನ ಬೆಳ್ಳೂಡಿಯಲ್ಲಿರುವ ಕನಕ ಗುರುಪೀಠದ ಶಾಖಾ ಮಠದಲ್ಲಿ ಶುಕ್ರವಾರ ನಿರಂಜನಾನಂದಪುರಿ ಸ್ವಾಮೀಜಿ ಅವರಿಂದ ಶಾಸಕ ಕೆ.ಎಸ್. ಈಶ್ವರಪ್ಪ ಆಶೀರ್ವಾದ ಪಡೆದರು.
ಹರಿಹರ ತಾಲ್ಲೂಕಿನ ಬೆಳ್ಳೂಡಿಯಲ್ಲಿರುವ ಕನಕ ಗುರುಪೀಠದ ಶಾಖಾ ಮಠದಲ್ಲಿ ಶುಕ್ರವಾರ ನಿರಂಜನಾನಂದಪುರಿ ಸ್ವಾಮೀಜಿ ಅವರಿಂದ ಶಾಸಕ ಕೆ.ಎಸ್. ಈಶ್ವರಪ್ಪ ಆಶೀರ್ವಾದ ಪಡೆದರು.   

ಹರಿಹರ:  ‘ಮುಖ್ಯಮಂತ್ರಿ ಆದ ತಕ್ಷಣ ಸ್ವಾಮೀಜಿಗಳಿಗಿಂತ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಯಾವ ಸ್ವಾಮಿಗಳೂ ರಾಜಕೀಯ ಮಾಡಿಲ್ಲ. ಸಾಣೆಹಳ್ಳಿ ಶ್ರೀಗಳ ಬಗ್ಗೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು ಸರಿಯಲ್ಲ’ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ಬೆಳ್ಳೂಡಿಯಲ್ಲಿರುವ ಕನಕ‌ ಗುರುಪೀಠದ ಶಾಖಾ ಮಠದಲ್ಲಿ ಶುಕ್ರವಾರ ನಿರಂಜನಾನಂದಪುರಿ
ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ನಂತರ, ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಅವರು ಮಾತನಾಡಿದರು.

‘ತಪ್ಪು ಮಾಡಿದವರಿಗೆ ಬುದ್ಧಿ ಹೇಳುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಶ್ರೀಗಳು ರೈತರ ಪರವಾಗಿ ಪ್ರಶ್ನಿಸಿದ್ದಾರೆ ವಿನಾ ಬೇರೆಯ ಉದ್ದೇಶದಿಂದಲ್ಲ. ಸಾಣೆಹಳ್ಳಿ ಸ್ವಾಮೀಜಿ ಬಗ್ಗೆ ಮಾತನಾಡಿರುವುದು ಹಿಂದೂ ಸಮುದಾಯದ ಮಠಾಧೀಶರ ಬಗ್ಗೆ ಮಾತನಾಡಿದಂತೆ’ ಎಂದರು.

ADVERTISEMENT

ಬಿಜೆಪಿ ಮುಖಂಡರಾದ ಪರಮೇಶ್ವರಪ್ಪ, ಎಸ್.ಎಂ. ವಿರೇಶ್, ಬಿ. ನಾಗೇಂದ್ರಪ್ಪ, ಅಣ್ಣೇಶ್ ಐರಣಿ, ಕೀರ್ತಿಕುಮಾರ್ ಅವರೂ ಹಾಜರಿದ್ದರು.

‘ಬಿಜೆಪಿ ಮಣಿಸಲು ಆಗದು’

ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಬಿಜೆಪಿಯ ವಿರೋಧಿಗಳನ್ನು ಕರೆಸಲಾಗಿತ್ತು. ಆದರೆ, ಅವರೆಲ್ಲಾ ಈ ಮೊದಲು ಕಾಂಗ್ರೆಸ್ ವಿರೋಧಿಗಳಾಗಿದ್ದರು. ಕಾಂಗ್ರೆಸ್ ಅಸ್ತಿತ್ವ ಈಗ ಕಡಿಮೆಯಾಗುತ್ತಿದೆ. ವಿಧಿಯಿಲ್ಲದೇ ಪ್ರಾದೇಶಿಕ ಪಕ್ಷಗಳ ಜತೆ ಕಾಂಗ್ರೆಸ್‌ನವರು ಕೈ ಜೋಡಿಸುತ್ತಿದಾರೆ. ಅವರಿಂದ ಮೋದಿ ಹಾಗೂ ಬಿಜೆಪಿಯನ್ನು ಮಣಿಸಲು ಆಗದು ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.