ADVERTISEMENT

ಸಾವಯವ ಕೃಷಿಗೆ ಆದ್ಯತೆ ನೀಡಿ

ಕೃಷಿ ಅಧಿಕಾರಿ ಶ್ರೀನಿವಾಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:01 IST
Last Updated 8 ಫೆಬ್ರುವರಿ 2017, 6:01 IST

ತ್ಯಾವಣಿಗೆ: ರಸಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆ ಯಿಂದ ಭೂಮಿಯ ಫಲವತ್ತತೆ ಕಡಿಮೆ ಯಾಗುತ್ತದೆ ಎಂದು ಕೃಷಿ ಅಧಿಕಾರಿ ಬಿ.ವಿ.ಶ್ರೀನಿವಾಸಲು ಹೇಳಿದರು.

ಸಮೀಪದ ನಲ್ಕುದುರೆ ಗ್ರಾಮದಲ್ಲಿ ಕೃಷಿ ಇಲಾಖೆಯ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಮಂಗಳವಾರ ಹಮ್ಮಿಕೊಂಡಿದ್ದ ಸಾವಯವ ಕೃಷಿ, ಎರೆ ಗೊಬ್ಬರ ಉತ್ಪಾದನಾ ತಾಂತ್ರಿಕ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.

‘ನೈಸರ್ಗಿಕವಾಗಿ ಸಿಗುವ ವಸ್ತುಗ ಳಿಂದ ಗೊಬ್ಬರ ತಯಾರಿಸಿ, ಪರಿಸರಕ್ಕೆ ಮಾಲಿನ್ಯ ಉಂಟಾಗದಂತೆ ಬೆಳೆ ಬೆಳೆಯು ವುದೇ ಸಾವಯವ ಕೃಷಿ. ಕೃಷಿ ಇಲಾಖೆ ಯಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಿ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ರೈತ ಪಿ.ಸಿದ್ದಪ್ಪ  ಮಾತನಾಡಿ, ‘ಜೀವಾಮೃತ ಬಳಸಿ ಬಾಳೆ, ಅಡಿಕೆ ಬೆಳೆ ಬೆಳೆದು ಲಾಭ ಗಳಿಸಬಹುದು. ಯುವ ರೈತರು ಸಾವಯವ ಕೃಷಿಯಲ್ಲಿ ಅಸಕ್ತಿ ವಹಿಸಿ ಅಭಿವೃದ್ಧಿ ಹೊಂದಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಕೃಷಿ ಅಧಿಕಾರಿ ಶರಣಯ್ಯ, ಸಹಾಯಕ ಕೃಷಿ ಅಧಿಕಾರಿ ಅಬ್ದುಲ್‌ ಗಫಾರ್, ಎಲ್.ಆರ್.ಪಿ. ಚನ್ನಬಸಪ್ಪ, ನಾಗರಾಜ್, ರೈತ ಮಹಿಳೆ ಶಶಿಕಲಾ ಮೂರ್ತಿ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು. ಲತಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.