ADVERTISEMENT

ಹನಿ ನೀರು ಹರಿಯಬಿಟ್ಟರೂ ಉಳಿಗಾಲವಿಲ್ಲ

ವಿಶ್ವ ಜಲ ದಿನಾಚರಣೆಯಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಡಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:11 IST
Last Updated 23 ಮಾರ್ಚ್ 2017, 5:11 IST

ದಾವಣಗೆರೆ: ಪ್ರತಿ ಹನಿ ನೀರುನ್ನೂ ಕೂಡಿಸಿಡಬೇಕು. ನೀರನ್ನು ವ್ಯರ್ಥವಾಗಿ ಹರಿಯಬಿಟ್ಟರೆ ಉಳಿಗಾಲವಿರದು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಡಿ.ಪಾಟೀಲ ಎಚ್ಚರಿಸಿದರು.

ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭೂಮಿಯಲ್ಲಿ ಶೇ 70ರಷ್ಟು ನೀರಿ ದ್ದರೂ ನಮಗೆ ಬಳಸಲು ಸಿಗುವುದು ಕೇವಲ ಶೇ 0.2ರಷ್ಟು ಮಾತ್ರ. ಆದರೆ, ಈ ನೀರಿನ ಮೂಲಗಳೂ ಬರಿದಾಗು ತ್ತಿವೆ. ಹೀಗಾಗಿ ಮಳೆ ನೀರನ್ನು ಸಂಗ್ರಹಿಸಿ, ಅಂತರ್ಜಲ ಮಟ್ಟ ಹೆಚ್ಚಿಸುವ ತುರ್ತು ಎದುರಾಗಿದೆ ಎಂದು ಹೇಳಿದರು.

‘ರಾಜ್ಯದಲ್ಲಿ ಬರ ತೀವ್ರವಾಗಿದೆ. ಆದರೆ, ಅಧಿಕಾರಿಗಳು, ರಾಜಕಾರಣಿ ಗಳು ‘ಏನೂ ಸಮಸ್ಯೆ ಇಲ್ಲ. ನಮ್ಮಲ್ಲಿ ಹಣವಿದೆ. ಎಷ್ಟು ಬೇಕಾದರೂ ಖರ್ಚು ಮಾಡುತ್ತೇವೆ. ಎಷ್ಟಾದರೂ ಕೊಳವೆ ಬಾವಿಗಳನ್ನು ಕೊರೆಯಿಸುತ್ತೇವೆ’ ಎನ್ನುತ್ತಾರೆ. ಆದರೆ, ಅಂತರ್ಜಲ ಇದ್ದರಷ್ಟೇ ನೀರು ಸಿಗುವುದು. ಇನ್ನೂ ಕೊಳವೆಬಾವಿ ಕೊರೆಯುತ್ತ ಹೋದರೆ ಲಾವಾರಸ ಸಿಗಬಹುದಷ್ಟೇ’ ಎಂದರು.

ಬಿಇಎ ಶಿಕ್ಷಣ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ.ವೈ. ವೃಷಬೇಂದ್ರಪ್ಪ ಮಾತನಾಡಿ, ಕೊಳವೆ ಬಾವಿಗಳ ಬಳಕೆ ಹೆಚ್ಚಾದಂತೆ ಫ್ಲೋರೈಡ್‌ ಅಂಶದಿಂದ ಆರೋಗ್ಯ ಕೆಡಲಾ ರಂಭಿಸಿತು. ಇದರಿಂದ ‘ಆರ್‌ಒ’ ಘಟಕ ಗಳನ್ನು ಬಳಸಿ ನೀರು ಶುದ್ಧೀಕರಿಸಿ ಕುಡಿ ಯಲಾಗುತ್ತಿದೆ. ಒಂದು ಲೀಟರ್‌ ನೀರು ಶುದ್ಧ ಮಾಡಲು ಮೂರು ಲೀಟರ್‌ ಜೀವ ಜಲ ವ್ಯರ್ಥವಾಗುತ್ತದೆ. ಅಲ್ಲದೇ ಆರ್‌ಒ ಘಟಕದ ನೀರು ಕುಡಿಯುವುದ ರಿಂದಲೂ ಆರೋಗ್ಯ ಸಮಸ್ಯೆಗಳು ಕಾಡು ತ್ತವೆ. ಪ್ರತಿ ಮನೆಯಲ್ಲೂ ಮಳೆ ನೀರು ಸಂಗ್ರಹಿಸಿ ಕುಡಿಯುವುದು ಉತ್ತಮ ಎಂದು ತಿಳಿಸಿದರು.

ಭೂಮಿಯಲ್ಲಿ ತ್ಯಾಜ್ಯ ನೀರು ಎಂಬು ದಿಲ್ಲ. ನೀರನ್ನು ತ್ಯಾಜ್ಯ ಮಾಡುತ್ತಿ ರುವವರು ನಾವೇ. ಹೀಗಾಗಿ ನೀರನ್ನು ಮಲಿನ ಮಾಡದೇ, ಪೋಲು ಮಾಡದೇ ಸಂರಕ್ಷಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು ಎಂದರು.

ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರೊ.ಬಿ.ಇ.ರಂಗಸ್ವಾಮಿ ಮಾತನಾಡಿ, ದೇಶದ 13 ರಾಜ್ಯಗಳ 300 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಹೀಗಾಗಿ ನೀರನ್ನು ಜಾಗ್ರತಿಯಿಂದ ಬಳಸಬೇಕಿದೆ. ದೇಶದಲ್ಲಿ ಶೇ 83ರಷ್ಟು ನೀರು ಕೃಷಿಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ.  ಹೆಚ್ಚು. ಕಡಿಮೆ ನೀರು ಬಳಸಿ ಕೃಷಿ ಮಾಡುವ ಮಾರ್ಗಗ ಳನ್ನು ಅನುಸರಿಸಬೇಕಿದೆ ಎಂದರು.

ಕಲಾವಿದ ಐರಣಿ ಚಂದ್ರು ಮತ್ತು ತಂಡದವರು ಪರಿಸರ ಗೀತೆಗಳನ್ನು ಹಾಡಿದರು.  ಪ್ರಾಂಶುಪಾಲರಾದ ಡಾ.ಸಿ. ಆರ್. ಶಕೀಲಾ ಬಾನು ಅಧ್ಯಕ್ಷತೆ ವಹಿಸಿ ದ್ದರು. ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ.ಗುರುಸಿದ್ದ ಸ್ವಾಮಿ ಇದ್ದರು. ಎಂ. ಹರ್ಷಿದಾ ಸ್ವಾಗತಿಸಿದರು. ಎಸ್‌.ಜಿ.ವಿದ್ಯಾ ವಂದಿಸಿದರು. ಆರ್‌.ಕೆ.ಶಿವರಾಜ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.