ADVERTISEMENT

ಎಳ್ಳು, ಬೆಲ್ಲ ವಿನಿಮಯ: ಪರಸ್ಪರ ಶುಭ ಕೋರಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 9:14 IST
Last Updated 16 ಜನವರಿ 2018, 9:14 IST
ಕಾಸಲ್‌ ಶ್ರೀನಿವಾಸ ಶೆಟ್ಟಿ ಉದ್ಯಾನದಲ್ಲಿ ಮಹಿಳೆಯರು, ಮಕ್ಕಳು ಸಾಮೂಹಿಕ ಭೋಜನ ಮಾಡಿದರು.

ದಾವಣಗೆರೆ: ನಗರ ಒಳಗೊಂಡಂತೆ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸೋಮವಾರ ಜನರು ಪರಸ್ಪರ ಎಳ್ಳು ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಈ ಬಾರಿ ಗೊಂದಲ ಉಂಟಾಗಿತ್ತು. ಕೆಲ ಕ್ಯಾಲೆಂಡರ್‌ಗಳಲ್ಲಿ ಮಕರ ಸಂಕ್ರಾಂತಿ ಜ.14 ಎಂದಿದ್ದರೆ, ಇನ್ನು ಕೆಲ ಕ್ಯಾಲೆಂಡರ್‌ಗಳಲ್ಲಿ ಜ.15 ಎಂದು ನಮೂದಿಸಲಾಗಿತ್ತು. ಇದರಿಂದಾಗಿ ಜನರು ಭಾನುವಾರ ಮತ್ತು ಸೋಮವಾರ ಎರಡೂ ದಿನ ಸಂಕ್ರಾಂತಿಯ ಎಳ್ಳು, ಬೆಲ್ಲದ ಸವಿಯುಂಡರು.

ಹಳೇ ದಾವಣಗೆರೆಯ ಶಿವಾಜಿ ನಗರ, ಕುರುಬರ ಕೆರೆ, ಬಸವರಾಜ ಪೇಟೆ, ಕಾಯಿಪೇಟೆ, ಗಾಂಧಿನಗರ, ಚೌಡೇಶ್ವರಿ ನಗರ, ಎಸ್‌ಪಿಎಸ್‌ ನಗರ, ಎಸ್‌.ಎಸ್‌.ಮಲ್ಲಿಕಾರ್ಜುನ ನಗರ, ವಸಂತ ರಸ್ತೆ, ದೇವರಾಜು ಅರಸು ನಗರ ಒಳಗೊಂಡಂತೆ ಹೊಸ ದಾವಣಗೆರೆಯ ಎಂಸಿಸಿ ‘ಎ’, ‘ಬಿ’ ಬ್ಲಾಕ್‌, ನಿಜಲಿಂಗಪ್ಪ ಬಡಾವಣೆ, ಎಸ್‌.ಎಸ್. ಲೇ ಔಟ್‌, ವಿದ್ಯಾನಗರ, ತರಳಬಾಳು ಬಡಾವಣೆ.. ಹೀಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಸುಗ್ಗಿಯ ಹಬ್ಬದ ಕಳೆಗಟ್ಟಿತ್ತು.

ADVERTISEMENT

ಮುಂಜಾನೆಯೇ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯ ಆಕರ್ಷಕ ಚಿತ್ತರಾಗಳು ಮೂಡಿದ್ದವು. ಹಿರಿಯರು, ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸಂಜೆ ನೆರೆಹೊರೆಯವರಿಗೆ ಹಾಗೂ ಬಂಧುಗಳಿಗೆ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವ ಮೂಲಕ ಪರಸ್ಪರ ಶುಭ ಕೋರಿದರು.

ನದಿ ದಡದತ್ತ ಜನರು ನಿರಾಸಕ್ತಿ: ಹರಿಹರದ ತುಂಗಭದ್ರಾ ನದಿಯಲ್ಲಿ ಈ ಬಾರಿ ನೀರು ಇಲ್ಲದ ಕಾರಣ ಆಸ್ತಿಕರ ಮಕರ ಸಂಕ್ರಮಣದ ಪುಣ್ಯಸ್ನಾನಕ್ಕೆ ತುಸು ತೊಂದರೆಯಾಯಿತು. ಕೆಲವರು ನಿಂತ ನೀರಲ್ಲಿಯೇ ಸ್ನಾನ ಮಾಡಿದ್ದು ಕಂಡುಬಂದಿತು. ಹೊಳೆದಂಡೆಯಲ್ಲಿ ಕುಳಿತು ಸಾಮೂಹಿಕವಾಗಿ ಭೋಜನ ಮಾಡುವವರ ಸಂಖ್ಯೆಯೂ ಸಹ ಈ ಬಾರಿ ಇಳಿಕೆಯಾಗಿತ್ತು.

ಮಕ್ಕಳಿಗೆ ಶಾಲೆ ರಜೆ ಇದ್ದ ಕಾರಣ ನಗರದ ವಿಶ್ವೇಶ್ವರಯ್ಯ ಪಾರ್ಕ್‌, ಎಸ್‌.ಎಸ್‌.ಬಡಾವಣೆಯ ಉದ್ಯಾನ, ಕಾಸಲ್‌ ಶ್ರೀನಿವಾಸ ಶೆಟ್ಟಿ ಉದ್ಯಾನ, ವಿದ್ಯಾನಗರದ ಉದ್ಯಾನ ಒಳಗೊಂಡಂತೆ ನಗರದ ಪ್ರಮುಖ ಉದ್ಯಾನಗಳಲ್ಲಿ ಮಹಿಳೆಯರು, ಮಕ್ಕಳು ಸೇರಿ ಒಂದೆಡೆ ಕುಳಿತು ಸಾಮೂಹಿಕವಾಗಿ ಭೋಜನ ಮಾಡಿದರು. ಮಕ್ಕಳು ಉದ್ಯಾನದಲ್ಲಿ ಆಟವಾಡಿ ನಲಿದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.