ADVERTISEMENT

‘ಎಳೆಯರು, ನಾವು ಗೆಳೆಯರು’ ಜೂನ್ 2ಕ್ಕೆ

ಸಿನಿಮಾ ರಂಗಕ್ಕೆ ಡ್ರಾಮಾ ಜೂನಿಯರ್ಸ್‌ ಪ್ರತಿಭೆಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:13 IST
Last Updated 25 ಮೇ 2017, 9:13 IST
ಎಳೆಯರು, ನಾವು ಗೆಳೆಯರು ಚಿತ್ರ ತಂಡದ  ಕಲಾವಿದರು ಹುಬ್ಬಳ್ಳಿಯಲ್ಲಿ ಬುಧವಾರ ಒಟ್ಟಾಗಿ ಕಾಣಿಸಿಕೊಂಡಿದ್ದು ಹೀಗೆ
ಎಳೆಯರು, ನಾವು ಗೆಳೆಯರು ಚಿತ್ರ ತಂಡದ ಕಲಾವಿದರು ಹುಬ್ಬಳ್ಳಿಯಲ್ಲಿ ಬುಧವಾರ ಒಟ್ಟಾಗಿ ಕಾಣಿಸಿಕೊಂಡಿದ್ದು ಹೀಗೆ   

ಹುಬ್ಬಳ್ಳಿ:  ಡ್ರಾಮಾ ಜೂನಿಯರ್ಸ್‌ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದ ಪ್ರತಿಭೆಗಳು ಒಂದಾಗಿ ನಟಿಸಿರುವ ‘ಎಳೆಯರು, ನಾವು ಗೆಳೆಯರು’ ಮಕ್ಕಳ ಚಿತ್ರ ಜೂನ್‌ 2ರಂದು ಬಿಡುಗಡೆಯಾಗಲಿದೆ. ಸಿನಿಮಾದ ಸಹ ನಿರ್ದೇಶಕ ಹರೀಶ್‌ ಭಟ್‌ ಬುಧವಾರ ನಗರದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

‘ಪುಟಾಣಿ ಎಜೆಂಟ್‌, ಚಿನ್ನಾರಿ ಮುತ್ತಾ ಹೀಗೆ ಅನೇಕ ಮಕ್ಕಳು ಚಿತ್ರಗಳು ಹಿಂದೆ ಬಂದಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಕಥೆ ಆಧಾರಿತ ಚಿತ್ರಗಳು ಬಂದಿರಲಿಲ್ಲ. ಆದ್ದರಿಂದ ಡ್ರಾಮಾ ಜೂನಿಯರ್ಸ್‌ ಪ್ರತಿಭೆಗಳನ್ನು ಬಳಸಿಕೊಂಡು ಆಕಾಶ್‌ ಪ್ರೊಡಕ್ಷನ್‌ನಲ್ಲಿ ಮೊದಲ ಚಿತ್ರ ನಿರ್ಮಿಸಿದ್ದೇವೆ’ ಎಂದರು.

‘ಸಿನಿಮಾದಲ್ಲಿ ಐದು ಹಾಡುಗಳು ಇದ್ದು, ಮನರಂಜನೆ ಮತ್ತು ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದೆ. ಒಟ್ಟು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಮೈಸೂರು, ಚನ್ನಪಟ್ಟಣ, ತೀರ್ಥಹಳ್ಳಿಯಲ್ಲಿ 40 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಧಾರವಾಡದ ಪ್ರತಿಭೆ: ಡ್ರಾಮಾ ಜೂನಿಯರ್ಸ್‌ನಲ್ಲಿ ಮಿಂಚಿದ್ದ ಧಾರವಾಡದ ಪ್ರತಿಭೆ ಅಮೋಘ ಕೆರೂರ ಈ ಚಿತ್ರದಲ್ಲಿ ಗೊರಕೆ ಶಂಕರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಧಾರವಾಡದ ಕೆ.ಇ. ಬೋರ್ಡ್‌ನಲ್ಲಿ ಎರಡನೇ ತರಗತಿ ಓದುತ್ತಿರುವ ಅಮೋಘ ಅಭಿನಯಿಸಿದ ಎರಡನೇ ಚಿತ್ರ ಇದಾಗಿದ್ದು, ಈ ಮೊದಲು ‘ಸಂತು ಸ್ಟ್ರೇಟ್ ಫಾರ್ವರ್ಡ್‌’ ಸಿನಿಮಾದಲ್ಲಿ ನಟಿಸಿದ್ದ.

ಅಚಿಂತ್ಯ, ನಿಹಾಲ, ಅಭಿಷೇಕ, ಪುಟ್ಟರಾಜು, ತುಷಾರ, ಮಹತಿ, ತೇಜಸ್ವಿನಿ, ಮಹೇಂದ್ರ ಮತ್ತು ಸೂರಜ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಭಾಷಣಕಾರ ರಿಚರ್ಡ್‌ ಲೂಯಿಸ್ ಅವರು ಕಥೆ ಬರೆದಿದ್ದಾರೆ. ವಿಕ್ರಂ ಸೂರಿ ನಿರ್ದೇಶಿಸಿದ್ದಾರೆ.

*
ಡ್ರಾಮಾ ಜೂನಿಯರ್ಸ್‌ನಲ್ಲಿ ವಯಸ್ಸಿಗೆ ಮೀರಿದ ಪಾತ್ರ ಮಾಡುತ್ತಿದ್ದೆ. ಆದರೆ ಸಿನಿಮಾದಲ್ಲಿ ನನ್ನ ವಯಸ್ಸಿಗೆ ತಕ್ಕಂತೆ ಅಭಿನಯಿಸಿದ್ದರಿಂದ ಖುಷಿಯಾಗಿದೆ
-ತೇಜಸ್ವಿನಿ
ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT