ADVERTISEMENT

ಜಾತ್ರೆ: ಭಾರ ಎತ್ತುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:49 IST
Last Updated 18 ಏಪ್ರಿಲ್ 2017, 5:49 IST

ಕುಂದಗೋಳ: ಪಟ್ಟಣದ ಕಾಳಿದಾಸ ನಗರದ ಹನುಮಂತ ದೇವರ ರಥೋತ್ಸವದ ನಿಮಿತ್ತ ಭಾರ ಎತ್ತುವ ಸ್ಪರ್ಧೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮದ ನಾಗರಾಜ ಹನುಮಂತಪ್ಪ ಬೊಮ್ಮಗೊಂಡ 10 ಕೆ.ಜಿ ಕಲ್ಲನ್ನು ಕಾಲಿಗೆ ಕಟ್ಟಿಕೊಂಡು 1 ಕ್ವಿಂಟಲ್ ಜೋಳದ ಚೀಲವನ್ನು ಹೆಗಲ ಮೇಲೆ ಹೊತ್ತು ಮಾರುತಿ ದೇವಸ್ಥಾನದ ರಥೋತ್ಸವ ನಡೆಯುವ ಮಾರ್ಗದಲ್ಲಿ ಕ್ರಮಿಸಿ  ಸಾಹಸ ಮೆರೆದರು. ನಂತರ ಸಂಜೆ ನಡೆದ ಕಡುಬಿನ ಕಾಳಗ ಭಕ್ತರ ಮನಸೂರೆಗೊಂಡಿತು.

ಭಾರ ಎತ್ತುವ ಸ್ಪರ್ಧೆಯಲ್ಲಿ ನಾಗರಾಜ ಬೊಮ್ಮಗೊಂಡ. ಕಾಯಿ ಹರಿಯುವ ಸ್ಪರ್ಧೆಯಲ್ಲಿ ಕಲ್ಲನಗೌಡ ಅದರಗುಂಚಿ, ನಿಧಾನ ಸೈಕಲ್ ಓಡಿಸುವ ಸ್ಪರ್ಧೆಯಲ್ಲಿ ಶಶಿಕಾಂತ ನೀಲಪ್ಪ ನಾಯ್ಕರ (ಪ್ರಥಮ), ಹರೀಶ ಗಾಯಕವಾಡ (ದ್ವಿತೀಯ) ಹಾಗೂ ತೃತೀಯ ಸ್ಥಾನವನ್ನು ಮಂಜನಾಥ ಗುಡಕರ ಪಡೆದುಕೊಂಡರು.

ವಿಜೇತರಿಗೆ ಮಾರುತಿ ದೇವರ ವಿಗ್ರಹ, ನಗದು, ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಬಸವರಾಜ ವಟವಟಿ, ಮುಖಂಡರಾದ ಲಕ್ಷ್ಮಣ ರಂಗನಾಯ್ಕರ, ಮಾಬೂಲಿ ನದಾಫ, ಶಿವಾನಂದ ಕಟಗಿ, ಸಿದ್ದಪ್ಪ ಇಂಗಳಳ್ಳಿ, ಶಿವಪ್ಪ ಅಳಗೋಡಿ, ಕರಿಸಿದ್ದೇಶ್ವರ, ಬಸವೇಶ್ವರ, ಮೌನೇಶ್ವರ, ಮಾರುತಿ ದೇವಸ್ಥಾನ ಹಾಗೂ ಶ್ರೀ ರಾಮದೇವಜಿ ಭಜನಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.