ADVERTISEMENT

ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಪರತೆ ಮೈಗೂಡಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:32 IST
Last Updated 7 ನವೆಂಬರ್ 2017, 6:32 IST

ಧಾರವಾಡ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಯುವ ತಂತ್ರಜ್ಞರು ಪರಿಶ್ರಮದಿಂದ ಕೆಲಸ ಮಾಡುತ್ತಿದ್ದರೂ, ಕೆಲವು ತಂತ್ರಜ್ಞಾನಗಳಿಗೆ ಪಾಶ್ಚಾತ್ಯ ದೇಶಗಳ ಮೇಲಿನ ಅವಲಂಬನೆ ಇನ್ನೂ ಕಡಿಮೆಯಾಗಿಲ್ಲ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ.ಎಸ್.ಎಂ. ಶಿವಪ್ರಸಾದ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ ‘ವಿಶ್ವಕ್ಕೆ ಬೆಳಕು ತೋರಿದವರು ಹಾಗೂ ವಿಜ್ಞಾನದ ನೂರೆಂಟು ಪ್ರಶ್ನೆಗಳು’ ಪುಸ್ತಕಗಳ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಪರತೆ ಮೈಗೂಡಿಸಿಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ಅಗಾಧ ಪ್ರತಿಭೆ ಇದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ. ತಂತ್ರಜ್ಞಾನದ ಹಲವು ಸಂಗತಿಗಳಿಗೆ ನಾವು ಬೇರೆ ದೇಶಗಳತ್ತ ನೋಡುತ್ತಿದ್ದೇವೆ. ಯುವ ವಿಜ್ಞಾನಿಗಳನ್ನು ಬಳಸಿಕೊಂಡು ಹೆಚ್ಚಿನ ಸಂಶೋಧನೆಗೆ ಮುಂದಾಗಬೇಕಿದೆ ಎಂದು ಹೇಳಿದರು.

ADVERTISEMENT

ಕ.ವಿ.ವಿ. ಭೂಗೋಳ ವಿಭಾಗದ ಮುಖ್ಯಸ್ಥ ಡಾ.ಅರವಿಂದ ಮೂಲಿಮನಿ ಮಾತನಾಡಿ, ವಿಜ್ಞಾನ ಕೇವಲ ವಿಜ್ಞಾನಿಗಳು ಹಾಗೂ ವಿಜ್ಞಾನ ವಿದ್ಯಾರ್ಥಿಗಳ ಆಸ್ತಿಯಲ್ಲ. ಸಾಹಿತ್ಯದಂತೆ ಅದೂ ಇಡೀ ಸಮಾಜಕ್ಕೆ ಸೇರಿದೆ ಎಂದರು.

ಡಾ.ಪಾಟೀಲ ಪುಟ್ಟಪ್ಪ,  ಮನೋಜ ಪಾಟೀಲ, ಕೆ. ಜಿ.ದೇವರಮನಿ, ಡಾ.ಲಿಂಗರಾಜ ರಾಮಾಪೂರ, ಡಾ. ಅನಿಲಕುಮಾರ ಮುಗಳಿ, ಡಾ. ಡಿ.ಎಂ.ಹಿರೇಮಠ, ಸೇತುರಾಮ ಹುನಗುಂದ, ಡಾ.ಶಶಿಧರ ನರೇಂದ್ರ, ಸುರೇಶ ಹಿರೇಮಠ, ಮಹಾಂತೇಶ ನರೇಗಲ್ಲ , ಪ್ರಕಾಶ ಉಡಿಕೇರಿ, ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ, ಡಾ. ಅರವಿಂದ ಯಾಳಗಿ ಇದ್ದರು.

See also:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.