ADVERTISEMENT

‘ತತ್ವಜ್ಞಾನಿಗಳ ದಿನವಾಗಿ ಆಚರಿಸಿ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 8:33 IST
Last Updated 20 ಏಪ್ರಿಲ್ 2017, 8:33 IST

ಹುಬ್ಬಳ್ಳಿ: ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ತತ್ವಜ್ಞಾನಿಗಳ ದಿನವಾಗಿ ಸರ್ಕಾರ ಆಚರಿಸಬೇಕು ಎಂದು ಶ್ರೀ ಜಗದ್ಗುರು ಶಂಕರಾಚಾರ್ಯ ಅಭಿಮಾನಿಗಳ ಮಹಾಸಭೆ ಒತ್ತಾಯಿಸಿದೆ.‘ಜಿಲ್ಲೆಯಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಜಿಲ್ಲಾ ಆಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಜಂಟಿಯಾಗಿ ಭಕ್ತ ಸಮೂಹ ಮತ್ತು ಸಂಘ ಸಂಸ್ಥೆಗಳ ಸಹಾಯ ಪಡೆದು ಶ್ರೀಶಂಕರಾಚಾರ್ಯರ ಜಯಂತಿಯನ್ನು ತತ್ವಜ್ಞಾನಿಗಳ ದಿನವಾಗಿ ಆಚರಿಸುತ್ತಾ ಬಂದಿದೆ.

ಆದರೆ, ಪ್ರಸಕ್ತ ಸಾಲಿನಲ್ಲಿ ತತ್ವಜ್ಞಾನಿಗಳ ದಿನವಾಗಿ ಆಚರಿಸಲು ಜಿಲ್ಲಾಡಳಿತ ದಿನಾಂಕ ಪ್ರಕಟಿಸದೇ ಇರುವುದು ಭಕ್ತರಿಗೆ ನೋವುಂಟಾಗಿದೆ’ ಎಂದು ಶಂಕರಾಚಾರ್ಯರ ಜಯಂತ್ಯುತ್ಸವ ಸಮಿತಿ ಸಂಚಾಲಕ ಆರ್‌.ಡಿ. ಕುಲಕರ್ಣಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆಸ್ತಿಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಏ.30ರಂದು ತತ್ವಜ್ಞಾನಿಗಳ ದಿನಾಚರಣೆಯಾಗಿ ಆಚರಿಸಲು ಜಿಲ್ಲಾಡಳಿತ ಆದೇಶಿಸಿ, ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಏ.21ರಂದು ಭಕ್ತರು ಒಗ್ಗೂಡಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸಮಿತಿ ಪದಾಧಿಕಾರಿಗಳಾದ ನರೇಂದ್ರ ಕುಲಕರ್ಣಿ, ಎಂ.ಬಿ. ನಾತು, ಡಿ.ಕೆ. ಕುಲಕರ್ಣಿ, ಸುನಿಲ ಗುಮಾಸ್ತೆ, ಮುರಳೀಧರ ಕರ್ಜಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.