ADVERTISEMENT

ದಲಿತ ನೇತಾರನಿಗೆ ನಮನ

ಬಾಬು ಜಗಜೀವನರಾಂ ಪ್ರತಿಮೆಗೆ ದಲಿತ ಸಂಘಟನೆಗಳಿಂದ ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 8:30 IST
Last Updated 6 ಏಪ್ರಿಲ್ 2018, 8:30 IST
ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರು ಬಾಬು ಜಗಜೀವನರಾಂ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರು ಬಾಬು ಜಗಜೀವನರಾಂ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು   

ಹುಬ್ಬಳ್ಳಿ: ದಲಿತ ನೇತಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 111ನೇ ಜನ್ಮದಿನದ ಅಂಗವಾಗಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಗುರುವಾರ ನಗರದಲ್ಲಿ ಮೆರವಣಿಗೆ ನಡೆಸಿ, ಇಂದಿರಾ ಗಾಜಿನಮನೆಯಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮಾತ್ರ ಅವಕಾಶ ನೀಡಿದ್ದ ಚುನಾವಣಾ ಆಯೋಗ ಭಾಷಣಕ್ಕೆ ನಿರ್ಬಂಧ ವಿಧಿಸಿತ್ತು. ಹೀಗಾಗಿ, ಬಂಕಾಪುರ ಚೌಕದಿಂದ ಮೆರವಣಿಗೆ ಮೂಲಕ ಬಂದಿದ್ದ ಮಾದಿಗ ಮಹಾಸಭಾದ ಕಾರ್ಯಕರ್ತರು ಹಾಗೂ ಮುಖಂಡರು ಭಾಷಣ ಮಾಡುವ ಗೋಜಿಗೆ ಹೋಗಲಿಲ್ಲ.ಜಾಂಜ್‌ ಸೇರಿದಂತೆ ವಿವಿಧ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಬಂದ ಮುಖಂಡರು ಹಾರವನ್ನು ಹಾಕಿ ಬಾಬೂಜಿ ಸ್ಮರಣೆ ಮಾಡಿದರು.

ಮಹಾಸಭಾ ಅಧ್ಯಕ್ಷ ಬಸಪ್ಪ ಮಾದರ, ಮುಖಂಡರಾದ ದುರುಗಪ್ಪ, ಪರಶುರಾಮ ಪೂಜಾರ, ಮೋಹನ ಪೆರೂರ, ವೆಂಕಟೇಶ, ಐ.ಎ. ದೊಡಮನಿ, ಡಿ.ಎಂ.ದೊಡಮನಿ, ರಂಗನಾಯಕ ತಪೇಲಾ, ಶ್ರೀನಿವಾಸ ಸಾಂಬ್ರಾಣಿ, ನಾರಾಯಣಬಾಬು ಇದ್ದರು.ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಸದಾನಂದ ಡಂಗನವರ, ಅಲ್ತಾಫ್‌ ಹಳ್ಳೂರ ಬಾಬೂಜಿಗೆ ಗೌರವ ಸಲ್ಲಿಸಿದರು.

ಹರಿಜನ ಸೇವಾ ಸಮಿತಿ: ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಂ ಅವರ ಜನ್ಮದಿನೋತ್ಸವದ ಅಂಗವಾಗಿ ಹರಿಜನ ಸೇವಾ ಸಮಿತಿಯು ವತಿಯಿಂದ ನಗರದ ವಲ್ಲಭಬಾಯಿ ನಗರ, ಮಂಟೂರ ಜೋಪಡಿ, ಸುಡಗಾಡ ಚಾಳ, ಸಮುದಾಯ ಭವನದಲ್ಲಿ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಸತೀಶ ಹೆಗಡೆ, ನೂರಂದಪ್ಪ ಹೆಗಡೆ, ವಸಂತಕುಮಾರ ಬಳ್ಳಾರಿ, ವಿಜಯ ಕರ್ರಾ, ಶ್ರೀನಿವಾಸ ರಟ್ಟಿ, ಹನುಮಂತ ಬಳ್ಳಾರಿ ಇದ್ದರು.

ADVERTISEMENT

ಸಮತಾ ಸೇನಾ: ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ವತಿಯಿಂದ ಜಯಂತ್ಯುತ್ಸವ ಆಚರಿಸಲಾಯಿತು.

ಗುರುನಾಥ ಉಳ್ಳಿಕಾಶಿ, ರವೀಂದ್ರ ಕಲ್ಯಾಣಿ, ಮಾರುತಿ ದೊಡ್ಡಮನಿ, ವಿಜಯ ಗುಂಟ್ರಾಳ, ಪ್ರೇಮನಾಥ ಚಿಕ್ಕತುಂಬಳ, ಬಾಷಾ ಮಾಸನೂರ, ಚೇತನ ಹಿರೇಕೆರೂರ, ಶೋಭಾ ಬಳ್ಳಾರಿ, ಸೋಮು ಹಂಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.