ADVERTISEMENT

ಧಾರವಾಡ ಕೃಷಿ ವಿ.ವಿ ದೇಶದಲ್ಲೇ 5ನೇ ಅತ್ಯುತ್ತಮ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 8:22 IST
Last Updated 5 ಏಪ್ರಿಲ್ 2018, 8:22 IST

ಧಾರವಾಡ: ‘ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ರಾಷ್ಟ್ರದಲ್ಲೇ 5ನೇ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯ ಎಂದು ಘೋಷಿಸಿದೆ. ಈ ವಿಷಯವನ್ನು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ವಿ.ಐ.ಬೆಣಗಿ ಹೇಳಿಕೆಯಲ್ಲಿ ತಿಳಿಸಿದರು.‘ನ್ಯಾಷನಲ್ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್ ಫ್ರೇಮ್‌ವರ್ಕ್‌ ಸಂಸ್ಥೆ ಸಮೀಕ್ಷೆ ಮಾಡಿದೆ. ವಿಶ್ವವಿದ್ಯಾಲಯಗಳ ಸಾಂಸ್ಥಿಕ ಸ್ವರೂಪ, ಶೈಕ್ಷಣಿಕ ಸಾಧನೆ, ಪದವೀಧರರ ಗುಣಮಟ್ಟ, ಸಂಶೋಧನೆ ಹಾಗೂ ರೈತ ಸಮುದಾಯಕ್ಕೆ ಅವಶ್ಯವಿರುವ ತಂತ್ರಜ್ಞಾನ ವರ್ಗಾವಣೆ, ಮಾನವ ಸಂಪನ್ಮೂಲ ಗುಣಮಟ್ಟ, ಹಣಕಾಸು, ಮೂಲಸೌಕರ್ಯ, ಪದವೀಧರರ ಆಯ್ಕೆ, ವಿಸ್ತರಣೆ ಹಾಗೂ ಒಳಗೊಳ್ಳುವಿಕೆಯ ಅಂಶಗಳನ್ನು ಗಮನಿಸಿ ಈ ಸ್ಥಾನ ನೀಡಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‘ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಯ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗೂ ಪಠ್ಯೇತರ ಸಾಧನೆಗಳು, ಜಾಗತಿಕ ಮಟ್ಟದ ಶೈಕ್ಷಣಿಕ ಸಂಸ್ಥೆಗಳೊಂದಿಗೆ ವಿಶ್ವವಿದ್ಯಾಲಯ ಹೊಂದಿರುವ ಸಹಭಾಗಿತ್ವವನ್ನೂ ಕೂಡಾ ಆಯ್ಕೆ ಸಮಿತಿ ಪರಿಗಣಿಸಿತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.