ADVERTISEMENT

ಬಿಆರ್‌ಟಿಎಸ್‌: ಅಪಘಾತ ತಡೆಗೆ ಸಿಮೆಂಟ್ ಚೀಲದ ರಕ್ಷೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 9:26 IST
Last Updated 15 ಜುಲೈ 2017, 9:26 IST

ಹುಬ್ಬಳ್ಳಿ: ಸ್ಥಗಿತಗೊಂಡಿರುವ ಬಿಆರ್‌ಟಿಎಸ್‌ ರಸ್ತೆ ಕಾಮಗಾರಿಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ತಡೆಯಲು ಬಿಆರ್‌ಟಿಎಸ್ ಅಧಿಕಾರಿಗಳು ಶುಕ್ರವಾರ ಜೆ.ಜಿ.ಕಾಮರ್ಸ್‌ ಕಾಲೇಜಿನ ಎದುರು ಸಿಮೆಂಟ್‌ ಚೀಲಗಳನ್ನು ಇಡುವ ಮೂಲಕ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ.  

‘ಪ್ರಜಾವಾಣಿ’ಯಲ್ಲಿ ಶುಕ್ರವಾರ ಪ್ರಕಟವಾದ ‘ರಸ್ತೆ ನಡುವೆ ನಿಂತು ಬಸ್ ಏರಲು ಪರದಾಟ’ ಎಂಬ ವರದಿಗೆ ಸ್ಪಂದಿಸಿದ ಬಿಆರ್‌ಟಿಎಸ್‌ ಅಧಿಕಾರಿಗಳು, ಏರು ತಗ್ಗಿನ ಎರಡು ರಸ್ತೆಗಳ ನಡುವೆ 40ರಷ್ಟು ಸಿಮೆಂಟ್ ಚೀಲಗಳನ್ನು ಇಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.

ಸದ್ಯ ನಗರದ ಮಹಿಳಾ ಪಾಲಿಟೆಕ್ನಿಕ್ ರಸ್ತೆಯ ಮುಂಭಾಗದಿಂದ ಕೆ.ಎಂ.ಸಿ ವೃತ್ತದವರೆಗೆ ನಡೆಯುತ್ತಿರುವ ಕಾಮಗಾರಿಯಿಂದ ಸಂಚಾರ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಗಮನ ಸೆಳೆಯಲಾಗಿತ್ತು.

ADVERTISEMENT

‘ಯಾವುದೇ ಅಪಘಾತ ನಡೆಯದಂತೆ ಎಚ್ಚರಿಕೆ ವಹಿಸಲು ಸದ್ಯಕ್ಕೆ ಈ ಕ್ರಮ ತೆಗೆದುಕೊಂಡಿದ್ದೇವೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸುತ್ತೇವೆ’ ಎಂದು ಬಿಆರ್‌ಟಿಎಸ್‌ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಹಿರೇಮಠ ‘ಪ್ರಜಾವಾಣಿ’ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.