ADVERTISEMENT

ಮರಾಠರನ್ನು ‘2ಎ’ಗೆ ಸೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 5:28 IST
Last Updated 8 ಸೆಪ್ಟೆಂಬರ್ 2017, 5:28 IST

ಹುಬ್ಬಳ್ಳಿ: ಮರಾಠ ಸಮಾಜವನ್ನು ಪ್ರವರ್ಗ ‘3ಬಿ’ಯಿಂದ ‘2ಎ’ಗೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಮರಾಠ ಕ್ರಾಂತಿ (ಮೌನ) ಮೋರ್ಚಾ ಸದಸ್ಯರು ಗುರುವಾರ ಹುಬ್ಬಳ್ಳಿಯ ಕೋರ್ಟ್‌ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ಮೋರ್ಚಾದ ಅಧ್ಯಕ್ಷ ಸುನೀಲ ದಳವಿ, ‘ರಾಜ್ಯದಾದ್ಯಂತ ಸುಮಾರು 40 ಲಕ್ಷ ಮರಾಠ ಸಮುದಾಯದವರಿದ್ದು, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ, ರಾಜ್ಯ ಹಿಂದುಳಿದ ಆಯೋಗದ ಶಿಫಾರಸಿನಂತೆ ಸರ್ಕಾರ ನಮ್ಮನ್ನು ಪ್ರವರ್ಗ ‘3ಬಿ’ಯಿಂದ ‘2ಎ’ಗೆ ಸೇರಿಸಬೇಕು’ ಎಂದರು.

‘ಸಮುದಾಯದ ಅಭಿವೃದ್ಧಿಗಾಗಿ ಛತ್ರಪತಿ ಶಾಹು ಮಹಾರಾಜ ಮರಾಠ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಶಿವಾಜಿ ಜಯಂತಿ ದಿನವಾದ ಫೆಬ್ರುವರಿ 19ರಂದು ಸಾರ್ವತ್ರಿಕ ರಜೆ ಘೋಷಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ತೆರೆಯಬೇಕು. ಅಲ್ಲದೆ, ಶಾಹು ಮಹಾರಾಜರ ಅಧ್ಯಯನ ಪೀಠ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಳಿಕ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮೋರ್ಚಾದ ಪದಾಧಿಕಾರಿಗಳಾದ ಮಹೇಶ ದಾಬಡೆ, ನಾರಾಯಣ ವೈದ್ಯ ಹಾಗೂ ಅಶೋಕ ಕಾಶಿನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.