ADVERTISEMENT

ವಿಮೆ ಹಣ ಜಮೆಗೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:58 IST
Last Updated 8 ಜುಲೈ 2017, 6:58 IST

ಕುಂದಗೋಳ: ಪ್ರಸಕ್ತ ಸಾಲಿನ ಮುಂಗಾರು ಮಳೆ ಇಲ್ಲದಂತಾಗಿದ್ದು, ಕಳೆದ ವರ್ಷದ ಕೇಂದ್ರ ಸರ್ಕಾರದ ಫಸಲ್ ಬಿಮಾ ವಿಮೆ ಹಣವನ್ನು ಕೂಡಲೇ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆಗೊಳಿಸಲು ವಿಮೆ ಕಂಪೆನಿಯವರಿಗೆ ಸೂಚಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ರೈತರು ಇಲ್ಲಿನ ಸಹಾಯಕ ಕೃಷಿ ಇಲಾಖೆ ನಿರ್ದೇಶಕರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

‘ವೆಬ್‌ಸೈಟ್‌ನಲ್ಲಿ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗೆ ಇಂತಿಷ್ಟು ವಿಮೆ ಹಣ ಮಂಜೂರಾತಿ ಪಡೆದಿದೆ ಎಂದು ತೋರಿಸಲಾಗುತ್ತಿದೆ. ಇದರ ಪ್ರತಿ ಹಿಡಿದು ಆಯಾ ಬ್ಯಾಂಕುಗಳಿಗೆ ತೆರಳಿದರೆ ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲ ಕೃಷಿ ಇಲಾಖೆ ಆಧಿಕಾರಿಗಳನ್ನು ಕೇಳಿ ಎನ್ನುತ್ತಿದ್ದಾರೆ’ ಎಂದು ತಾಲ್ಲೂಕಿನ ರೈತರು ದೂರಿದರು.

‘ಕೃಷಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ನಿಮ್ಮ ಹಣ ಟಾಟಾ ವಿಮೆ ಕಂಪೆನಿಯವರು ಜಮೆ ಮಾಡುತ್ತಾರೆ. ಈಗಾಗಲೇ ಅವರಿಗೆ ಬೇಗ ಜಮೆ ಮಾಡುವಂತೆ ತಿಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಂಪೆನಿ ಎಲ್ಲಿದೆ ಎಂಬ ಮಾಹಿತಿಯೂ ಇಲಾಖೆ ಬಳಿ ಇಲ್ಲ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.