ADVERTISEMENT

ಅಧಿಕಾರಿಗಳ ನಿಷ್ಕ್ರೀಯತೆಗೆ ತರಾಟೆ

ಬರ ನಿರ್ವಹಣೆ: ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿ ಚಾಟಿ, ಸಮರ್ಪಕ ಕೆಲಸಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:05 IST
Last Updated 11 ಮಾರ್ಚ್ 2017, 11:05 IST
ಗದಗ: ಕುಡಿಯುವ ನೀರಿನ ಕಾಮಗಾರಿಗೆ ಅಧಿಕಾರಿಗಳು ಕಣ್ಣುಮುಚ್ಚಿ ಸಹಿ ಮಾಡಬಾರದು. ಕಾಮಗಾರಿ ಗುಣಮಟ್ಟ ಪರಿಶೀಲಿಸಿ, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದನ್ನು ಖಾತರಿ ಪಡಿಸಿಕೊಂಡ ನಂತರ ಗುತ್ತಿಗೆದಾರರಿಗೆ ಶುಲ್ಕ ಪಾವತಿ ಮಾಡಬೇಕು.

ಸರ್ಕಾರ ಅನುದಾನ ಜನಸಾಮಾನ್ಯನಿಗೆ ಸದ್ಬಳಕೆ ಆಗಬೇಕು. ಬರ ನಿರ್ವಹಣೆ ವಿಷಯದಲ್ಲಿ ಅಧಿಕಾರಿಗಳು, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕೆಂದು  ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಎಸ್.ಪಟ್ಟಣಶೆಟ್ಟಿ ಹೇಳಿದರು.
 
ಜಿಲ್ಲಾಧಿಕಾರಿ ಕಚೇರಿ ಸಭಾಭವನ ದಲ್ಲಿ ಶುಕ್ರವಾರ ನಡೆದ ಬರ ನಿರ್ವಹಣೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿ ಶೀಲನಾ ಸಭೆಯಲ್ಲಿ ಅವರು ಅಧಿಕಾರಿ ಗಳ ನಿಷ್ಕ್ರೀಯತೆ ಬಗ್ಗೆ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದರು. 
 
ತಾಲ್ಲೂಕಿನ ಹರ್ತಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕುಡಿ ಯುವ ನೀರಿನ ಕಾಮಗಾರಿ  ಪೈಪ್‌ಲೈನ್‌ ಅಳವಡಿಕೆ ಕೆಲಸ ಕೆಲಸವನ್ನು ಅಸಮ ರ್ಪಕವಾಗಿ ಮಾಡಿದ್ದನ್ನು ಕಣ್ಣಾರೆ ಕಂಡಿ ದ್ದೇನೆ. ಅನವಶ್ಯಕವಾಗಿ ನೀರು ಪೋಲಾ ಗುತ್ತಿದೆ. ಇದೆಲ್ಲವೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೆಂದರೆ ಹೇಗೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
 
ಗ್ರಾಮಿಣ ನೀರು ನೈರ್ಮಲ್ಯ ವಿಭಾ ಗದ  ಕಾರ್ಯನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ  ಉಸ್ತುವಾರಿ ಕಾರ್ಯದರ್ಶಿಗಳು,  ಗ್ರಾಮಿಣಾಭಿವೃದ್ಧಿ ಇಲಾಖೆಯಿಂದ ತಂಡ  ಕಳುಹಿಸಿ ಎಲ್ಲ ಕಾಮಗಾರಿಗಳ  ಪರಿಶೀಲನೆ ನಡೆಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವಂತೆ  ಸೂಚನೆ ನೀಡಿದರು. 
 
ಕಳಪೆ ಕಾಮಗಾರಿಗಳಿಗೆ ಅಧಿಕಾರಿ ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಅಂತಹ ಗುತ್ತಿಗೆದಾರರ ಬಿಲ್‌ ತಡೆಹಿಡಿಯಲಾಗುವುದು. ಬಿಡುಗಡೆ ಯಾದ ಅನುದಾನದಲ್ಲಿ ಕಾಮಗಾರಿಗಳು ಪೂರ್ಣಗೊಂಡ ಪ್ರಕರಣಗಳಲ್ಲಿ  ಹಣ ವೆಚ್ಚವಾಗದೇ ಉಳಿದಲ್ಲಿ,  ಒಂದು ವಾರ ದೊಳಗೆ ಬಿಲ್ಲು ಸಲ್ಲಿಕೆಯಾಗದಿದ್ದಲ್ಲಿ ಅದನ್ನು ಉಳಿತಾಯವೆಂದು ಪರಿಗಣಿಸಿ, ಅಂತ್ಯಗೊಳಿಸಬೇಕು ಎಂದು ಸೂಚನೆ ನೀಡಿದರು.  
 
ಗ್ರಾಮೀಣ ಕುಡಿಯುವ ನೀರು, ಬರ ನಿರ್ವಹಣೆ ಕಾಮಗಾರಿಯಡಿ  ತುರ್ತು ಕುಡಿಯುವ ನೀರು ಯೋಜನೆಗಳಿಗೆ  ಜಿಲ್ಲಾ ಆಡಳಿತಕ್ಕೆ  ₹ 2.50 ಕೋಟಿ ಒದಗಿಸಲಾಗಿದ್ದು ₹ 2.38 ಕೋಟಿ ಮೊತ್ತದಲ್ಲಿ ಎಲ್ಲ 78 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.  

ಗದಗ ತಾಲ್ಲೂಕಿನಲ್ಲಿ 11, ಮುಂಡರಗಿಯಲ್ಲಿ 10,  ನರಗುಂದದಲ್ಲಿ 20, ರೋಣದಲ್ಲಿ 21 ಹಾಗೂ ಶಿರಹಟ್ಟಿ ಯಲ್ಲಿ  15 ಕಾಮಗಾರಿಗಳು ಪೂರ್ಣ ಗೊಳಿಸಲಾಗಿದೆ. ಟಾಸ್ಕ್ ಫೋರ್ಸ ಯೋಜನೆಯಡಿ 2016–17ರ   ಸಾಲಿಗೆ ₹ 2 ಕೋಟಿ ಅನುದಾನದಲ್ಲಿ  ಗುರಿ ಇದ್ದ 84 ಕಾಮಗಾರಿಗಳನ್ನು  ಪೂರ್ಣಗೊಳಿಸಲಾಗಿದ್ದು ₹ 1.42 ಕೋಟಿ ವೆಚ್ಚ ಮಾಡಲಾಗಿದೆ.  
 
ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆ ಎದುರಿಸಬಹುದಾದ 104 ಹಳ್ಳಿ ಗಳನ್ನು ಗುರ್ತಿಸಲಾಗಿದ್ದು ಪರಿಹಾರ ಕ್ರಮ ಗಳನ್ನು ಕೈಗೊಳ್ಳಲು ಸೂಚಿಸಲಾಗಿದ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.
 
ಗದಗ  ಬೆಟಗೇರಿ  ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕಾಮಗಾರಿ ಶೇ 98ರಷ್ಟು ಪೂರ್ಣಗೊಂಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸಲಾಗುವುದೆಂದು ನಗರಸಭೆ  ಆಯುಕ್ತ  ಮನ್ಸೂರ ಅಲಿ ತಿಳಿಸಿದರು.
 
ಮಲಪ್ರಭಾ ಕಾಲುವೆ; ಡಿಸಿ ಮನವಿ 
ಮಲಪ್ರಭಾ ಕಾಲುವೆಯಿಂದ ನೀರು ಬಿಡುವಾಗ, ಪ್ರಮಾಣ ಹೆಚ್ಚಾದಾಗಲೆಲ್ಲಾ ಕಾಲುವೆ ಒಡೆಯುತ್ತಿರುವ ಹಿನ್ನೆಲೆಯಲ್ಲಿ, ಕಾಲುವೆಗೆ ನಿಗದಿತ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲು ಹಾಗೂ  ಭದ್ರಾ ಅಣೆಕಟ್ಟಿನಿಂದ  ನೀರು ಬಿಡು ಗಡೆಗೆ ಮಾಡಲು ಸೂಕ್ತ ಕ್ರಮ ಜರುಗಿ ಸಲು ಉಸ್ತುವಾರಿ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ  ಮನೋಜ ಜೈನ್   ಮನವಿ ಮಾಡಿದರು.
 
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ತುರ್ತು ಕುಡಿಯುವ ನೀರಿನ  ಸಮಸ್ಯೆ ಪರಿಹಾರ ಕ್ಕಾಗಿ ₹ 4.70 ಕೋಟಿ ಅನುದಾನ ನೀಡಲಾಗಿದ್ದು 303 ಕಾಮಗಾರಿಗಳಪೈಕಿ 282 ಕಾಮಗಾರಿಗಳು ಪೂರ್ಣಗೊಂಡಿದ್ದು ₹ 3.99 ಕೋಟಿ  ವೆಚ್ಚವಾಗಿದೆ ಎಂದು ಅವರು ಹೇಳಿದರು. 
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.