ADVERTISEMENT

ಆಕರ್ಷಣೆ ಹೆಚ್ಚಿಸಿಕೊಂಡ ತೋಟಗಾರಿಕೆ

ಎಸ್‌ಎಸ್‌ಎಲ್‌ಸಿ, ಪಿಯುಸಿ ಪೂರ್ಣಗೊಳಿಸಿದವರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಮೇ 2018, 11:24 IST
Last Updated 22 ಮೇ 2018, 11:24 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಗದಗ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣರಾಗಿ ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಲು ಆಸಕ್ತಿ ಹೊಂದಿರುವ ಯುವಕರಿಗಾಗಿ, ವಿಶೇಷವಾಗಿ ರೈತರ ಮಕ್ಕಳಿಗಾಗಿ ತೋಟಗಾರಿಕೆ ತರಬೇತಿ ಪಡೆಯಲು ಜಿಲ್ಲೆಯಲ್ಲಿ ಅವಕಾಶ ಇದೆ.

ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪುಷ್ಪೋದ್ಯಮ, ತರಕಾರಿ, ಹಣ್ಣುಗಳ ಬೆಳೆಗಳನ್ನು ಬೆಳೆಯಲು ಆ ಮೂಲಕ ಸ್ಥಳೀಯ ಮಟ್ಟದಲ್ಲೇ ಆರ್ಥಿಕ ಸ್ವಾವಲಂಬನೆ ಸಾಧಿಸಲು ಈ ತರಬೇತಿ ನೆರವಾಗುತ್ತದೆ. ತೋಟಗಾರಿಕೆ ಇಲಾಖೆಯು ರೈತರ ಮಕ್ಕಳಿಗಾಗಿ ಈ ತರಬೇತಿಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಿದೆ.

ತೋಟಗಾರಿಕೆ ಕುರಿತು ಪ್ರಾಥಮಿಕ ಹಂತದ ಮಾಹಿತಿ ನೀಡುವ ತರಬೇತಿ ಇದಾಗಿದೆ. ತರಬೇತಿ ಅವಧಿ 10 ತಿಂಗಳು. ಜೂನ್‌1ರಿಂದ 2019ರ ಮಾರ್ಚ್ 30ರವರೆಗೆ ತರಬೇತಿ ನಡೆಯಲಿದೆ.

ADVERTISEMENT

ಕನಿಷ್ಠ ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. 18ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ತರಬೇತಿಗೆ ಅರ್ಹರು. ಮೇ 24ರೊಳಗೆ ಅರ್ಜಿ ಸಲ್ಲಿಸಬಹುದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಅಭ್ಯರ್ಥಿಯ ತಂದೆ, ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಮೆರಿಟ್‌, ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾದವರಿಗೆ ಮಾಸಿಕ ಶಿಷ್ಯವೇತನವೂ ಲಭಿಸುತ್ತದೆ.

ಅವಕಾಶದ ಕ್ಷೇತ್ರ: ತರಬೇತಿ ಪೂರ್ಣಗೊಳಿಸಿದವರು ಸ್ವಂತ ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳ
ಬಹುದು. ಹೊಸ ಮಾದರಿಯ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆದುಕೊಳ್ಳಬಹುದು. ತೋಟಗಾರಿಕೆ ಸಹಾಯಕರ ಹುದ್ದೆಗೆ ಕೆಪಿಎಸ್‌ಸಿಯಿಂದ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗವೂ ದೊರೆಯುತ್ತದೆ. ಉದ್ಯಾನಗಳಲ್ಲಿ ನಿರ್ವಾಹಕರಾಗಿಯೂ ಕಾರ್ಯನಿರ್ವಹಿಸಬಹುದು. ಸ್ವಂತ ಜಮೀನಿನಲ್ಲೇ ಲಾಭದಾಯಕ ಪುಷ್ಪ, ಹಣ್ಣುಗಳ ಕೃಷಿ ಮಾಡಬಹುದು.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ವೆಬ್‌ಸೈಟ್‌–www.horticulture.kar.nic.in ನೋಡಬಹುದು. ಅಥವಾ ಜಿಲ್ಲೆಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಸಂದರ್ಶನ 26ಕ್ಕೆ

ಗದುಗಿನ ಭೀಷ್ಮ ಕೆರೆ ಹತ್ತಿರವಿರುವ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಮೇ 26 ರಂದು ಬೆಳಿಗ್ಗೆ 11ಕ್ಕೆ ಈ ತರಬೇತಿಗಾಗಿ ಅಭ್ಯರ್ಥಿಗಳ ಸಂದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.